ಮಂಡ್ಯ ಅಪಘಾತ: ಎಚ್ಚೆತ್ತುಕೊಂಡ ಅಧಿಕಾರಿಗಳು: ವಿಸಿ ನಾಲೆಗೆ ತಡೆಗೋಡೆ ನಿರ್ಮಿಸುವ ಕಾರ್ಯ ಆರಂಭ

Mandya News: ಮಂಡ್ಯದಲ್ಲಿ ಮತ್ತೊಂದು ಘನಘೋರ ದುರಂತ ನಡೆದಿದ್ದು, ವಿಸಿ ನಾಲೆಗೆ ಕಾರು ಪಲ್ಟಿಹೊಡೆದ ಪರಿಣಾಮ ಕಾರಿನಲ್ಲಿ ಇದ್ದ ಐವರು ಜಲಸಮಾಧಿಯಾಗಿದ್ದರು. ಘಟನೆ ಬಳಿಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಎಚ್ಚೆತ್ತುಗೊಂಡಿದ್ದು, ದುರ್ಘಟನೆ ನಡೆದ ಸ್ಥಳದಲ್ಲಿ ತಡೆಗೋಡೆ ನಿರ್ಮಿಸಲು ಮುಂದಾಗಿದ್ದಾರೆ.

ಮಂಡ್ಯ ಅಪಘಾತ: ಎಚ್ಚೆತ್ತುಕೊಂಡ ಅಧಿಕಾರಿಗಳು: ವಿಸಿ ನಾಲೆಗೆ ತಡೆಗೋಡೆ ನಿರ್ಮಿಸುವ ಕಾರ್ಯ ಆರಂಭ
ವಿ.ಸಿ.ನಾಲೆಗೆ ತಡೆಗೋಡೆ
Follow us
ಪ್ರಶಾಂತ್​ ಬಿ.
| Updated By: ಗಂಗಾಧರ​ ಬ. ಸಾಬೋಜಿ

Updated on:Nov 08, 2023 | 5:02 PM

ಮಂಡ್ಯ, ನವೆಂಬರ್​​​​​ 8: ಮಂಡ್ಯದಲ್ಲಿ ಮತ್ತೊಂದು ಘನಘೋರ ದುರಂತ ನಡೆದಿದ್ದು, ವಿಸಿ ನಾಲೆಗೆ (VC canal) ಕಾರು ಪಲ್ಟಿಹೊಡೆದ ಪರಿಣಾಮ ಕಾರಿನಲ್ಲಿ ಇದ್ದ ಐವರು ಜಲಸಮಾಧಿಯಾಗಿದ್ದರು. ಘಟನೆ ಬಳಿಕ ಅಧಿಕಾರಿಗಳು ಎಚ್ಚೆತ್ತುಗೊಂಡಿದ್ದು, ದುರ್ಘಟನೆ ನಡೆದ ಸ್ಥಳದಲ್ಲಿ ತಡೆಗೋಡೆ ನಿರ್ಮಿಸಲು ಮುಂದಾಗಿದ್ದಾರೆ. ಇಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಸ್ಥಳಕ್ಕೆ ಅಧಿಕಾರಿಗಳನ್ನ ಕರೆಸಿ ತಡೆಗೋಡೆ ನಿರ್ಮಿಸಲು ಸೂಚಿಸಿದ್ದಾರೆ. ಸದ್ಯ ತಡೆಗೋಡೆ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮುಂದಾಗಿದ್ದಾರೆ.

ಸ್ಥಳದಲ್ಲೇ ಖುದ್ದು ಹಾಜರಿದ್ದು ಅಧಿಕಾರಿಗಳು ಕೆಲಸ ಮಾಡಿಸುತ್ತಿದ್ದಾರೆ. ಜಿಲ್ಲೆಯ ಪಾಂಡವಪುರ ತಾಲೂಕಿನ ಬಳಘಟ್ಟ ಬಳಿಯ ವಿ.ಸಿ.ನಾಲೆಗೆ ತಡೆಗೋಡೆ ನಿರ್ಮಿಸುವ ಕಾರ್ಯ ಆರಂಭಿಸಿದ್ದಾರೆ. ತಡೆಗೋಡೆ ನಿರ್ಮಿಸುವ ಜೊತೆಗೆ ಹೆದ್ದಾರಿ ಪಕ್ಕದಲ್ಲಿದ್ದ ಗಿಡಗಂಟೆ ತೆರವುಗೊಳಿಸಿ ಗುಂಡಿ ಮುಚ್ಚುವ ಕಾರ್ಯ ಆರಂಭಿಸಿದ್ದಾರೆ.

ಇದನ್ನೂ ಓದಿ: ಮಂಡ್ಯ ಜಿಲ್ಲಾಡಳಿತ ನಿರ್ಲಕ್ಷ್ಯಕ್ಕೆ ಪ್ರಾಣತೆತ್ತ ಜನರು: ಕಳೆದ 5 ವರ್ಷದಲ್ಲಿ ವಿಸಿ ನಾಲಗೆ 40 ಮಂದಿ ಬಲಿ

ಜಿಲ್ಲೆಯ ಪಾಂಡವಪುರ ತಾಲೂಕಿನ ಬನಘಟ್ಟ ಬಳಿ ಈ ದುರ್ಘಟನೆ ಸಂಭವಿಸಿದ್ದು, ಘಟನೆಯಲ್ಲಿ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಕೈದಾಳ ಗ್ರಾಮದ ನಿವಾಸಿಗಳಾದ ಚಂದ್ರಪ್ಪ(61), ಕೃಷ್ಣಪ್ಪ(60), ಧನಂಜಯ (55), ಬಾಬು, ಜಯಣ್ಣ ದುರಂತವಾಗಿ ಸಾವನ್ನಪ್ಪಿದ್ದಾರೆ. ಅಂದಹಾಗೆ ಇಂಡಿಕಾ ಕಾರಿನಲ್ಲಿದ್ದ ಮೃತರು ನೆನ್ನೆ ಸಂಜೆ 4:45ರ ವೇಳೆಯಲ್ಲಿ ಮೈಸೂರುನಿಂದ ಕೈದಾಳ ಕಡೆಗೆ ಬೀಗರ ಔತಟಕೂಡ ಮುಗಿಸಕೊಂಡು ಪ್ರಯಾಣ ಬೆಳೆಸಿದ್ದರು.

ಬನಘಟ್ಟದ ವಿಸಿ ನಾಲೆ ಸೇತುವೆ ಬಳಿ ಬರ್ತಿದ್ದಂತೆ ನಿಯಂತ್ರಣ ತಪ್ಪಿದ ಕಾರು ನೇರವಾಗಿ ನಾಲೆಗೆ ಉರುಳಿ ಬಿದ್ದಿತ್ತು. ಕಿರಿದಾದ ರಸ್ತೆ ಹಾಗೂ ರಸ್ತೆ ತಿರುವಿದ್ದ ಕಾರಣ ಚಾಲಕ ಕೂಡ ಕಾರು ನಿಯಂತ್ರಿಸಲು ಸಾಧ್ಯವಾಗಿಲ್ಲ. ಅಲ್ಲದೇ KRS ಅಣೆಕಟ್ಟೆಯಿಂದ ನಾಲೆಗೆ ನೀರು ಬಿಟ್ಟಿರೋದ್ರಿಂದ ನಾಲೆಯಲ್ಲಿ ನೀರಿನ ಹರಿವು ಹೆಚ್ಚಾಗಿತ್ತು. ಪ್ರತ್ಯಕ್ಷದರ್ಶಿಗಳ ಮಾಹಿತಿ ಮೇರೆಗೆ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳೀಯ ಈಜುಗಾರರ ನೆರವಿನಿಂದ ಕ್ರೇನ್ ಮೂಲಕ ಕಾರು ಹೊರತೆಗೆದ್ದರು. ನಂತರ ಐದು ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗೆ ಪಾಂಡವಪುರ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು.

ಇದನ್ನೂ ಓದಿ: ಮಂಡ್ಯ: ವಿಸಿ ನಾಲೆಗೆ ಕಾರು ಪಲ್ಟಿ, ಐವರು ಜಲಸಮಾಧಿ

ಇಂದು ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆದು ಮೃತದೇಹಗಳನ್ನ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು. ಇನ್ನು ಈ ವೇಳೆ ಹೆಚ್ಚಿನ ಪರಿಹಾರಕ್ಕೆ ಕುಟುಂಬಸ್ಥರು ಕೂಡ ಪಟ್ಟು ಹಿಡಿದಿದ್ದರು.

ದುರ್ಘಟನೆ ನಡೆದ ಸ್ಥಳದಲ್ಲಿ ಮತ್ತೊಂದು ದುರಂತ ಇವತ್ತು ಸಂಭವಿಸಿದೆ. ಸೇತುವೆ ಮೇಲೆ ಹೋಗುತ್ತಿದ್ದ ಎತ್ತುಗಳು ಬೆದರಿ ಓಡಿ ಹೋಗಿದ್ದವು. ಘಟನೆ ನಂತರ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಇದೀಗ ತಡೆಗೋಡೆ ನಿರ್ಮಿಸಲು ಮುಂದಾಗುತ್ತಿದ್ದಾರೆ. ಒಟ್ಟಾರೆ ಪದೇ ಪದೇ ದುರ್ಘಟನೆಗಳು ನಡೆಯುತ್ತಿದ್ದು ಸಾರ್ವಜನಿಕರನ್ನ ಆತಂಕಕ್ಕೆ ಒಳಗಾಗುವಂತೆ ಮಾಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:00 pm, Wed, 8 November 23