Chitradurga BESCOM Recruitment Scam: ನಕಲಿ ದಾಖಲೆ ಸೃಷ್ಟಿಸಿ ಅನುಕಂಪ ಆಧಾರದ ನೇಮಕಾತಿ, 8 ಆರೋಪಿಗಳ ಬಂಧನ

| Updated By: ಆಯೇಷಾ ಬಾನು

Updated on: Dec 21, 2022 | 7:46 AM

ಚಿತ್ರದುರ್ಗ ಕೋಟೆ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಅನುಕಂಪದ ಆಧಾರದಲ್ಲಿ ಹುದ್ದೆ ಪಡೆಯಲು ನಕಲಿ ದಾಖಲೆ ಸೃಷ್ಟಿ 6 ಜನ ಹುದ್ದೆ ಪಡೆದಿದ್ದ ಪ್ರಕರಣವನ್ನು ಬಯಲು ಮಾಡಿದ್ದಾರೆ.

Chitradurga BESCOM Recruitment Scam: ನಕಲಿ ದಾಖಲೆ ಸೃಷ್ಟಿಸಿ ಅನುಕಂಪ ಆಧಾರದ ನೇಮಕಾತಿ, 8 ಆರೋಪಿಗಳ ಬಂಧನ
ಬೆಸ್ಕಾಂ ಇಲಾಖೆ ಚಿತ್ರದುರ್ಗ
Follow us on

ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗದಲ್ಲಿ ನೇಮಕಾತಿ ಹಗರಣವೊಂದು ಬಯಲಾಗಿದೆ. ನಕಲಿ ದಾಖಲೆ ಸೃಷ್ಟಿಸಿ ಅನುಕಂಪ ಆಧಾರದ ಮೇಲೆ ಬೆಸ್ಕಾಂ ಇಲಾಖೆಯ ಹುದ್ದೆಗಳ ನೇಮಕಾತಿಯಲ್ಲಿ ಹಗರಣ(Chitradurga BESCOM Recruitment Scam) ನಡೆದಿರುವುದು ಬಯಲಾಗಿದೆ. ನಕಲಿ ದಾಖಲೆ ಸೃಷ್ಟಿಸಿ ಬೆಸ್ಕಾಂನಲ್ಲಿ ಉದ್ಯೋಗ ಪಡೆದಿದ್ದ ಆರೋಪದಡಿ ಬೆಸ್ಕಾಂ ಇಂಜಿನಿಯರ್ ಸೇರಿದಂತೆ 8 ಆರೋಪಿಗಳನ್ನು ಬಂಧಿಸಲಾಗಿದೆ. ಹಾಗೂ ಇಬ್ಬರು ನಾಪತ್ತೆಯಾಗಿದ್ದಾರೆ.

ಚಿತ್ರದುರ್ಗ ಕೋಟೆ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಅನುಕಂಪದ ಆಧಾರದಲ್ಲಿ ಹುದ್ದೆ ಪಡೆಯಲು ನಕಲಿ ದಾಖಲೆ ಸೃಷ್ಟಿ 6 ಜನ ಹುದ್ದೆ ಪಡೆದಿದ್ದ ಪ್ರಕರಣವನ್ನು ಬಯಲು ಮಾಡಿದ್ದಾರೆ. ಬೆಸ್ಕಾಂ ಹುದ್ದೆಗಾಗಿ 35ರಿಂದ40ಲಕ್ಷ ಹಣದ ವ್ಯವಹಾರ ನಡೆದಿದೆ. ಪ್ರಕರಣದ ಮಾಸ್ಟರ್ ಮೈಂಡ್ ಬೆಸ್ಕಾಂನ ಅಸಿಸ್ಟೆಂಟ್ ಆಡಿಟ್ ಆಫೀಸರ್ ಎಲ್‌.ರವಿ, ಅಸಿಸ್ಟೆಂಟ್ ಪ್ರೇಮ್ ಕುಮಾರ್, ಸೂಪರಿಂಟೆಂಡಿಂಗ್ ಇಂಜಿನಿಯರ್ ಶಾಂತಮಲ್ಲಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ನಕಲಿ ದಾಖಲೆ‌ ಸೃಷ್ಟಿಸಿ ಜೂನಿಯರ್ ಅಸಿಸ್ಟೆಂಟ್ ಹುದ್ದೆ ಪಡೆದಿದ್ದ ವಿರೇಶ್, ರಘು ಕಿರಣ್, ಹರೀಶ್, ಜೂನಿಯರ್ ಇಂಜಿನಿಯರ್ ಆಗಿದ್ದ ಶಿವಪ್ರಸಾದ್​ನನ್ನು ಬಂಧಿಸಲಾಗಿದೆ. ಆದ್ರೆ ನಕಲಿ ದಾಖಲೆ ಸೃಷ್ಟಿಸಿ ಹುದ್ದೆ ಪಡೆದಿದ್ದ ರಕ್ಷಿತ್‌ ಮತ್ತು ಕಾರ್ತಿಕ್ ನಾಪತ್ತೆಯಾಗಿದ್ದಾರೆ. ನಕಲಿ ದಾಖಲೆ ಸಲ್ಲಿಸಿದ್ದ ಫೈಜಾನ್ ಮುಜಾಹಿದ್ ಕೂಡ ಅರೆಸ್ಟ್ ಆಗಿದ್ದಾನೆ.

ಇದನ್ನೂ ಓದಿ: Techie Death: ಬೆಂಗಳೂರಿನಲ್ಲಿ ಕಾರಿನಲ್ಲೇ ಸಾಫ್ಟ್​ವೇರ್ ಎಂಜಿನಿಯರ್ ಆತ್ಮಹತ್ಯೆ

ಬೆಸ್ಕಾಂ ಎಇಇ ನಾಗರಾಜ್ ಈ ಬಗ್ಗೆ ಕೋಟೆ ಠಾಣೆಗೆ ದೂರು ನೀಡಿದ್ದರು. ಬೆಸ್ಕಾಂನಲ್ಲಿದ್ದ ಸಹೋದರ ಮಹಮ್ಮದ್ ಶೇಖ್ ಮೃತಪಟ್ಟಿದ್ದಾರೆಂದು ನಕಲಿ ದಾಖಲೆ ನೀಡಿದ್ದ ಫೈಜಾನ್ ಮುಜಾಹಿದ್ ದಾಖಲೆ ಪರಿಶೀಲಿಸಿ ಎಇಇ ನಾಗರಾಜ್ ದೂರು ನೀಡಿದ್ದರು. ದೂರು ಆಧರಿಸಿ ತನಿಖೆಗೆ ಇಳಿದ ಪೊಲೀಸರು ಪ್ರಕರಣ ಬಯಲು ಮಾಡಿದ್ದಾರೆ. ಕಳೆದ 2 ವರ್ಷದಲ್ಲಿ 6 ಜನ ನಕಲಿ ದಾಖಲೆ ಸೃಷ್ಟಿಸಿ ಬೆಸ್ಕಾಂನಲ್ಲಿ ಹುದ್ದೆ ಪಡೆದಿರುವುದು ಪತ್ತೆಯಾಗಿದೆ. ಅನುಕಂಪ ಆಧಾರಿತ ಹುದ್ದೆಗೆ ನಕಲಿ ದಾಖಲೆ ಸೃಷ್ಟಿಸಿ ವಂಚನೆ ನಡೆದಿದೆ. ಪ್ರಕರಣದಲ್ಲಿ ಬೆಸ್ಕಾಂ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಚಿತ್ರದುರ್ಗ ಎಸ್ಪಿ ಕೆ.ಪರಶುರಾಮ್ ಮಾಹಿತಿ ನೀಡಿದ್ದಾರೆ. ಕೋಟೆ ಠಾಣೆ ಪಿಐ ರಮೇಶ್ ರಾವ್ ನೇತೃತ್ವದಲ್ಲಿ ತನಿಖೆ ಮುಂದುವರೆದಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:46 am, Wed, 21 December 22