Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಡ್ಯ: ವಿಸಿ ನಾಲೆಗೆ ಕಾರು ಪಲ್ಟಿ, ಐವರು ಜಲಸಮಾಧಿ

ವಿಸಿ ನಾಲೆಗೆ ಕಾರು ಪಲ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಜಲಸಮಾಧಿಯಾದ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಬನಘಟ್ಟ ಬಳಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಿವಾಸಿ ಚಂದ್ರಪ್ಪ ಎನ್ನುವವರಿಗೆ ಸೇರಿದ ಕಾರು ಇದಾಗಿದ್ದು, ಪಾಂಡವಪುರದಿಂದ ನಾಗಮಂಗಲಕ್ಕೆ ಹೋಗುವ ವೇಳೆ ರಸ್ತೆ ತಿರುವಿನಲ್ಲಿ ವೇಗವಾಗಿ ಬಂದು ಸೇತುವೆ ತಡೆಗೋಡೆಗೆ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ ಎನ್ನಲಾಗಿದೆ.

ಮಂಡ್ಯ: ವಿಸಿ ನಾಲೆಗೆ ಕಾರು ಪಲ್ಟಿ, ಐವರು ಜಲಸಮಾಧಿ
ಮಂಡ್ಯ
Follow us
ಪ್ರಶಾಂತ್​ ಬಿ.
| Updated By: ಕಿರಣ್ ಹನುಮಂತ್​ ಮಾದಾರ್

Updated on:Nov 07, 2023 | 10:54 PM

ಮಂಡ್ಯ, ನ.07: ವಿಸಿ ನಾಲೆಗೆ ಕಾರು ಪಲ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಜಲಸಮಾಧಿಯಾದ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ (Pandavapura) ತಾಲೂಕಿನ ಬನಘಟ್ಟ ಬಳಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಿವಾಸಿ ಚಂದ್ರಪ್ಪ ಎನ್ನುವವರಿಗೆ ಸೇರಿದ ಕಾರು ಇದಾಗಿದ್ದು, ಪಾಂಡವಪುರದಿಂದ ನಾಗಮಂಗಲಕ್ಕೆ ಹೋಗುವ ವೇಳೆ ರಸ್ತೆ ತಿರುವಿನಲ್ಲಿ ವೇಗವಾಗಿ ಬಂದು ಸೇತುವೆ ತಡೆಗೋಡೆಗೆ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ. ಈ ಘಟನೆ ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಘಟನಾ ಸ್ಥಳದಲ್ಲೇ ‌ಮೊಕ್ಕಾಂ ಹೂಡಿರುವ ಡಿಸಿ, ಎಸ್‌ಪಿ, ಸಿಇಒ ತನ್ವೀರ್

ಇನ್ನು ನಾಲೆಗೆ ಬಿದ್ದಿದ್ದ ಸ್ವಿಫ್ಟ್ ಕಾರನ್ನು ಪತ್ತೆ ಹಚ್ಚಿದ್ದ ಅಗ್ನಿಶಾಮಕ ದಳ ಸಿಬ್ಬಂದಿಗಳು, ಯಶಸ್ವಿಯಾಗಿ ಕ್ರೇನ್‌ ಮೂಲಕ ನಾಲೆಯಿಂದ ಮೇಲೆತ್ತಿದ್ದಾರೆ. ಮೃತದೇಹಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದ್ದು, ನೀರು ರಭಸವಾಗಿ ಹರಿಯುತ್ತಿರುವುದರಿಂದ ರಕ್ಷಣಾ ಕಾರ್ಯ ವಿಳಂಬವಾಗಿದೆ. ಜೊತೆಗೆ ಕಾರ್ಯಾಚರಣೆ ಹಿನ್ನೆಲೆ ನಾಲೆಗೆ KRS ಡ್ಯಾಂನಿಂದ ಬರುವ ನೀರನ್ನು ಬಿಡುಗಡೆ ಮಾಡದಂತೆ ಸ್ಥಗಿತ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಡಿಸಿ ಡಾ.ಕುಮಾರ್‌, ಎಸ್‌ಪಿ ಯತೀಶ್‌ ಭೇಟಿ ನೀಡಿದ್ದು, ಸ್ಥಳದಲ್ಲೇ ‌ಮೊಕ್ಕಾಂ ಹೂಡಿದ್ದಾರೆ.

ಇದನ್ನೂ ಓದಿ:Mandya News: ವಿಸಿ ನಾಲೆಗೆ ಬಿದ್ದ ಕಾರು; ನಾಪತ್ತೆಯಾಗಿದ್ದ ಚಾಲಕನ ಮೃತದೇಹ ಪತ್ತೆ

ಮೃತದೇಹಗಳು ಆಸ್ಪತ್ರೆಗೆ ರವಾನೆ

ಐವರ ಮೃತದೇಹ ಪತ್ತೆಯಾಗಿದ್ದು, ವಿಸಿ ನಾಲೆಯಿಂದ ಹೊರತೆಗೆದು, ತುಮಕೂರು ನಿವಾಸಿ ಕೆ.ಟಿ.ಕೃಷ್ಣಪ್ಪ(64), ಚಂದ್ರಪ್ಪ(61), ಧನಂಜಯ್ಯ (55), ಬಾಬು, ಜಯಣ್ಣ ಸೇರಿ ಐವರ ಮೃತದೇಹವನ್ನು ಪಾಂಡವಪುರ ತಾಲೂಕು ಸರ್ಕಾರಿ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗಿದೆ. ಇನ್ನು ಕುರಿತು ಮಾತನಾಡಿದ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ‘ ‘ಕಾರಿನಲ್ಲಿದ್ದ ಓರ್ವನ‌ ಮೊಬೈಲ್ ರಿಂಗ್ ಆಗುತ್ತಿತ್ತು. ಈಗಾಗಲೇ ಓರ್ವರ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ. ಐವರು ಬೇರೆ ಬೇರೆ ಕಡೆಯರಾಗಿದ್ದು, ತಿಪಟೂರು, ಚನ್ನರಾಯಪಟ್ಟಣ, ಭದ್ರಾವತಿ, ಶಿವಮೊಗ್ಗದವರು ಎನ್ನಲಾಗುತ್ತಿದೆ. ಇದರ ಜೊತೆಗೆ ಕಾರಿನಲ್ಲಿ ಊಟ, ಬಾಳೆ ಹಣ್ಣು ಕೂಡ ಪತ್ತೆಯಾಗಿದೆ. ಇನ್ನು ಘಟನೆಗೆ ಸೂಚನಾ ಫಲಕ, ತಡೆಗೋಡೆ ಇಲ್ಲದಿರುವುದು ಕಾರಣವಾಗಿದೆ. ತಡೆಗೋಡೆ ಮತ್ತು ಸೂಚನ ಫಲಕ ಅಳವಡಿಕೆಗೆ ಈಗಾಗಲೇ ತಾಕೀತು ಮಾಡಲಾಗಿದೆ. ಈ ಕುರಿತು ನಾಳೆ ಬೆಳಿಗ್ಗೆ 8 ಗಂಟೆಗೆ ಅಧಿಕಾರಿಗಳ ಸಭೆ ಕರೆದಿದ್ದೇನೆ. ಘಟನಾ ಸ್ಥಳದಲ್ಲಿಯೆ ಖುದ್ದು ಪರಿಶೀಲನೆ ನಡೆಸಿ ಪರಿಹಾರ ಕ್ರಮ ಕೈಗೊಳ್ಳುತ್ತೇವೆ ಎಂದರು.

2018ರಲ್ಲೂ ನಡೆದಿತ್ತು ಭೀಕರ ದುರಂತ

ಹೌದು, 2018 ನವೆಂಬರ್ ತಿಂಗಳಿನಲ್ಲಿ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೊಕಿನ ಕನಗನಮರಡಿಯ ವಿಸಿ ನಾಲೆಯಲ್ಲಿ ಬಸ್ ಅಪಘಾತಕ್ಕೆ ಒಳಗಾಗಿ 30ಜನ ಸಾವನ್ನಪಿದ್ದರು. ಇಂದಿನವರೆಗೂ ಆ ನಾಲೆಯಲ್ಲೇ ಅಪಘಾತಗಳು ಸಂಭವಿಸುತ್ತೆಲೆ ಇದೆ. ಅಷ್ಟೇ ಅಲ್ಲ, ಕಳೆದ ಮೂರು ತಿಂಗಳಲ್ಲಿ ವಿಸಿ ನಾಲೆಗೆ ಮೂರು ಕಾರುಗಳು ಉರುಳಿವೆ. ಜುಲೈ 27ರಂದು ಮಂಡ್ಯ ತಾಲೂಕಿನ ತಿಬ್ಬನಹಳ್ಳಿಯಲ್ಲಿ ವಿಸಿ ನಾಲೆಗೆ ಬಿದ್ದು, ಲೋಕೇಶ್ ಎಂಬಾತ ಸಾವನ್ನಪ್ಪಿದ್ದರೆ, ಜುಲೈ 29ರಂದು ಶ್ರೀರಂಗಪಟ್ಟಣದ ಗಾಮನಗಳ್ಳಿಯ ವಿಸಿ ನಾಲೆಗೆ ಉರುಳಿ ನಾಲ್ಕು ಜನರು ಕೊನೆಯುಸಿರೆಳೆದಿದ್ದರು. ಇಂದು ಪಾಂಡವಪುರ ಬನಘಟ್ಟದ ವಿಸಿ ನಾಲೆಯಲ್ಲಿ ಕಾರು ಬಿದ್ದು, ಐವರು ಸಾವನ್ನಪ್ಪಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:13 pm, Tue, 7 November 23