ಚಿತ್ರದುರ್ಗ: ಮುರುಘಾ ಮಠದದ ಅನುಭವ ಮಂಟಪದಲ್ಲಿ ಭಾನುವಾರ ಭಾರತೀಯ ಬಾಹ್ಯಾಕಾಶ ಸಂಸ್ಥೆಯ (ಇಸ್ರೋ) ಮಾಜಿ ಮುಖ್ಯಸ್ಥ, ಬಾಹ್ಯಾಕಾಶ ವಿಜ್ಞಾನಿ ಡಾ.ಕೆ.ಕಸ್ತೂರಿ ರಂಗನ್ ಅವರಿಗೆ ಬಸವಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮುರುಘಾ ಮಠದ ಶರಣ ಸಂಸ್ಕ್ರತಿ ಉತ್ಸವದಲ್ಲಿ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯು ₹ 5 ಲಕ್ಷ ಮೊತ್ತದ ಚೆಕ್, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಕಬೀರಾನಂದ ಆಶ್ರಮದ ಶಿವಲಿಂಗಾನಂದ ಶ್ರೀ, ಶಿವಶರಣ ಮಾದಾರ ಗುರುಪೀಠದ ಮಾದಾರಚನ್ನಯ್ಯ ಉಪಸ್ಥಿತರಿದ್ದರು.
ಕಸ್ತೂರಿ ರಂಗನ್ ಅವರು ಇಸ್ರೋ ಮುಖ್ಯಸ್ಥರಾಗಿ 9ಕ್ಕೂ ಹೆಚ್ಚು ವರ್ಷ ಸೇವೆ ಸಲ್ಲಿಸಿದ್ದರು. ಇಸ್ರೋ ಸಂಸ್ಥೆಯ ಹಲವು ಮಹತ್ವದ ಯೋಜನೆಗಳು ಕಾರ್ಯರೂಪಕ್ಕೆ ಬರಲು ಶ್ರಮಿಸಿದ್ದರು. 2003ರವರೆಗೆ ಸುಮಾರು 9 ವರ್ಷಗಳವರೆಗೆ ಇಸ್ರೋ ಮುಖ್ಯಸ್ಥರಾಗಿದ್ದರು. ನಂತರ ರಾಜ್ಯಸಭೆ ಸದಸ್ಯರಾಗಿದ್ದರು. ಯೋಜನಾ ಆಯೋಗದ ಸದಸ್ಯರಾಗಿಯೂ ಹಲವು ಯೋಜನೆಗಳನ್ನು ರೂಪಿಸಲು ಶ್ರಮಿಸಿದ್ದರು. ಭಾರತ ಸರ್ಕಾರದಿಂದ ಮೂರು ನಾಗರಿಕ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಪದ್ಮಶ್ರೀ (1982), ಪದ್ಮಭೂಷಣ (1992) ಮತ್ತು ಪದ್ಮವಿಭೂಷಣ (2000) ಪುರಸ್ಕಾರ ನೀಡಿ ಗೌರವಿಸಲಾಗಿದೆ.
ಇದನ್ನೂ ಓದಿ: ಅಕ್ಟೋಬರ್ 8ರಿಂದ 18ರವರೆಗೆ ಮುರುಘಾ ಮಠದಲ್ಲಿ ಶರಣ ಸಂಸ್ಕೃತಿ ಉತ್ಸವ
ಇದನ್ನೂ ಓದಿ: ಕಸ್ತೂರಿ ರಂಗನ್ ವರದಿ ನಿರ್ಲಕ್ಷಿಸಿ ದೊಡ್ಡ ಅಪಾಯವನ್ನೇ ಆಹ್ವಾನಿಸಿತಾ ಕರ್ನಾಟಕ.. ಒಳಸುಳಿ ಏನು?
Published On - 11:24 pm, Sun, 17 October 21