ಬೆಂಗಳೂರು: ಈ ಹಿಂದೆ ಸರ್ಕಾರದ ನಿಯಮದ ಪ್ರಕಾರ ಹೆರಿಗೆಗೆ ಹೋಗುವ ಮಹಿಳೆಯರಿಗಷ್ಟೇ ರಜೆ ನೀಡಲಾಗುತ್ತಿತ್ತು. ಆದ್ರೆ ಈಗ ಕಾನೂನು ಬದಲಾಗಿದ್ದು, ಮಗುವನ್ನ ದತ್ತು ಪಡೆಯುವ ಸರ್ಕಾರಿ ಮಹಿಳಾ ನೌಕರರಿಗೂ ರಜೆ ಅನ್ವಯ ಆಗಲಿದೆ.
ಇನ್ಮುಂದೆ ಮಗುವನ್ನ ದತ್ತು ಪಡೆದ್ರೆ ಪಿತೃತ್ವ, ಮಾತೃತ್ವ ಯೋಜನೆಯಡಿ ಸರ್ಕಾರಿ ನೌಕರರಿಗೆ ಹೆರಿಗೆ ರಜೆ ನೀಡಲಾಗುತ್ತೆ. ಮಹಿಳೆಯರಿಗೆ 180 ದಿನ ಮಾತೃತ್ವ ರಜೆ ಹಾಗೂ ಪುರುಷರಿಗೆ ಪಿತೃತ್ವ ಯೋಜನೆಯಡಿ 15 ದಿನ ರಜೆ ಕೊಡಲಾಗುತ್ತೆ. ಮಗುವನ್ನ ದತ್ತು ಪಡೆದ ದಿನದಿಂದಲೇ ರಜೆ ಜಾರಿಯಲ್ಲಿರುತ್ತೆ. ಆದ್ರೆ, ಸರ್ಕಾರದ ನಿಯಮದ ಪ್ರಕಾರ ಈ ಯೋಜನೆ ಎರಡು ಮಕ್ಕಳು ಇರುವವರಿಗೆ ಮಾತ್ರ ಅನ್ವಯವಾಗಲಿದೆ. ಮೂರನೇ ಮಗುವನ್ನ ದತ್ತು ಪಡೆದ್ರೆ ರಜೆ ಅನ್ವಯವಾಗುವುದಿಲ್ಲ.
Published On - 12:51 pm, Wed, 19 February 20