ಆರ್ಥಿಕವಾಗಿ ಶಕ್ತಿ ಇಲ್ಲ ಸರ್, ನಿಮ್ಮೊಂದಿಗೆ ನಾವಿದ್ದೇವೆ: ವೈಎಸ್​ವಿ ದತ್ತರಿಗೆ 101 ರೂ. ಹಣ ಕಳುಹಿಸಿದ ಅಭಿಮಾನಿ

|

Updated on: Mar 13, 2023 | 4:47 PM

ನಿಮ್ಮ ಬೆಂಬಲಕ್ಕೆ ನಾವು ಇದ್ದೇವೆ ಎಂದು ಹೇಳುವ ಮೂಲಕ ಕಡೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿರುವ ವೈ. ಎಸ್.ವಿ.ದತ್ತ ಅವರಿಗೆ ಓರ್ವ ಅಭಿಮಾನಿ 101 ರೂಪಾಯಿ ಹಣ ಕಳುಹಿಸಿದ್ದಾರೆ.

ಆರ್ಥಿಕವಾಗಿ ಶಕ್ತಿ ಇಲ್ಲ ಸರ್, ನಿಮ್ಮೊಂದಿಗೆ ನಾವಿದ್ದೇವೆ: ವೈಎಸ್​ವಿ ದತ್ತರಿಗೆ 101 ರೂ. ಹಣ ಕಳುಹಿಸಿದ ಅಭಿಮಾನಿ
ವೈ.ಎಸ್.ವಿ.ದತ್ತಾ
Image Credit source: deccanherald.com
Follow us on

ಚಿಕ್ಕಮಗಳೂರು: ಆರ್ಥಿಕವಾಗಿ ಶಕ್ತಿ ಇಲ್ಲ ಸರ್​. ನಿಮ್ಮ ಬೆಂಬಲಕ್ಕೆ ನಾವು ಇದ್ದೇವೆ ಎಂದು ಹೇಳುವ ಮೂಲಕ ಕಡೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿರುವ ವೈ. ಎಸ್.ವಿ.ದತ್ತ (YSV Datta) ಅವರಿಗೆ ಓರ್ವ ಅಭಿಮಾನಿ 101 ರೂಪಾಯಿ ಹಣ ಕಳುಹಿಸಲಾಗಿದೆ. ದತ್ತ ಅವರು ಈ ಮುಂಚೆ ಜಿಲ್ಲೆಯ ಜೆಡಿಎಸ್​​ನಿಂದ ಕಡೂರು ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು. ಕಡೂರಿನ ಗಿರಿಯಾಪುರ ಮೂಲದ ಪರಿಸರ ಪ್ರೇಮಿ ಜಿ.ಕೆ ಭಾರ್ಗೇಶಪ್ಪ ಎಂಬ ಅಭಿಮಾನಿ ಪತ್ರ ಬರೆದು ಅಂಚೆ ಮೂಲಕವಾಗಿ 101 ರೂಪಾಯಿ ಕಳುಹಿಸಿದ್ದಾರೆ. ಕ್ಷೇತ್ರದ ಮೇಲೆ ನಿಮಗಿರುವ ಪ್ರೀತಿ, ಅಭಿಮಾನ ಮತ್ತು ಅಭಿವೃದ್ಧಿಗೆ ನಾವು ಋಣಿ. ಬರುವ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಕೈ ಬಲ ಪಡಿಸಲು ನನ್ನ ಮತ್ತು ನನ್ನ ಪತ್ನಿಯ ಓಟಗಳು ನಿಮಗೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಜೆಡಿಎಸ್​ ತೊರೆದು ಕಾಂಗ್ರೆಸ್ ಸೇರ್ಪಡೆ

ಇತ್ತೀಚೆಗಷ್ಟೇ ಜೆಡಿಎಸ್​ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವ ಮಾಜಿ ಶಾಸಕ ​ವೈ. ಎಸ್.​ವಿ. ದತ್ತಾ ವಿರುದ್ಧ ಕೋರ್ಟ್, ಬಂಧನ ವಾರಂಟ್​ ಜಾರಿಗೊಳಿಸಿತ್ತು. ಸಿ.ಎಸ್.ಸೋಮೇಗೌಡ ಎನ್ನುವರು ದಾಖಲಿಸಿದ್ದ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ಕೋರ್ಟ್, ವೈಎಸ್​ವಿ ದತ್ತಾ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ. ಕೋರ್ಟ್​ಗೆ ಗೈರು ಹಾಜರಾದ ಹಿನ್ನೆಲೆಯಲ್ಲಿ 42ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶೆ ಜೆ.ಪ್ರೀತ್ ಅವರು ಮಾರ್ಚ್​ 27ಕ್ಕೆ ದತ್ತಾ ಅವರನ್ನು ಕೋರ್ಟ್​ಗೆ ಹಾಜರುಪಡಿಸುವಂತೆ ಬೆಂಗಳೂರು ಉತ್ತರ ಡಿಸಿಪಿಗೆ ಸೂಚನೆ ನೀಡಿತ್ತು.

ಇದನ್ನೂ ಓದಿ: ಮಾಜಿ ಶಾಸಕ ವೈಎಸ್‌ವಿ ದತ್ತಾ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದ ಕೋರ್ಟ್

ಉದ್ಯಮಿ ಸಿ.ಎಸ್.ಸೋಮೇಗೌಡಗೆ ದತ್ತಾ ನೀಡಿದ್ದ ಚೆಕ್ ಬೌನ್ಸ್ ಆಗಿತ್ತು. ಸಾಲ ಪಡೆದಿದ್ದ ದತ್ತಾ ಅದಕ್ಕೆ ಬದಲಾಗಿ ಚೆಕ್ ನೀಡಿದ್ದರು. ಆದರೆ ಅದು ಅನೂರ್ಜಿತವಾಗಿದ್ದು ದತ್ತಾ ವಿರುದ್ಧ ದೂರು ದಾಖಲಾಗಿತ್ತು. ಇದೀಗ ನ್ಯಾಯಾಲಯ ವಾರೆಂಟ್ ಜಾರಿ ಮಾಡಿರುವುದರಿಂದ ದತ್ತಾ ಕೋರ್ಟ್ ಗೆ ಹಾಜರಾಗುವುದು ಅನಿವಾರ್ಯವಾಗಿತ್ತು.

ಜೆಡಿಎಸ್ ವಕ್ತಾರರಾಗಿ ಕಾರ್ಯ ನಿರ್ವಹಿಸಿದ್ದ ದತ್ತಾ, ಜೆಡಿಎಸ್ ವರಿಷ್ಠ ದೇವೇಗೌಡರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಆದರೆ ಇತ್ತೀಚೆಗೆ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಕುಡೂರು ಕಾಂಗ್ರೆಸ್​ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ದತ್ತಾ ಸರಳ, ಸಜ್ಜನ ರಾಜಕಾರಣಿ ಎಂದೇ ಹೆಸರು ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ನಮ್ಮ ಯಾವ ಸಚಿವರೂ ಸಿಡಿ ಬೆದರಿಕೆಗೆ ತಲೆಕೆಡಿಕೊಳ್ಳುವುದಿಲ್ಲ ಎಂದ ಸಿಎಂ ಬೊಮ್ಮಾಯಿ

ಸಿದ್ಧರಾಮಯ್ಯಗೆ ತಾನು ಕೂಡಿಟ್ಟ ಹಣ ನೀಡಿದ ಬಾಲಕಿ  

ಇನ್ನು ಇತ್ತೀಚೆಗೆ ವಿಜಯಪುರ ಜಿಲ್ಲೆಯ ಸಿಂಧಗಿ ಪಟ್ಟಣದ 5ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಜಿಯಾ ತಾನು ಕೂಡಿಟ್ಟ ಹಣವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಚುನಾವಣಾ ಗೆಲುವಿಗಾಗಿ ನೀಡಿದ್ದಳು. ತನಗೆ ಪಾಕೆಟ್ ಮನಿ ರೂಪದಲ್ಲಿ ನೀಡಿದ್ದ ಹಣವನ್ನು ಕುಮಾರಿ ಜಿಯಾ ಕೂಡಿಟ್ಟಿದ್ದಳು. ಹೀಗೆ ಕೂಡಿಟ್ಟ 5 ಸಾವಿರ ರೂ. ಹಣವನ್ನು ಫೆ.11ರಂದು ವಿಜಯಪುರದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದ ವೇದಿಕೆಯಲ್ಲಿ ಕುದ್ದಾಗಿ ಚುನಾವಣಾ ಗೆಲುವಿಗಾಗಿ ಸಿದ್ದರಾಮಯ್ಯ ಅವರಿಗೆ ನೀಡಿದ್ದಳು. ಬಳಿಕ ಸಿದ್ದರಾಮಯ್ಯ ಹಣವನ್ನು ವಿದ್ಯಾರ್ಥಿನಿ ಜಿಯಾ ಮಣೂರಗೆ ವಾಪಸ್​ ನೀಡಿದ್ದಾರೆ. ನಿನ್ನ ವಿದ್ಯಾಭ್ಯಾಸಕ್ಕೆ ಹಣವನ್ನು ಉಪಯೋಗಿಸಿಕೊಳ್ಳು. ಚೆನ್ನಾಗಿ ಓದು ಎಂದು ಕಿವಿ ಮಾತು ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:45 pm, Mon, 13 March 23