AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಡ್ಯದ ವಿಸಿ ನಾಲೆ ಬಳಿ ತಪ್ಪಿದ ಮತ್ತೊಂದು ದುರಂತ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಎದುರೇ ನಡೆದ ಘಟನೆ

ಪಾಂಡವಪುರ ತಾಲೂಕಿನ ಬನಘಟ್ಟದ ಬಳಿಯ ವಿಸಿ ನಾಲೆ ಬಳಿ ಶಾಸಕರು, ಅಧಿಕಾರಿಗಳು ಪರಿಶೀಲನೆ ನಡೆಸುವಾಗ ಅವಘಡವೊಂದು ನಡೆದಿದೆ. ವಿಸಿ ನಾಲೆ ಬಳಿಗೆ ಎತ್ತಿನ ಗಾಡಿಯೊಂದು ಎಂಟ್ರಿಕೊಟ್ಟಿದ್ದು ಹೆಚ್ಚಿನ ಸಂಖ್ಯೆಯಲ್ಲಿದ್ದ ಜನರನ್ನು ಕಂಡು ಎತ್ತುಗಳು ಗಾಬರಿಗೊಂಡಿವೆ. ಇದರಿಂದ ಎತ್ತಿನ ಗಾಡಿ ನಿಯಂತ್ರಣ ತಪ್ಪಿದ್ದು ದುರಂತ ತಪ್ಪಿಸಲು ರೈತ ಗಾಡಿಯಿಂದ ಎತ್ತುಗಳನ್ನು ಬೇರ್ಪಡಿಸಿದ್ದಾನೆ. ಎತ್ತುಗಳು ಓಡಿ ಹೋಗಿದ್ದು ಎತ್ತು ಹಿಡಿಯಲು ಹೋಗಿ ಅಧಿಕಾರಿ ಬಿದ್ದಿದ್ದಾರೆ.

ಮಂಡ್ಯದ ವಿಸಿ ನಾಲೆ ಬಳಿ ತಪ್ಪಿದ ಮತ್ತೊಂದು ದುರಂತ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಎದುರೇ ನಡೆದ ಘಟನೆ
ಅಧಿಕಾರಿಯನ್ನು ಬೀಳಿಸಿ ಓಡುತ್ತಿರುವ ಎತ್ತುಗಳು
TV9 Web
| Updated By: ಆಯೇಷಾ ಬಾನು|

Updated on:Nov 08, 2023 | 12:47 PM

Share

ಮಂಡ್ಯ, ನ.08: ವಿಸಿ ನಾಲೆಗೆ (VC Nala) ಕಾರು ಉರುಳಿ ಐವರ ಜಲಸಮಾಧಿ ಆದ ದುರಂತ ನಡೆದ ಸ್ಥಳದಲ್ಲೇ ಮತ್ತೊಂದು ಘಟನೆ ನಡೆದಿದೆ. ಶಾಸಕರ ಸ್ಥಳ ಪರಿಶೀಲನೆ ವೇಳೆ ಎತ್ತುಗಳು ಬೆದರಿದ್ದು ಭಾರೀ ಅವಘಡ ತಪ್ಪಿದೆ. ಅದೃಷ್ಟವಶಾತ್ ಯಾರಿಗೂ ಯಾವುದೇ ಸಮಸ್ಯೆ ಆಗಿಲ್ಲ. ವಿಸಿ ನಾಲೆ ಬಳಿ ಶಾಸಕ ದರ್ಶನ್ ಪುಟ್ಟಣ್ಣಯ್ಯ (Darshan Puttannaiah) ಅವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದರು. ಇದೇ ವೇಳೆ ಎತ್ತಿನ ಗಾಡಿಯೊಂದು ಬಂದಿದೆ.  ಎತ್ತುಗಳು ನಾಲೆ ಸೇತುವೆ ಬಳಿ ಬರುತ್ತಿದ್ದಂತೆ ಜನರನ್ನು ಕಂಡು ಬೆದರಿವೆ. ಆಗ ಎತ್ತಿನ ಗಾಡಿ ಓಡಿಸುತ್ತಿದ್ದ ರೈತ ಎತ್ತುಗಳನ್ನು ನಿಯಂತ್ರಿಸಲು ಹರಸಾಹಸ ಪಟ್ಟಿದ್ದು ಕೊನೆಗೆ ಗಾಡಿಯಿಂದ ಎತ್ತುಗಳನ್ನು ಬೇರ್ಪಡಿಸಲಾಯಿತು. ಈ ರೀತಿ ಭಾರೀ ಅವಘಡವೊಂದು ತಪ್ಪಿದೆ.

ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಬನಘಟ್ಟದ ಬಳಿ ಮಂಗಳವಾರ ಸಂಜೆ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ವಿಸಿ ನಾಲೆಗೆ ಬಿದಿದೆ. ಈ ಪರಿಣಾಮ ಮಗು ಸೇರಿ ಒಂದೇ ಕುಟುಂಬದ ಐವರು ಜಲಸಮಾಧಿಯಾಗಿದ್ದಾರೆ. ಈ ಘಟನೆ ಇಡೀ ಮಂಡ್ಯವನ್ನು ಆತಂಕಕ್ಕೆ ತಳ್ಳಿದೆ. ಈ ಬಗ್ಗೆ ಗಮನ ಹರಿಸುವಂತೆ ಸ್ಥಳೀಯರು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ಸದ್ಯ ಸ್ಥಳಕ್ಕೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು ಈ ವೇಳೆ ಪಾಂಡವಪುರ ಕಡೆಯಿಂದ ಬೇವಿನಕುಪ್ಪೆ ಕಡೆಗೆ ಬರುತ್ತಿದ್ದ ಎತ್ತಿನ ಗಾಡಿ ವಿಸಿ ನಾಲೆ ಸೇತುವೆ ಬಳಿ ಬಂದಿದೆ. ಸೇತುವೆ ಬಳಿ ಬರುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿರುವ ಜನರನ್ನು ಕಂಡು ಎತ್ತುಗಳು ಭಯಗೊಂಡವು. ಇನ್ನೇನು ಗಾಡಿ ಸಮೇತ ನಾಲೆಗೆ ಬೀಳುವಷ್ಟರಲ್ಲಿ ರೈತ ಸ್ವಾಮಿಗೌಡ ಅವರು ತಮ್ಮ ಎತ್ತುಗಳನ್ನು ನಿಯಂತ್ರಿಸಲು ಹರಸಾಹಸಪಟ್ಟರು.

ಇದನನ್ನೂ ಓದಿ: ವಿಸಿ ನಾಲೆ ಕಾರು ದುರಂತ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವೆಂದ ಮಾಜಿ ಸಚಿವ ಸಿಎಸ್ ಪುಟ್ಟರಾಜು

ಕಡೆಗೂ ಎತ್ತುಗಳನ್ನ ನಿಯಂತ್ರಿಸಲು ವಿಫಲವಾದರು. ಹೀಗಾಗಿ ಗಾಡಿಯಿಂದ ಎತ್ತುಗಳನ್ನು ಬಿಚ್ಚಿದ್ದು ಹಸುಗಳು ಅಷ್ಟೇ ವೇಗವಾಗಿ ಓಡಿದವು. ದರ್ಶನ್ ಪುಟ್ಟಣಯ್ಯ ಸಮೀಪವೇ ಬೆದರಿ ಓಡಿದವು. ಆಗ ಓಡಿ ಹೋಗ್ತಿದ್ದ ಹಸುಗಳನ್ನ ಹಿಡಿಯಲು ಹೋಗಿ ಅಧಿಕಾರಿಯೊಬ್ಬರು ರಸ್ತೆ ಮೇಲೆ ಬಿದ್ದರು. ಘಟನೆಯಿಂದಾಗಿ ಒಂದು ಕ್ಷಣ ಎಲ್ಲರೂ ವಿಚಲಿತರಾದರು.

2018ರ ನವೆಂಬರ್‌ನಿಂದ ಇಲ್ಲಿಯವರೆಗೆ 40 ಜನ ವಿಸಿ ನಾಲಗೆ ಮೃತಪಟ್ಟಿದ್ದಾರೆ. 2018 ನವೆಂಬರ್‌ 24 ರಂದು ಕನಗನಮರಡಿ ಬಸ್ ದುರಂತದಲ್ಲಿ 30 ಜನ ಸಾವಿಗೀಡಾಗಿದ್ದರು. 2023 ಜುಲೈ 27 ರಂದು ಮಂಡ್ಯ ತಾಲೂಕಿನ ತಿಬ್ಬನಹಳ್ಳಿಯಲ್ಲಿ ವಿಸಿ ನಾಲೆಗೆ ಕಾರು ಪಲ್ಟಿಯಾಗಿ ಓರ್ವ ಮೃತಪಟ್ಟಿದ್ದನು.

2023 ಜುಲೈ 29ರಂದು ಶ್ರೀರಂಗಪಟ್ಟಣದ ಗಾಮನಹಳ್ಳಿಯ ವಿಸಿ ನಾಲೆಗೆ ಕಾರು ಪಲ್ಟಿಯಾಗಿ ನಾಲ್ಕು ಮಂದಿ ಜಲ ಸಮಾಧಿಯಾಗಿದ್ದರು. 2023 ನವೆಂಬರ್ 7 ರಂದು ಪಾಂಡವಪುರ ತಾಲೂಕಿನ ಬನಘಟ್ಟ ವಿಸಿ ನಾಲೆಗೆ ಕಾರು ಪಲ್ಟಿಯಾಗಿ ಈ ದುರಂತದಲ್ಲಿ ಐದು ಜನ ನಿಧನರಾಗಿದ್ದಾರೆ. ಕಳೆದ ಐದು ವರ್ಷದಲ್ಲಿ ವಿಸಿ ನಾಲೆಯ ದುರಂತಗಳಲ್ಲಿ 40 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಮಂಡ್ಯ ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:21 pm, Wed, 8 November 23

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?