AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ನೇಹಿತೆಯ ಬರ್ತ್‌ಡೇ ಪಾರ್ಟಿಗೆ ಹೋಗೋಣ ಬಾ ಎಂದು ನಂಬಿಸಿ ಕರೆದೊಯ್ದು ಮಗಳನ್ನೇ ಹಾಳು ಮಾಡಿದ ತಂದೆಗೆ 20 ವರ್ಷ ಜೈಲು ಶಿಕ್ಷೆ

ಚಿತ್ರದುರ್ಗದಲ್ಲಿ ಸ್ನೇಹಿತೆಯ ಹುಟ್ಟುಹಬ್ಬಕ್ಕೆ ಕರೆದೊಯ್ಯುವ ನೆಪದಲ್ಲಿ ಸ್ವಂತ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಎಸಗಿದ್ದ ನರರಾಕ್ಷಸ ತಂದೆಗೆ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಪೋಕ್ಸೋ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣದಲ್ಲಿ, ಚಿತ್ರದುರ್ಗದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿದೆ. ಮಹಿಳಾ ಪೊಲೀಸ್ ಠಾಣೆಯಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಿ, ಪ್ರಬಲ ವಾದ ಮಂಡಿಸಿದ ನಂತರ ಈ ಆದೇಶ ಹೊರಬಿದ್ದಿದೆ.

ಸ್ನೇಹಿತೆಯ ಬರ್ತ್‌ಡೇ ಪಾರ್ಟಿಗೆ ಹೋಗೋಣ ಬಾ ಎಂದು ನಂಬಿಸಿ ಕರೆದೊಯ್ದು ಮಗಳನ್ನೇ ಹಾಳು ಮಾಡಿದ ತಂದೆಗೆ 20 ವರ್ಷ ಜೈಲು ಶಿಕ್ಷೆ
ಜಿಲ್ಲಾ ಮತ್ತು ಸತ್ರ ನ್ಯಾಯಾಲಯ
ಅಕ್ಷಯ್​ ಪಲ್ಲಮಜಲು​​
|

Updated on:Oct 06, 2026 | 10:11 PM

Share

ಚಿತ್ರದುರ್ಗ, ಅ.6: ಸ್ನೇಹಿತೆಯ ಹುಟ್ಟುಹಬ್ಬದ ಪಾರ್ಟಿಗೆ ಹೋಗೋಣ ಎಂದು ನಂಬಿಸಿ ಕರೆದೊಯ್ದು, ಸ್ವಂತ ಅಪ್ರಾಪ್ತ ಮಗಳ ಮೇಲೆಯೇ ಅತ್ಯಾಚಾರ ಎಸಗಿದ್ದ ನರರಾಕ್ಷಸ ತಂದೆಗೆ ಚಿತ್ರದುರ್ಗದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 20 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ. 2025ರಲ್ಲಿ ಚಿತ್ರದುರ್ಗ ಮಹಿಳಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅಮಾನವೀಯ ಘಟನೆ ನಡೆದಿತ್ತು. ಹೆತ್ತ ತಂದೆಯೇ ಮಗಳಿಗೆ “ನಿನ್ನ ಫ್ರೆಂಡ್ ಬರ್ತ್‌ಡೇ ಇದೆ, ಹೋಗೋಣ ಬಾ” ಎಂದು ನಂಬಿಸಿ ಕರೆದೊಯ್ದು ಈ ಕ್ರೂರ ಕೃತ್ಯ ಎಸಗಿದ್ದ.

ಘಟನೆ ಸಂಬಂಧ ಮಹಿಳಾ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಮಹಿಳಾ ಪೊಲೀಸ್ ಠಾಣೆಯ ಸಿಪಿಐ ನಯೂಮ್ ಅವರು ಸುದೀರ್ಘ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕ ಜಗದೀಶ್ ಅವರು ಸಂತ್ರಸ್ತೆಯ ಪರವಾಗಿ ಪ್ರಬಲ ವಾದ ಮಂಡಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಗಂಗಾಧರ್ ಚನ್ನಬಸಪ್ಪ ಹಡಪದ್ ಅವರು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶಿಸಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗದಲ್ಲಿ ಲಾರಿಗೆ ಕಾರು ಭೀಕರ ಡಿಕ್ಕಿ: ಕೊಪ್ಪಳ ಮೂಲದ ಮೂವರು ಯುವಕರು ಸಾವು, ಇಬ್ಬರಿಗೆ ಗಂಭೀರ ಗಾಯ

ಗಣೇಶ ಮೆರವಣಿಗೆ ವೇಳೆ ಗಲಾಟೆ: ಮೈಸೂರು ಮಹಾನಗರ ಪಾಲಿಕೆ ಚಾಲಕನಿಗೆ ಚಾಕು ಇರಿತ

ಮೈಸೂರಿನ ಗಾಂಧಿನಗರದ ಎಫ್‌ಟಿಎಸ್ ವೃತ್ತದ ಬಳಿ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಸಣ್ಣ ಕಾರಣಕ್ಕೆ ಕಿರಿಕ್ ತೆಗೆದ ಇಬ್ಬರು ಯುವಕರು, ಮೈಸೂರು ಮಹಾನಗರ ಪಾಲಿಕೆಯ ‘ಅಭಯ’ ವಾಹನದ ಚಾಲಕನಿಗೆ ಚಾಕುವಿನಿಂದ ಭೀಕರವಾಗಿ ಇರಿದು ಪರಾರಿಯಾಗಿದ್ದ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ. ನಿನ್ನೆ ರಾತ್ರಿ ಸುಮಾರು ೧೧:೩೦ರ ವೇಳೆಗೆ ಎಫ್‌ಟಿಎಸ್ ರಸ್ತೆಯಲ್ಲಿ ಗಣಪತಿ ಮೆರವಣಿಗೆ ಸಾಗುತ್ತಿತ್ತು. ಈ ವೇಳೆ ರಸ್ತೆಯಲ್ಲಿ ನಿಂತಿದ್ದ ನಗರಪಾಲಿಕೆ ವಾಹನ ಚಾಲಕ ರಘು ಬಳಿ ಬಂದ ಮಾದೇಶ ಹಾಗೂ ಆಕಾಶ್ ಎಂಬ ಯುವಕರು, “ನಮ್ಮ ಟೀಮ್‌ಗೆ ಸಪೋರ್ಟ್ ಮಾಡುವುದನ್ನು ಬಿಟ್ಟು ಬೇರೆ ಟೀಮ್‌ಗೆ ಯಾಕೆ ಸಪೋರ್ಟ್ ಮಾಡುತ್ತೀಯಾ?” ಎಂದು ಜಗಳ ತೆಗೆದಿದ್ದಾರೆ.

ಜಗಳ ವಿಕೋಪಕ್ಕೆ ತಿರುಗಿ ಮಾದೇಶ್ ಮತ್ತು ಆಕಾಶ್ ಏಕಾಏಕಿ ಚಾಕುವಿನಿಂದ ರಘು ಅವರ ಮುಖ, ಹೊಟ್ಟೆ ಹಾಗೂ ಕೈ ಭಾಗಕ್ಕೆ ಇರಿದು ಸ್ಥಳದಿಂದ ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ರಘು ಅವರನ್ನು ತಕ್ಷಣವೇ ಪೊಲೀಸರು ಆಸ್ಪತ್ರೆಗೆ ಸೇರಿಸಿದ್ದು, ಗಾಯ ಆಳವಾಗಿದ್ದರಿಂದ ವೈದ್ಯರು 30 ಹೊಲಿಗೆಗಳನ್ನು ಹಾಕಿದ್ದಾರೆ. ಘಟನೆ ಸಂಬಂಧ ಎನ್.ಆರ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಕಾರ್ಯಾಚರಣೆ ನಡೆಸಿ ಕೆಲವೇ ಗಂಟೆಗಳಲ್ಲಿ ಆರೋಪಿಗಳಾದ ಮಾದೇಶ್ ಮತ್ತು ಆಕಾಶ್‌ನನ್ನು ಬಂಧಿಸಿದ್ದಾರೆ.

ವರದಿ: ಬಸವರಾಜ ಮುದನೂರ್, ರಾಮ್ ಮೈಸೂರು 

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:09 pm, Tue, 6 October 26

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
‘ಪ್ರೇಮದ ಊರಲಿ’ ನಟಿಯರಿಗೆ ಕನ್ನಡದ ಬಗ್ಗೆ ಸಂಕಲ್ಪ ಮಾಡಿಸಿದ ರಂಗಾಯಣ ರಘು
‘ಪ್ರೇಮದ ಊರಲಿ’ ನಟಿಯರಿಗೆ ಕನ್ನಡದ ಬಗ್ಗೆ ಸಂಕಲ್ಪ ಮಾಡಿಸಿದ ರಂಗಾಯಣ ರಘು
ಜಿಬಿಎ ವ್ಯಾಪ್ತಿಯಲ್ಲಿ ಐದು ನಗರ ಪೊಲೀಸ್ ಕಮಿಷನರೇಟ್‌ಗಳಿಗೆ ಸಂಪುಟ ಅನುಮೋದನೆ
ಜಿಬಿಎ ವ್ಯಾಪ್ತಿಯಲ್ಲಿ ಐದು ನಗರ ಪೊಲೀಸ್ ಕಮಿಷನರೇಟ್‌ಗಳಿಗೆ ಸಂಪುಟ ಅನುಮೋದನೆ
ದಸರಾ, ದೀಪಾವಳಿ ಹೊತ್ತಲ್ಲೇ ಬೆಲೆ ಏರಿಕೆ ಶಾಕ್: ಹಾಲಿನ ದರ 8 ರೂ. ಹೆಚ್ಚಳ
ದಸರಾ, ದೀಪಾವಳಿ ಹೊತ್ತಲ್ಲೇ ಬೆಲೆ ಏರಿಕೆ ಶಾಕ್: ಹಾಲಿನ ದರ 8 ರೂ. ಹೆಚ್ಚಳ
ಕೆಪಿಎಸ್​ಸಿ ಅಕ್ರಮ: ಮಾಜಿ ಅಧ್ಯಕ್ಷ ಶಿವಶಂಕರಪ್ಪ,ಸದಸ್ಯೆ ಗೀತಾ ಇಡಿ ವಶಕ್ಕೆ
ಕೆಪಿಎಸ್​ಸಿ ಅಕ್ರಮ: ಮಾಜಿ ಅಧ್ಯಕ್ಷ ಶಿವಶಂಕರಪ್ಪ,ಸದಸ್ಯೆ ಗೀತಾ ಇಡಿ ವಶಕ್ಕೆ
ಬಿಗ್​​ಬಾಸ್ ಕನ್ನಡ: ‘ಅಯ್ಯೋ ಉರಿ’ ಕಣ್ಣೀರು ಹಾಕಿದ ಕಿರಣ್ ಶಾಸ್ತ್ರಿ
ಬಿಗ್​​ಬಾಸ್ ಕನ್ನಡ: ‘ಅಯ್ಯೋ ಉರಿ’ ಕಣ್ಣೀರು ಹಾಕಿದ ಕಿರಣ್ ಶಾಸ್ತ್ರಿ
ನಮ್ಮ್ ಸಿಎಂ ಫೋನ್‌ಗೆ ಸಿಗಲ್ಲ ಎಂದ ಲಕ್ಷ್ಮಿ ಹೆಬ್ಬಾಳ್ಕರ್
ನಮ್ಮ್ ಸಿಎಂ ಫೋನ್‌ಗೆ ಸಿಗಲ್ಲ ಎಂದ ಲಕ್ಷ್ಮಿ ಹೆಬ್ಬಾಳ್ಕರ್
ದಾವಣಗೆರೆ: ಭತ್ತದ ವ್ಯಾಪಾರಿಯಿಂದ 4 ಕೋಟಿ ವಂಚನೆ ಆರೋಪ
ದಾವಣಗೆರೆ: ಭತ್ತದ ವ್ಯಾಪಾರಿಯಿಂದ 4 ಕೋಟಿ ವಂಚನೆ ಆರೋಪ
ಪ್ರತಿಭಟನೆ ವೇಳೆ ಬ್ಯಾರಿಕೇಡ್ ಹತ್ತಿ ಧ್ವಜ ಬೀಸಿದ ರಾಹುಲ್ ಗಾಂಧಿ!
ಪ್ರತಿಭಟನೆ ವೇಳೆ ಬ್ಯಾರಿಕೇಡ್ ಹತ್ತಿ ಧ್ವಜ ಬೀಸಿದ ರಾಹುಲ್ ಗಾಂಧಿ!
ಕೈದಿ ಬಿಡುಗಡೆಗೆ ಪತ್ನಿ ಮೇಲೆ ಆಸೆ: ಅಪರಾಧಿ ಪತ್ನಿಗೆ ಡಿಐಜಿ ವಿಡಿಯೋ ಕಾಲ್!
ಕೈದಿ ಬಿಡುಗಡೆಗೆ ಪತ್ನಿ ಮೇಲೆ ಆಸೆ: ಅಪರಾಧಿ ಪತ್ನಿಗೆ ಡಿಐಜಿ ವಿಡಿಯೋ ಕಾಲ್!
ವೀರಶೈವ ಲಿಂಗಾಯತ ಸ್ವಾಮೀಜಿಗಳಿಗೆ ಅಗೌರವ ಆರೋಪಕ್ಕೆ ಸ್ಪಷ್ಟನೆ ನೀಡಿದ ಡಿಕೆಶಿ
ವೀರಶೈವ ಲಿಂಗಾಯತ ಸ್ವಾಮೀಜಿಗಳಿಗೆ ಅಗೌರವ ಆರೋಪಕ್ಕೆ ಸ್ಪಷ್ಟನೆ ನೀಡಿದ ಡಿಕೆಶಿ