ತಾಳಿ ಕಟ್ಟಿಸಿಕೊಳ್ಳಲು ನಿರಾಕರಿಸಿದ ವಧು: ಮುರಿದುಬಿದ್ದ ಒಂದು ಮದ್ವೆ ಕಥೆ ಇಲ್ಲಿದೆ

| Updated By: ರಮೇಶ್ ಬಿ. ಜವಳಗೇರಾ

Updated on: Dec 08, 2023 | 2:52 PM

ಇನ್ನೇನು ತಾಳಿ ಕಟ್ಟುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಡುತ್ತೇನೆ ಎಂದು ಸಂತೋಷದಲ್ಲಿದ್ದ ವರನಿಗೆ ವಧು ಶಾಕ್ ಕೊಟ್ಟಿದ್ದಾಳೆ. ಹೌದು..ತಾಳಿ ಕಟ್ಟಲು ಕೊರಳೊಡ್ಡದೆ ನಿರಾಕರಿಸಿದ ವಧು ಆತನ ಮದುವೆಯ ಆಸೆಯನ್ನು ಭಗ್ನಗೊಳಿಸಿದ್ದಾಳೆ. ಈ ಘಟನೆ ಚಿತ್ರದುರ್ಗದ ಚಳ್ಳಕೆರೆ ತಾಲ್ಲೂಕಿನ ಚಿಕ್ಕಬ್ಯಾಲದಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ವರ ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲೇ ವಧು ಕೈ ಅಡ್ಡ ಹಿಡಿದು ತಡೆದಿದ್ದಾಳೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇನ್ನು ಈ ಬಗ್ಗೆ ವರನ ಕುಟುಂಬದ ಸಂಬಂಧಿಕರೊಬ್ಬರು ಈ ಮದುವೆ ಕಥೆ ಬಿಚ್ಚಿಟ್ಟಿದ್ದಾರೆ.

ತಾಳಿ ಕಟ್ಟಿಸಿಕೊಳ್ಳಲು ನಿರಾಕರಿಸಿದ ವಧು: ಮುರಿದುಬಿದ್ದ ಒಂದು ಮದ್ವೆ ಕಥೆ ಇಲ್ಲಿದೆ
Follow us on

ಚಿತ್ರದುರ್ಗ, (ಡಿಸೆಂಬರ್ 08): ಚಳ್ಳಕೆರೆಯ ಚಿಕ್ಕಬ್ಯಾಲದಕೆರೆಯಲ್ಲಿ ನಿಶ್ಚಯಿಸಲಾಗಿದ್ದ ಮದುವೆಯಲ್ಲಿ(Marriage) , ವರ (Groom) ತಾಳಿ ಕಟ್ಟಲು ಹೋದಾಗ ಕೈ ಅಡ್ಡ ಹಿಡಿದ ವಧು(Bride), ನನಗೆ ಮದುವೆಯಾಗಲು ಇಷ್ಟವಿಲ್ಲ ಎಂದು ಹೇಳುವ ಮೂಲಕ ವಿವಾಹವನ್ನು ಮುರಿದಿದ್ದಾಳೆ. ಆರು ತಿಂಗಳ ಹಿಂದೆಯೇ ಓದುವ ಕಾರಣವೊಡ್ಡಿ ಮದುವೆ ಆಗಲ್ಲ ಎನ್ನುವ ಮುನ್ಸೂಚನೆ ನೀಡಿದ್ದಳು. ಆದ್ರೆ, ಕುಟುಂಬಸ್ಥರು ಮನವೊಲಿಸಿ ಒಪ್ಪಿಸಿದ್ದು, ಇದೀಗ ವಧು ಮದುವೆ ಮಂಟಪದವರೆಗೂ ಬಂದು ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲೇ ಮತ್ತೆ ಮದುವೆ ನಿರಾಕರಿಸಿದ್ದಾಳೆ.

ಇನ್ನು ಈ ಬಗ್ಗೆ ಟಿವಿ9ಗೆ ವರನ ಸಹೋದರ ರಮೇಶ್ ಪ್ರತಿಕ್ರಿಯಿಸಿ, 6 ತಿಂಗಳ ಹಿಂದೆ ನಿಶ್ವಿತಾರ್ಥವಾಗಿತ್ತು. ಮದುವೆ ಬಗ್ಗೆ ಹುಡುಗಿ ಮನೆಯವರು ಕೇಳಿದ ನಂತರ ಮದುವೆ ಒಪ್ಪಿಕೊಂಡಿದ್ದೆವು. ಮೊದಲಿಗೆ ವಧು ಓದಿಸುತ್ತೇನೆ ಅಂದ್ರೆ ಮಾತ್ರ ಮದುವೆ ಆಗುತ್ತೇನೆ ಎಂದು ಹೇಳಿದ್ದಳು. ಅದರಂತೆ ನಾವೇ 50 ಸಾವಿರ ಕೊಟ್ಟು ಚಿಕ್ಕನಾಯಕನಹಳ್ಳಿಯ ಕಾಲೇಜ್​​ಗೆ BCA ಸೇರಿಸಿದ್ದೆವು. ಆದ್ರೆ, ಕೆಲ ತಿಂಗಳ ಹಿಂದೆ ಹುಡುಗಿ ಮದುವೆ ಆಗಲ್ಲ ಅಂತ ಹೇಳಿದ್ದಳು. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಚರ್ಚೆ ಮಾತುಕತೆ ಮಾಡಲು ನಾವು ಮದುವೆ ಬೇಡ ಅಂತ ಹುಡುಗಿ ಹೇಳಿದ್ದಾಳೆಂದು ಊರಿನವರನ್ನು ಕಳಿಸಿದ್ದೆವು. ಆಗ ಹುಡುಗಿ ಮನೆಯವರು, ತಂದೆ-ತಾಯಿ ಹಾಗೇನಿಲ್ಲ ಎಂದು ಹೇಳಿದ್ದರು. ಮದುವೆ ಕ್ಯಾನ್ಸಲ್ ಮಾಡಿದ್ರೆ ಸೂಸೈಡ್ ಮಾಡಿಕೊಳ್ಳುತ್ತೇವೆಂದು ಹೆದರಿಸಿದ್ದರು. ನಮ್ಮ ಹುಡುಗಿಗೆ ನಾವು ತಿಳಿ ಹೇಳಿದ್ದೇವೆ. ಮದುವೆ ಆಗುವುದಕ್ಕೆ ಸಿದ್ದಳಿದ್ದಾಳೆ ಎಂದು ಹೇಳಿದ್ದರು ಎಂದು ಅಂದಿನ ಕಥೆಯನ್ನು ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗ: ಇನ್ನೇನು ತಾಳಿ ಕಟ್ಟಬೇಕು ಎನ್ನುಷ್ಟರಲ್ಲೇ ಮದ್ವೆ ನಿರಾಕರಿಸಿದ ವಧು, ವಿಡಿಯೋ ವೈರಲ್

ಡಿಸೆಂಬರ್ 6ರಂದು ಆರತಕ್ಷತೆ, ಡಿಸೆಂಬರ್ 7ರಂದು ಮದುವೆ ಕಾರ್ಯಕ್ರಮವಿತ್ತು. ಆದ್ರೆ, ಹುಡುಗಿ ಡಿಸೆಂಬರ್ 6ರಂದು 112ಮೂಲಕ ಪೊಲೀಸರಿಗೆ ಕರೆ ಮಾಡಿದ್ದಾಳೆ. ನನಗೆ ಮದುವೆ ಇಷ್ಟ ಇಲ್ಲ ಬಲವಂತದ ಮದುವೆ ನಡೆಯುತ್ತಿದೆ ಎಂದು ಹೇಳಿದ್ದಾಳೆ . ನಾನು ಮದುವೆ ಆಗಲು ಇಷ್ಟ ಇಲ್ಲ ಅಂತ ಮೊದಲಿಗೆ ಪೊಲೀಸರಿಗೆ ಹೇಳಿದ್ದಳು. ಹುಡುಗನಿಗೆ ವಿಷಯ ತಿಳಿದಿದ್ದು ಹುಡುಗಿಗೆ ಕರೆ ಮಾಡಿದ್ದ. ಆಗ ಹುಡುಗಿ ನಾನು ಪೊಲೀಸರಿಗೆ ಕಾಲ್ ಮಾಡಿಲ್ಲ. ನಮಗೆ ಆಗದವರು ಕಾಲ್ ಮಾಡಿದ್ದಾರೆ ಎಂದಿದ್ದಳು. ನಂತರ ಪೊಲೀಸರು ಚೌಟರಿಯಿಂದ ಹೋಗಿದ್ದರು.

ನಂತರ ಆರತಕ್ಷತೆ, ಮದುವೆ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ ಹುಡುಗಿ ಕುಟುಂಬದವರೇ ಮಂಟಪಕ್ಕೆ ಬಂದಿದ್ದಾರೆ. ತಾಳಿ ಕಟ್ಟುವ ಕಾರ್ಯದವರೆಗೆ ಹುಡುಗಿ ಏನೂ ಹೇಳಿಲ್ಲ. ತಾಳಿ ಕಟ್ಟುವ ವೇಳೆ ನಾನು ಮದುವೆ ಆಗಲ್ಲ ಅಂತ ಹಠ ಹಿಡಿದ್ದಾಳೆ. ವಧು ತಾಳಿ ಬೇಡವೆಂದ ಕಾರಣಕ್ಕೆ ತಾಳಿ ಕಟ್ಟಲಿಲ್ಲ. ಯುವತಿಯ ತಂದೆ ಮಗಳು ಏನು ಹೇಳುತ್ತಾಳೆ ಹಾಗೇ ಆಗಲಿ ಅಂದರು. ಮದುವೆಗೆ ಖರ್ಚು ಮಾಡಿದ್ದ ಹಣದಲ್ಲಿ 3 ಲಕ್ಷ ವಾಪಸ್​ ಕೊಡಲು ಪೊಲೀಸರ ಸಮ್ಮುಖದಲ್ಲಿ ಒಪ್ಪಿದ್ದಾರೆ ಎಂದು ವರನ ಸಹೋದರ ರಮೇಶ್ ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ