ಮಂಡ್ಯ ಜಿಲ್ಲಾಡಳಿತ ನಿರ್ಲಕ್ಷ್ಯಕ್ಕೆ ಪ್ರಾಣತೆತ್ತ ಜನರು: ಕಳೆದ 5 ವರ್ಷದಲ್ಲಿ ವಿಸಿ ನಾಲಗೆ 40 ಮಂದಿ ಬಲಿ

ತಡೆಗೋಡೆ ಹಾಗೂ ಅವೈಜ್ಞಾನಿಕ ತಿರುವುಗಳಿಂದ ವಿಸಿ ನಾಲೆಯ ದುರಂತಗಳು ಸಂಭವಿಸಿತ್ತಿವೆ. ವಿಸಿ ನಾಲೆಯ ಉದ್ದಕ್ಕೂ ತಡೆಗೋಡೆ ಅಳವಡಿಸಿಲ್ಲ. ತಡೆಗೋಡೆ ಇಲ್ಲದ ಕಾರಣ ವಾಹನಗಳು ನಾಲೆಗೆ ಬೀಳುತ್ತಿವೆ. ಇನ್ನು ಅವೈಜ್ಞಾನಿಕ ತಿರುವಿನ ಕಡೆ ನಾಮಫಲಕಗಳನ್ನು ಅಳವಡಿಸಿಲ್ಲ. ತಿರುವು ತಿಳಿಯದೆ ಚಾಲಕನ ನಿಯಂತ್ರಣ ತಪ್ಪಿ ವಾಹನಗಳು ನಾಲೆಗೆ ಉರುಳುತ್ತಿವೆ.

ಮಂಡ್ಯ ಜಿಲ್ಲಾಡಳಿತ ನಿರ್ಲಕ್ಷ್ಯಕ್ಕೆ ಪ್ರಾಣತೆತ್ತ ಜನರು: ಕಳೆದ 5 ವರ್ಷದಲ್ಲಿ ವಿಸಿ ನಾಲಗೆ 40 ಮಂದಿ ಬಲಿ
ವಿಸಿ ನಾಲೆ
Follow us
TV9 Web
| Updated By: ವಿವೇಕ ಬಿರಾದಾರ

Updated on:Nov 08, 2023 | 10:18 AM

ಮಂಡ್ಯ ನ.08: ಮಂಗಳವಾರ (ನ.07) ರಾತ್ರಿ ಪಾಂಡವಪುರ (Pandavapura) ತಾಲೂಕಿನ ಬನಘಟ್ಟ ಬಳಿಯ ವಿಸಿ ನಾಲೆಗೆ ಕಾರು ಪಲ್ಟಿಯಾಗಿ ಐವರು ಜಲಸಮಾಧಿಯಾಗಿದ್ದರು. ವಿಸಿ ನಾಲೆಗೆ (VC Canal) ವಾಹನಗಳು ಪಲ್ಟಿಯಾಗಿ ಮೃತರಾಗುತ್ತಿರುವ ಸಂಖ್ಯೆ ಏರುತ್ತಿದೆ. ಪ್ರತಿವರ್ಷ ಇಂತಹ ಘಟನೆ ನಡೆಯುತ್ತಿರುತ್ತವೆ. ಘಟನೆಯಲ್ಲಿ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಆದರೂ ಕೂಡ ಸರ್ಕಾರ ಎಚ್ಚೆತ್ತುಕೊಳ್ಳದೆ ಕಣ್ಮುಚ್ಚಿ ಕುಳಿತಿದೆ. ಪದೆ ಪದೇ ಅವಘಡ ಸಂಭವಿಸುತ್ತಿದ್ದರೂ ಜಿಲ್ಲಾಡಳಿತ ಕ್ಯಾರೆ ಎನ್ನುತ್ತಿಲ್ಲ. ಇದರಿಂದ ಸಾರ್ವಜನಿಕರು ಜಿಲ್ಲಾಡಳಿತದ ವಿರುದ್ಧ ಆಕ್ರೋಶಗೊಂಡಿದ್ದಾರೆ. ಹಾಗಾದರೆ ಯಾವ ಯಾವ ವರ್ಷ ಎಷ್ಟು ಅಪಘಾತ ಸಂಭವಿಸಿವೆ, ಎಷ್ಟು ಜನ ಮೃತಪಟ್ಟಿದ್ದಾರೆ? ಇಲ್ಲಿದೆ ಓದಿ….

2018ರ ನವೆಂಬರ್‌ನಿಂದ ಇಲ್ಲಿಯವರೆಗೆ 40 ಜನ ವಿಸಿ ನಾಲಗೆ ಮೃತಪಟ್ಟಿದ್ದಾರೆ. 2018 ನವೆಂಬರ್‌ 24 ರಂದು ಕನಗನಮರಡಿ ಬಸ್ ದುರಂತದಲ್ಲಿ 30 ಜನ ಸಾವಿಗೀಡಾಗಿದ್ದರು. 2023 ಜುಲೈ 27 ರಂದು ಮಂಡ್ಯ ತಾಲೂಕಿನ ತಿಬ್ಬನಹಳ್ಳಿಯಲ್ಲಿ ವಿಸಿ ನಾಲೆಗೆ ಕಾರು ಪಲ್ಟಿಯಾಗಿ ಓರ್ವ ಮೃತಪಟ್ಟಿದ್ದನು.

2023 ಜುಲೈ 29ರಂದು ಶ್ರೀರಂಗಪಟ್ಟಣದ ಗಾಮನಹಳ್ಳಿಯ ವಿಸಿ ನಾಲೆಗೆ ಕಾರು ಪಲ್ಟಿಯಾಗಿ ನಾಲ್ಕು ಮಂದಿ ಜಲ ಸಮಾಧಿಯಾಗಿದ್ದರು. 2023 ನವೆಂಬರ್ 7 ರಂದು ಪಾಂಡವಪುರ ತಾಲೂಕಿನ ಬನಘಟ್ಟ ವಿಸಿ ನಾಲೆಗೆ ಕಾರು ಪಲ್ಟಿಯಾಗಿ ಈ ದುರಂತದಲ್ಲಿ ಐದು ಜನ ನಿಧನರಾಗಿದ್ದಾರೆ. ಕಳೆದ ಐದು ವರ್ಷದಲ್ಲಿ ವಿಸಿ ನಾಲೆಯ ದುರಂತಗಳಲ್ಲಿ 40 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ: ಮಂಡ್ಯ: ವಿಸಿ ನಾಲೆಗೆ ಕಾರು ಪಲ್ಟಿ, ಐವರು ಜಲಸಮಾಧಿ

ತಡೆಗೋಡೆ ಹಾಗೂ ಅವೈಜ್ಞಾನಿಕ ತಿರುವುಗಳಿಂದ ವಿಸಿ ನಾಲೆಯ ದುರಂತಗಳು ಸಂಭವಿಸಿತ್ತಿವೆ. ವಿಸಿ ನಾಲೆಯ ಉದ್ದಕ್ಕೂ ತಡೆಗೋಡೆ ಅಳವಡಿಸಿಲ್ಲ. ತಡೆಗೋಡೆ ಇಲ್ಲದ ಕಾರಣ ವಾಹನಗಳು ನಾಲೆಗೆ ಬೀಳುತ್ತಿವೆ. ಇನ್ನು ಅವೈಜ್ಞಾನಿಕ ತಿರುವಿನ ಕಡೆ ನಾಮಫಲಕಗಳನ್ನು ಅಳವಡಿಸಿಲ್ಲ. ತಿರುವು ತಿಳಿಯದೆ ಚಾಲಕನ ನಿಯಂತ್ರಣ ತಪ್ಪಿ ವಾಹನಗಳು ನಾಲೆಗೆ ಉರುಳುತ್ತಿವೆ.

ಪ್ರತಿ ದುರಂತವಾದಾಗ ತಡೆಗೋಡೆ ನಿರ್ಮಾಣ ಮಾಡುವುದಾಗಿ ಜಿಲ್ಲಾಡಳಿತ ಹೇಳುತ್ತಿದೆ. ಇದುವರೆಗೆ ಬಹುಪಾಲು ಕಡೆ ತಡೆಗೋಡೆ ನಿರ್ಮಾಣ ಮಾಡಿಲ್ಲ. ಜಿಲ್ಲಾಡಳಿತ ನೆಪ ಮಾತ್ರಕ್ಕೆ ಅಪಘಾತ ಸ್ಥಳಗಳನ್ನು ಗುರುತಿಸಿದೆ. ಇದುವರೆಗೆ ಈ ಅಪಘಾತ ಸ್ಥಳಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ. ಜನರ ಪ್ರಾಣದ ಜೊತೆ ಜಿಲ್ಲಾಡಳಿತ ಚೆಲ್ಲಾಟವಾಡುತ್ತಿದ್ದು, ತಡೆಗೋಡೆ ನಿರ್ಮಾಣ ಮಾಡಲು ಇನ್ನೇಷ್ಟು ಬಲಿಬೇಕು? ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ದೊಡ್ಡ ದುರಂತಕ್ಕೆ ಪ್ರಾಧಿಕಾರ ಕಾರಣ: ಮಾಜಿ ಸಚಿವ ಸಿ‌ಎಸ್ ಪುಟ್ಟರಾಜು

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ  ಮೇಲೆ ಮರ್ಡರ್ ಕೇಸ್ ಹಾಕಬೇಕು. ದೊಡ್ಡ ದುರಂತಕ್ಕೆ ಪ್ರಾಧಿಕಾರ ಕಾರಣವಾಗಿದೆ. ನಾನು ಜಿಲ್ಲಾಡಳಿದ ಬಳಿ ಮಾತನಾಡಿದ್ದೇನೆ. ತಲಾ 10 ಲಕ್ಷ ರೂ. ಪರಿಹಾರ ಕೊಡಬೇಕು. ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೆಚ್ಚಿನ ಜವಬ್ದಾರಿ ಹೊರಬೇಕು. ಹೊಸ ಸರ್ಕಾರ ಜವಬ್ದಾರಿ ಹೊರಬೇಕು. ರಸ್ತೆ ತಿರುವಿನಲ್ಲಿ ಬ್ಯಾರಿಕೇಡ್ ಹಾಕಬೇಕು. ಘಟನೆಗೆ ರಾಷ್ಟ್ರೀಯ ಪ್ರಾಧಿಕಾರ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ. ರಸ್ತೆಗೆ ಇಳಿದು ಹೋರಾಟ ಮಾಡುತ್ತೇವೆ ಎಂದು ಮಾಜಿ ಸಚಿವ ಸಿ‌ಎಸ್ ಪುಟ್ಟರಾಜು ಎಚ್ಚರಿಕೆ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:08 am, Wed, 8 November 23

ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ