Loading video

ಚಿತ್ರದುರ್ಗದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆಯಾಟ: ಮಹತ್ತರ ಕೆಡಿಪಿ ಸಭೆಯನ್ನು ಮೊಬೈಲ್ ಫ್ಲ್ಯಾಶ್ ಲೈಟ್ ಬೆಳಕಲ್ಲಿ ನಡೆಸಿದ ಸಚಿವ ಡಿ ಸುಧಾಕರ್!  

|

Updated on: Nov 08, 2023 | 4:46 PM

ಇಲ್ಲಿ ಉದ್ಭವಿಸುವ ಸಮಸ್ಯೆ ಏನೆಂದರೆ, ಸಭೆ ನಡೆಯುತ್ತಿದ್ದ ಹಾಲ್ ನಲ್ಲಿ ಬೆಳಕಿಗಾಗಿ ಒಂದು ಪರ್ಯಾಯ ವ್ಯವಸ್ಥೆ ಇರಲಿಲ್ಲವೇ ಅನ್ನೋದು. ಕೆಡಿಪಿಯಂಥ ಮಹತ್ತರ ಸಭೆಯನ್ನು ಮೊಬೈಲ್ ಫ್ಲ್ಯಾಶ್ ಲೈಟ್ ಗಳಲ್ಲಿ ಮಾಡೋದಾ? ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದ್ದು ಅಂಡರ್ ಪರ್ಫಾರ್ಮಿಂಗ್ ಅಧಿಕಾರಿಗಳಿಗೆ ವರದಾನವಾಗಿ ಲಭ್ಯವಾಗಿರುತ್ತದೆ! ಸಚಿವರು ರೇಗಾಡೋದಾದ್ರೆ ರೇಗಾಡಲಿ ತಮ್ಮ ಮುಖವಂತೂ ಯಾರಿಗೂ ಕಾಣಲ್ಲ!! 

ಚಿತ್ರದುರ್ಗ: ಅಂಧೇರ ಛಾಯೆ ರಹೇ, ಕತ್ತಲೆ ಸಾಮ್ರಾಜ್ಯ, ಕತ್ತಲೆ ಭಾಗ್ಯ ಮೊದಲಾದ ಪದಗಳು ಈ ವಿಡಿಯೋ ನೋಡುವಾಗೆ ತಲೆಗೆ ಹೊಳೆಯದಿರಲಾರವು. ನಿಮಗೆ ನೆನಪಿರಬಹುದು, ಸಿದ್ದರಾಮಯ್ಯ (Siddaramaiah) ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ (2013-2018) ಹಲವು ಭಾಗ್ಯಗಳನ್ನು ಘೋಷಿಸಿದ್ದರು. ಒಮ್ಮೆ ವಿಧಾನಸಭಾ ಅಧಿವೇಶನ ನಡೆಯುತ್ತಿದ್ದಾಗ ಇದ್ದ್ದಕ್ಕಿದ್ದಂತೆ ವಿದ್ಯುತ್ ಪೂರೈಕೆ ಕಡಿತಗೊಂಡು ಸದನವನ್ನು ಕತ್ತಲೆ ಆವರಿಸಿತ್ತು. ಆಗ ಬಿಜೆಪಿ ಶಾಸಕ ಕೆಎಸ್ ಈಶ್ವರಪ್ಪ (KS EShwarappa), ‘ಕತ್ತಲೆ ಭಾಗ್ಯ!’ ಅಂತ ಜೋರಾಗಿ ಕೂಗಿದ್ದರು! ಅಂದಹಾಗೆ, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ (D Sudhakar) ಪ್ರಗತಿ ಪರಿಶೀಲನಾ ಸಭೆ ನಡೆಸುತ್ತಿದ್ದಾಗ ವಿದ್ಯುತ್ ಕಣ್ಣಾಮುಚ್ಚಾಲೆ ಆಟವಾಡಿತು. ರಾಜ್ಯದಲ್ಲಿ ಈ ವರ್ಷ ನೀರಿನ ಜೊತೆ ವಿದ್ಯುತ್ ಅಭಾವ ಸಹ ತಲೆದೋರಿದೆ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಹೇಳೋದನ್ನು ಕನ್ನಡಿಗರೆಲ್ಲ ಕೇಳಿದ್ದಾರೆ. ಚಿತ್ರದುರ್ಗದಲ್ಲಿ ಕೆಡಿಪಿ ಸಭೆಯಲ್ಲಿ ವಿದ್ಯುತ್ ಸಮಸ್ಯೆ ಆಗಿದ್ದು ಓಕೆ, ರಾಜ್ಯದೆಲ್ಲೆಡೆ ಹೀಗೆ ಅಗುತ್ತಿದೆ, ಪ್ರಶ್ನೆ ಅದಲ್ಲ; ಇಲ್ಲಿ ಉದ್ಭವಿಸುವ ಸಮಸ್ಯೆ ಏನೆಂದರೆ, ಸಭೆ ನಡೆಯುತ್ತಿದ್ದ ಹಾಲ್ ನಲ್ಲಿ ಬೆಳಕಿಗಾಗಿ ಒಂದು ಪರ್ಯಾಯ ವ್ಯವಸ್ಥೆ ಇರಲಿಲ್ಲವೇ ಅನ್ನೋದು. ಕೆಡಿಪಿಯಂಥ ಮಹತ್ತರ ಸಭೆಯನ್ನು ಮೊಬೈಲ್ ಫ್ಲ್ಯಾಶ್ ಲೈಟ್ ಗಳಲ್ಲಿ ಮಾಡೋದಾ? ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದ್ದು ಅಂಡರ್ ಪರ್ಫಾರ್ಮಿಂಗ್ ಅಧಿಕಾರಿಗಳಿಗೆ ವರದಾನವಾಗಿ ಲಭ್ಯವಾಗಿರುತ್ತದೆ! ಸಚಿವರು ರೇಗಾಡೋದಾದ್ರೆ ರೇಗಾಡಲಿ ತಮ್ಮ ಮುಖವಂತೂ ಯಾರಿಗೂ ಕಾಣಲ್ಲ!!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Published on: Nov 08, 2023 04:45 PM