ಊರ ಜಾತ್ರೆ ಸಿದ್ಧತೆ ವೇಳೆ ಗಲಾಟೆ; ಪರಿಚಿತರಿಂದಲೇ ಯುವಕನ ಕೊಲೆ

ಊರ ಜಾತ್ರೆಗೆ ಸಿದ್ಧತೆ ನಡೆಸುವ ವೇಳೆ ಗಲಾಟೆ ನಡೆದು ಯುವಕನನ್ನು ಕೊಲೆ ಮಾಡಿದ ಘಟನೆ ಬೆಂಗಳೂರಿನ ಲಿಂಗರಾಜಪುರ (Lingarajapuram) ದ ಬಳಿ ನಡೆದಿದೆ. ಪ್ರವೀಣ್, ಮೃತ ರ್ದುದೈವಿ. ಪರಿಚಿತರಿಂದಲೇ ಈ ಕೃತ್ಯ ನಡೆದಿದ್ದು, ನಿನ್ನೆ(ನ.07) ರಾತ್ರಿ ಮದ್ಯದ ಅಮಲಿನಲ್ಲಿ ಪ್ರವೀಣ್, ಸುಂದರ್ ಮಧ್ಯೆ ಗಲಾಟೆ ಆಗಿ, ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ.

ಊರ ಜಾತ್ರೆ ಸಿದ್ಧತೆ ವೇಳೆ ಗಲಾಟೆ; ಪರಿಚಿತರಿಂದಲೇ ಯುವಕನ ಕೊಲೆ
ಮೃತ ವ್ಯಕ್ತಿ
Follow us
Prajwal Kumar NY
| Updated By: ಕಿರಣ್ ಹನುಮಂತ್​ ಮಾದಾರ್

Updated on:Nov 08, 2023 | 4:22 PM

ಬೆಂಗಳೂರು, ನ.08: ಊರ ಜಾತ್ರೆಗೆ ಸಿದ್ಧತೆ ನಡೆಸುವ ವೇಳೆ ಗಲಾಟೆ ನಡೆದು ಯುವಕನನ್ನು ಕೊಲೆ ಮಾಡಿದ ಘಟನೆ ಬೆಂಗಳೂರಿನ ಲಿಂಗರಾಜಪುರ (Lingarajapuram) ದ ಬಳಿ ನಡೆದಿದೆ. ಪ್ರವೀಣ್, ಮೃತ ರ್ದುದೈವಿ. ಪರಿಚಿತರಿಂದಲೇ ಈ ಕೃತ್ಯ ನಡೆದಿದ್ದು, ನಿನ್ನೆ(ನ.07) ರಾತ್ರಿ ಮದ್ಯದ ಅಮಲಿನಲ್ಲಿ ಪ್ರವೀಣ್, ಸುಂದರ್ ಮಧ್ಯೆ ಗಲಾಟೆ ನಡದಿದೆ. ಈ ವೇಳೆ ಪ್ರವೀಣ್ ಅಶ್ಲೀಲವಾಗಿ ಬೈದು ಸುಂದರ್‌ಗೆ ಹೊಡೆದಿದ್ದ. ಇದರಿಂದ ಕೋಪಗೊಂಡ ಸುಂದರ್​ ಕೂಡ ಹೆಲ್ಮೆಟ್‌ನಿಂದ ಪ್ರವೀಣ್‌ ಮೇಲೆ ಹಲ್ಲೆ ನಡೆಸಿದ್ದನು. ಇದರಿಂದ ತೀವ್ರ ಗಾಯಗೊಂಡಿದ್ದ ಪ್ರವೀಣ್​ನನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದಾನೆ. ಈ ಕುರಿತು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ವೈಯುಕ್ತಿಕ ದ್ವೇಷ ಹಿನ್ನಲೆ ಯುವಕನ ಕೊಲೆ

ಅರೋಪಿಗಳು ಮತ್ತು ಕೊಲೆಯಾದವನು ಎಲ್ಲರೂ ಪರಿಚಿತರು ಎನ್ನಲಾಗಿದೆ. ವೈಯುಕ್ತಿಕ ದ್ವೇಷ ಹಿನ್ನಲೆ ಈ ಕೃತ್ಯ ಎಸಗಲಾಗಿದೆಯಂತೆ. ಹೌದು, ಊರ ಜಾತ್ರೆ ಹಿನ್ನಲೆ ಲಿಂಗರಾಜಪುರ ಬಳಿ ಮೃತ ಪ್ರವೀಣ್​ ಡಿಜೆ ಬಾಕ್ಸ್​ಗಳನ್ನು ಹಾಕಲು ಹೋಗಿದ್ದ. ಈ ವೇಳೆ ಸುಂದರ್ ಹಾಗೂ ಅವನ ಗ್ಯಾಂಗ್ ಮರಾಕಾಸ್ತ್ರಳಿಂದ​ ಅಟ್ಯಾಕ್​ ಮಾಡಿ ಹಲ್ಲೆ ನಡೆಸಿದ್ದಾರೆ. ಈ ಕುರಿತು ಬಾಣಸ್ವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಇದನ್ನೂ ಓದಿ:ಹುಲಿವೇಷ ತಂಡದ ಮುಖ್ಯಸ್ಥ ಅಕ್ಷಯ್ ಕಲ್ಲೇಗನನ್ನು 58 ಬಾರಿ ಕೊಚ್ಚಿ ಕೊಲೆ: ಕಾಂಗ್ರೆಸ್​ ಮುಖಂಡ ಸೇರಿ ನಾಲ್ವರು ಪೊಲೀಸ್ ವಶಕ್ಕೆ

ಉಡುಪಿಯಲ್ಲಿ ಕುಡಿದ ಮತ್ತಿನಲ್ಲಿ ಕಿರಿಕ್​

ಉಡುಪಿ: ಕುಡಿದ ಮತ್ತಿನಲ್ಲಿ ಮದ್ಯವೆಸನಿಯೊಬ್ಬ ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳಿಗೆ ಡಿಕ್ಕಿ ಹೊಡೆದಿರುವ ಘಟನೆ ಉಡುಪಿ ನಗರದ ಸಿಟಿ ಬಸ್ ನಿಲ್ದಾಣ ಬಳಿ ನಡೆದಿದೆ. ಅಷ್ಟೇ ಅಲ್ಲದೆ, ಎರಡು ಕಾರು, ಒಂದು ಸ್ಕೂಟಿಯನ್ನು ನಜ್ಜುಗುಜ್ಜು ಮಾಡಿದ್ದಾನೆ. ಜೊತೆಗೆ ಸಾರ್ವಜನಿಕರ ಜೊತೆ ವಾಗ್ವಾದ ಜಟಾಪಟಿ ನಡೆಸಿದ ವೇಳೆ ಸ್ಥಳಕ್ಕಾಗಮಿಸಿದ ಟ್ರಾಫಿಕ್ ಪೊಲೀಸರ ಜೊತೆಯು ಕಿರಿಕ್ ಮಾಡಿಕೊಂಡಿದ್ದಾನೆ. ಬಳಿಕ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದು, ಟ್ರಾಫಿಕ್ ಪೊಲೀಸರಿಂದ ಡ್ರಂಕ್ ಆಂಡ್ ಡ್ರೈವ್ ಕೇಸ್ ದಾಖಲು ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:06 pm, Wed, 8 November 23