ವೇದಾವತಿ ನದಿಯಲ್ಲಿ ಕಾಲು ಜಾರಿ ಬಿದ್ದು 2 ವರ್ಷದ ಮಗು ಸಾವು

| Updated By: ಆಯೇಷಾ ಬಾನು

Updated on: Jan 11, 2021 | 8:20 AM

ಹೊಸದುರ್ಗ ತಾಲೂಕಿನ ಕೆಲ್ಲೋಡು ಗ್ರಾಮದ ವೇದಾವತಿ ನದಿಯಲ್ಲಿ 2 ವರ್ಷದ ಮಗು (ನಿಸರ್ಗ) ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.

ವೇದಾವತಿ ನದಿಯಲ್ಲಿ ಕಾಲು ಜಾರಿ ಬಿದ್ದು 2 ವರ್ಷದ ಮಗು ಸಾವು
ವೇದಾವತಿ ನದಿ
Follow us on

ಚಿತ್ರದುರ್ಗ: ಹೊಸದುರ್ಗ ತಾಲೂಕಿನ ಕೆಲ್ಲೋಡು ಗ್ರಾಮದ ವೇದಾವತಿ ನದಿಯಲ್ಲಿ ದುರ್ಘಟನೆಯೊಂದು ಸಂಭವಿಸಿದೆ. ಬಹಿರ್ದೆಸೆಗೆಂದು ತೆರಳಿದ್ದ 2 ವರ್ಷದ ಮಗು (ನಿಸರ್ಗ) ವೇದಾವತಿ ನದಿಯಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.

ಅದೇ ವೇಳೆ, ಘಟನೆಯನ್ನು ನೋಡಿದ ನಿಸರ್ಗಳ ತಾಯಿ ರಾಧಿಕಾ(24) ಮಗುವನ್ನು ರಕ್ಷಿಸಲು ನದಿಗೆ ಹಾರಿದ್ದಾಳೆ. ಇದನ್ನು ನೋಡಿದ ಸುತ್ತಮುತ್ತಲಿನ ಜನ ತಾಯಿ ರಾಧಿಕಾಳನ್ನು ರಕ್ಷಿಸಿದ್ದಾರೆ. ಹೊಸದುರ್ಗ ತಾಲೂಕಿನ ಹೊಸತಿಮ್ಮಪ್ಪನ ಹಟ್ಟಿಯಲ್ಲಿ ಇಂತಹದೊಂದು ದುರ್ಘಟನೆ ನಡೆದಿದ್ದು ಪುಟ್ಟಕಂದಮ್ಮನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಶ್ರೀರಾಂಪುರ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ(ಜ.10) ಘಟನೆ ನಡೆದಿದೆ.

ಆಟವಾಡ್ತಿದ್ದ ವೇಳೆ.. ಲಿಫ್ಟ್ ಅಳವಡಿಸಲು ತೋಡಿದ್ದ ಗುಂಡಿಗೆ ಬಿದ್ದು 2 ವರ್ಷದ ಮಗು ಸಾವು