ಬಿಹಾರದ ಕಿಶನ್‌ಗಂಜ್ ಪ್ರದೇಶದಲ್ಲಿ ಸಾವನ್ನಪ್ಪಿದ ಚಿಕ್ಕಮಗಳೂರಿನ ಯೋಧ ಗಣೇಶ್

ಬಿಹಾರದ ಕಿಶನ್‌ಗಂಜ್ ಪ್ರದೇಶದಲ್ಲಿ ಚಿಕ್ಕಮಗಳೂರು ತಾಲೂಕಿನ ಮಸಿಗದ್ದೆ ನಿವಾಸಿ ಯೋಧ ಎಂ.ಎನ್ ಗಣೇಶ್ ಸಾವನ್ನಪ್ಪಿದ್ದಾರೆ ಎಂದು ಸೇನಾಧಿಕಾರಿಗಳು ಚಿಕ್ಕಮಗಳೂರು ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದ್ದಾರೆ.

ಬಿಹಾರದ ಕಿಶನ್‌ಗಂಜ್ ಪ್ರದೇಶದಲ್ಲಿ ಸಾವನ್ನಪ್ಪಿದ ಚಿಕ್ಕಮಗಳೂರಿನ ಯೋಧ ಗಣೇಶ್
ಮೃತ ಸೈನಿಕ ಎಂ.ಎನ್ ಗಣೇಶ್
Edited By:

Updated on: Jun 12, 2022 | 10:07 PM

ಚಿಕ್ಕಮಗಳೂರು: ಬಿಹಾರದ (Bihar) ಕಿಶನ್‌ಗಂಜ್ ಪ್ರದೇಶದಲ್ಲಿ ಚಿಕ್ಕಮಗಳೂರು (Chikkamagaluru) ತಾಲೂಕಿನ ಮಸಿಗದ್ದೆ ನಿವಾಸಿ ಯೋಧ (Soldier) ಎಂ.ಎನ್ ಗಣೇಶ್ (M.N Ganesh)  ಸಾವನ್ನಪ್ಪಿದ್ದಾರೆ ಎಂದು ಸೇನಾಧಿಕಾರಿಗಳು ಚಿಕ್ಕಮಗಳೂರು ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದ್ದಾರೆ. ಕಳೆದ ಏಪ್ರಿಲ್ 24ರಂದು ರಜೆ ಮೇಲೆ ಯೋಧ ಗಣೇಶ್ ಊರಿಗೆ ಬಂದಿದ್ದರು. ಮೊನ್ನೆ ಜೂನ್ 9ರಂದು ಗ್ರಾಮದಿಂದ ಯೋಧ ಗಣೇಶ್  ವೃತ್ತಿಗೆ ಹಾಜರಾಗಲು ತೆರಳಿದ್ದರು. ಕರ್ತವ್ಯಕ್ಕೆ ಹಾಜರಾಗುವ ಮುನ್ನವೇ ಯೋಧ ಸಾವನ್ನಪ್ಪಿದ್ದಾರೆ.  ಎರಡು ದಿನದಲ್ಲಿ ಸ್ವಗ್ರಾಮಕ್ಕೆ ಪಾರ್ಥಿವ ಶರೀರ ತರಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ಧಾರೆ.

Published On - 10:06 pm, Sun, 12 June 22