ರಾಮಮಂದಿರ ಉದ್ಘಾಟನೆಗೆ ವಿರೋಧ ಆರೋಪಕ್ಕೆ ಹರಿಹರಪುರ ಶಂಕರಾಚಾರ್ಯರ ಪೀಠ ಸ್ವಾಮೀಜಿ ಕೊಟ್ಟರು ಸ್ಪಷ್ಟನೆ

| Updated By: ವಿವೇಕ ಬಿರಾದಾರ

Updated on: Jan 15, 2024 | 10:02 AM

ಇದೇ ತಿಂಗಳ 22 ರಂದು ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ಕಾರ್ಯ ಇದೆ. ರಾಮಮಂದಿರ ಲೋಕಾರ್ಪಣೆಗೆ ಶಂಕರಗುರು ಪರಂಪರೆಯ ಮಠಗಳಿಗೆ ಅಸಮಾಧಾನವಿದೆ ಎಂಬ ವದಂತಿಗಳು ಕೇಳಿ ಬರುತ್ತಿವೆ. ಇದಕ್ಕೆ ನಾವು ಸ್ಪಷ್ಟನೆಯನ್ನ ನೀಡುತ್ತಿದ್ದೇವೆ ಎಂದು ಹರಿಹರಪುರ ಮಠದ ಶ್ರೀ ಶಂಕರಾಚಾರ್ಯ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮಿಜಿ ಹೇಳಿದರು.

ರಾಮಮಂದಿರ ಉದ್ಘಾಟನೆಗೆ ವಿರೋಧ ಆರೋಪಕ್ಕೆ ಹರಿಹರಪುರ ಶಂಕರಾಚಾರ್ಯರ ಪೀಠ ಸ್ವಾಮೀಜಿ ಕೊಟ್ಟರು ಸ್ಪಷ್ಟನೆ
ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಜಿ
Follow us on

ಚಿಕ್ಕಮಗಳೂರು, ಜನವರಿ 12: ಶಂಕರಾಚಾರ್ಯರ ನಾಲ್ಕು ಪೀಠಗಳಿಂದ (Shankaracharya Peeta) ರಾಮಮಂದಿರ (Ram Mandir) ಲೋಕಾರ್ಪಣೆಗೆ ವಿರೋಧ ವ್ಯಕ್ತವಾಗಿದೆ ಎಂಬ ವಿಚಾರಕ್ಕೆ ಹರಿಹರಪುರ (Hariharpur) ಮಠದ ಶ್ರೀ ಶಂಕರಾಚಾರ್ಯ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮಿಜಿ ಸ್ಪಷ್ಟನೆ ನೀಡಿದ್ದಾರೆ. ಇದೇ ತಿಂಗಳ 22 ರಂದು ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ಕಾರ್ಯ ಇದೆ. ಈ ಶುಭ ಸಂದರ್ಭದಲ್ಲಿ ನಾವೆಲ್ಲರೂ ಇದ್ದೇವೆ. ಶಂಕರಗುರು ಪರಂಪರೆಯ ಮಠಗಳಿಗೆ ಅಸಮಾಧಾನವಿದೆ ಎಂಬ ವದಂತಿಗಳು ಕೇಳಿ ಬರುತ್ತಿವೆ. ಇದಕ್ಕೆ ನಾವು ಸ್ಪಷ್ಟನೆಯನ್ನು ನೀಡುತ್ತಿದ್ದೇವೆ ಎಂದು ಹೇಳಿದರು.

ಶಂಕರ ಗುರುಪರಂಪರೆಗೂ ಮತ್ತು ಅಯೋಧ್ಯೆ ರಾಮಮಂದಿರಕ್ಕೂ ಏನು ಸಂಬಂಧ? ಇದನ್ನ ತಿಳಿದುಕೊಳ್ಳುವ ಮೊದಲು, ಭಗವಾನ್ ಶ್ರೀರಾಮನಿಗೂ ಶಂಕರ ಪರಂಪರೆಗೂ ಏನು ಸಂಬಂಧ ಎಂದು ತಿಳಿದುಕೊಳ್ಳಬೇಕು. ಶಂಕರ ಗುರುಪರಂಪರೆಯ ಆದಿಪುರುಷರು ಶಂಕರರು. ಅದ್ವೈತ ಸಿದ್ದಾಂತದ ಮೂಲಕ ಪರಮಾತ್ಮನನ್ನು ತತ್ವ ರೂಪದಲ್ಲಿ ಆರಾಧಿಸುವ ಪದ್ಧತಿಯನ್ನು ಜಗತ್ತಿಗೆ ತಿಳಿಸಿದ್ದಾರೆ. ಹರಿಹರ ಪರಬ್ರಹ್ಮನ ಅತ್ಯಂತ ಸಮಾನವಾದ ರೂಪಗಳು. ಹರಿಹರನನ್ನ ಶ್ರದ್ಧಾ ಭಕ್ತಿಯಯಿಂದ ಆರಾಧಿಸುವ ಪರಂಪರೆ ಶಂಕರ ಪರಂಪರೆ ಎಂದರು.

ಹರಿ ಅಂದರೇ ಮಹಾವಿಷ್ಣು, ವಿಷ್ಣುವಿನ 7ನೇ ಅವತಾರವೇ ಶ್ರೀರಾಮ. ಶಂಕರರು ಶ್ರೀ ರಾಮನ ಪರಮ ಭಕ್ತರಾಗಿದ್ದರು. ಶಂಕರರು ರಾಮನ ಬಗ್ಗೆ ಸ್ತೋತ್ರಗಳನ್ನ ರಚಿಸಿ ಶ್ರೀರಾಮನಿಗೆ ಸಮರ್ಪಣೆ ಮಾಡಿದ್ದಾರೆ. ಶಂಕರರು ಸ್ಥಾಪಿಸಿದ ಪೀಠಗಳಲ್ಲಿ ಶ್ರೀರಾಮನನ್ನು ನಿರಂತರವಾಗಿ ಆರಾಧಿಸುವಂತೆ ಆದೇಶಿಸಿದ್ದಾರೆ. ಶಂಕರ ಪರಂಪರೆಯ ಎಲ್ಲಾ ಮಠಗಳು ಶ್ರೀರಾಮನನ್ನು ಆರಾಧಿಸಿಕೊಂಡು ಬರುತ್ತಿದ್ದಾರೆ. ಶ್ರೀರಾಮ ಮಂದಿರ ಅನ್ನೋದು ಎಲ್ಲಾ ಮಠಗಳಲ್ಲೂ ಇದೆ ಎಂದು ತಿಳಿಸಿದರು.

ಇದನ್ನೂ ಓದಿ: ರಾಮ ಮೂರ್ತಿ ಪ್ರತಿಷ್ಠಾಪನೆಗೆ ವಿರೋಧ: ಶೃಂಗೇರಿ ಭಾರತಿ ತೀರ್ಥ ಸ್ವಾಮೀಜಿ ಹೆಸರಿನಲ್ಲಿ ಅಪಪ್ರಚಾರ, ಇಲ್ಲಿದೆ ಸ್ಪಷ್ಟನೆ

ಶ್ರೀರಾಮ ಭಾರತೀಯ ಸಂಸ್ಕೃತಿಗೆ ಸೇರಿದ ದೇವರು. ನಮ್ಮ ದೇಶದ ಹೆಗ್ಗುರುತು ಭಗವಾನ್ ಶ್ರೀ ರಾಮ. ಈ ಪವಿತ್ರ ದೇಶದ ಅಸ್ಮಿತೆ. ಅಯೋಧ್ಯೆಯಲ್ಲಿ ಶ್ರೀ ರಾಮ‌ಚಂದ್ರ ಹುಟ್ಟಿದ್ದಾನೆ. ಅಯೋಧ್ಯಯಲ್ಲಿ ಶ್ರೀ ರಾಮಚಂದ್ರನ ದೇವಾಲಯ ಇತ್ತು. ಆದರೆ, ವಿದೇಶಿ ಆಕ್ರಮಣಕಾರರಿಂದ ನಾಶವಾಗಿತ್ತು. ಭಾರತೀಯರ 500 ವರ್ಷಗಳ ಹೋರಾಟದ ಫಲವಾಗಿ ಮಂದಿರ ನಿರ್ಮಾಣವಾಗುತ್ತಿದೆ. ಇದು ನಾವೆಲ್ಲರೂ ಹೆಮ್ಮೆ ಪಡುವ ವಿಚಾರ. ಶ್ರೀರಾಮನ ಲೋಕಾರ್ಪಣೆ ಎಂಬುದು ಸಮಸ್ತ ಭಾರತೀಯರ ಹೆಮ್ಮೆಯ ವಿಚಾರವಾಗಿದೆ ಎಂದು ಹೇಳಿದರು.

ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ವಿಚಾರ ಸಮಸ್ತ, ಮತ, ಧರ್ಮ ಜಾತಿ, ಮತ, ಪಂಥ, ಸಿದ್ಧಾಂತ ಎಲ್ಲರಲ್ಲೂ ಸಂತೋಷ ಮೂಡಿಸಿದೆ. ಗುರು ಪರಂಪರೆಗೂ ಅಸಮಾಧಾನವಿಲ್ಲ, ವಿಶೇಷವಾಗಿ ಶಂಕರ ಗುರು ಪರಂಪರೆಯ ಮಠಗಳಿಗೆ ಕಿಂಚಿತ್ತೂ ಬಿನ್ನಾಭಿಪ್ರಾಯವಿಲ್ಲ. ಒಂದು ವೇಳೆ ಯಾರಾದರೂ ಭಿನ್ನಾಭಿಪ್ರಾಯ ತಿಳಿಸಿದರೆ ಕೇವಲ ಅವರ ವೈಯುಕ್ತಿಕ ಅಭಿಪ್ರಾಯವಾಗಿರುತ್ತದೆ ಎಂದು ಹರಿಹರಪುರದ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀ ನರಸಿಂಹ ಪೀಠಂ, ಶ್ರೀಮಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳು ಸ್ಪಷ್ಟಪಡಿಸಿದರು.

ರಾಮಮಂದಿರ ಉದ್ಘಾಟನೆಗೆ ಶಂಕರಾಚಾರ್ಯ ಪೀಠ ವಿರೋಧ: ಕಾಂಗ್ರೆಸ್​

ಅಯೋಧ್ಯೆಯಲ್ಲಿ ನಿರ್ಮಾಣವಾಗಿರು ಭವ್ಯ ರಾಮಮಂದಿರ ಉದ್ಘಾಟನೆಗೆ ಶಂಕರಾಚಾರ್ಯರು ಸ್ಥಾಪಿಸಿರುವ ನಾಲ್ಕು ಪೀಠಗಳು ವಿರೋಧ ವ್ಯಕ್ತಪಡಿಸಿವೆ ಎಂದು ಕರ್ನಾಟಕದ ಕಾಂಗ್ರೆಸ್​ ನಾಯಕರು ಹೇಳಿಕೆ ನೀಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:10 am, Fri, 12 January 24