ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಪ್ರಸ್ತಾಪ ರಾಜ್ಯ ಸರ್ಕಾರದ ಮುಂದಿಲ್ಲ: ಗೋವಿಂದ ಕಾರಜೋಳ

| Updated By: ganapathi bhat

Updated on: Aug 13, 2021 | 11:03 PM

ರಾಜ್ಯ ಸರ್ಕಾರದ ಯೋಜನೆಗಳು ವ್ಯಕ್ತಿಗತವಾಗಿರಬಾರದು. ಯೋಜನೆಗಳಿಗೆ ಮನೆತನದವರ ಹೆಸರಿಡುವುದು ಸರಿಯಲ್ಲ ಎಂದು ಚಿತ್ರದುರ್ಗದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಇಂದು (ಆಗಸ್ಟ್ 13) ಹೇಳಿಕೆ ನೀಡಿದ್ದಾರೆ.

ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಪ್ರಸ್ತಾಪ ರಾಜ್ಯ ಸರ್ಕಾರದ ಮುಂದಿಲ್ಲ: ಗೋವಿಂದ ಕಾರಜೋಳ
ಗೋವಿಂದ ಕಾರಜೋಳ
Follow us on

ಚಿತ್ರದುರ್ಗ: ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಪ್ರಸ್ತಾಪ ಕರ್ನಾಟಕ ರಾಜ್ಯ ಸರ್ಕಾರದ ಮುಂದಿಲ್ಲ. ಸಚಿವ ಸಂಪುಟದ ಮುಂದೆ ಬಂದಾಗ ಉತ್ತರ ಹೇಳುತ್ತೇವೆ. ತಾತ್ವಿಕವಾಗಿ ಇಂಥ ವಿಚಾರಕ್ಕೆ ಹೆಚ್ಚು ಮಹತ್ವ ಕೊಡಬೇಕಿಲ್ಲ. ರಾಜ್ಯ ಸರ್ಕಾರದ ಯೋಜನೆಗಳು ವ್ಯಕ್ತಿಗತವಾಗಿರಬಾರದು. ಯೋಜನೆಗಳಿಗೆ ಮನೆತನದವರ ಹೆಸರಿಡುವುದು ಸರಿಯಲ್ಲ ಎಂದು ಚಿತ್ರದುರ್ಗದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಇಂದು (ಆಗಸ್ಟ್ 13) ಹೇಳಿಕೆ ನೀಡಿದ್ದಾರೆ.

ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆ ವ್ಯಾಪ್ತಿಗೆ ಬರಲು ತಾತ್ವಿಕ ಒಪ್ಪಿಗೆ ಸಿಕ್ಕಿದೆ. ಶೀಘ್ರ ಯೋಜನೆ ಪೂರ್ಣಗೊಳಿಸುತ್ತೇವೆ. ಆ ಬಗ್ಗೆ ಭರವಸೆ ಇದೆ ಎಂದು ಗೋವಿಂದ ಕಾರಜೋಳ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಚಿತ್ರದುರ್ಗ ನಗರದ ಶಿವಶರಣ ಮಾದಾರ ಚನ್ನಯ್ಯ ಮಠಕ್ಕೆ ಗೋವಿಂದ ಕಾರಜೋಳ ಭೇಟಿ ನೀಡಿದ್ದಾರೆ. ಬಸವಮೂರ್ತಿ ಮಾದಾರ ಚನ್ನಯ್ಯಶ್ರೀ ಆಶೀರ್ವಾದ ಪಡೆದುಕೊಂಡಿದ್ದಾರೆ.

ಅನ್ನಪೂರ್ಣೇಶ್ವರಿ ಹೆಸರು ಇಡುವುದರಿಂದ ಕಾಂಗ್ರೆಸ್​ನವರಿಗೆ ಏನು ಸಮಸ್ಯೆ
ಅನ್ನಪೂರ್ಣೇಶ್ವರಿ ಎಂದರೇನು ಎಂದು ಎಲ್ಲರಿಗೂ ಗೊತ್ತಿದೆ. ಆ ಹೆಸರು ನೋಡಿದರೆ ಎಲ್ಲರಿಗೂ ಹೊಟ್ಟೆ ತುಂಬುತ್ತದೆ, ಸಂತೃಪ್ತಿ ಆಗುತ್ತದೆ. ಇಂದಿರಾ ಕ್ಯಾಂಟೀನ್​ಗೆ ಅನ್ನಪೂರ್ಣೇಶ್ವರಿ ಹೆಸರು ಇಡುವುದರಿಂದ ಕಾಂಗ್ರೆಸ್​ನವರಿಗೆ ಏನು ಸಮಸ್ಯೆ ಎಂದು ಬೆಂಗಳೂರಿನಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಪ್ರಶ್ನಿಸಿದರು.

ಒಬಿಸಿ ಪಟ್ಟಿ ರಚನೆಗೆ ರಾಜ್ಯಗಳಿಗೆ ಅವಕಾಶ ನೀಡಲಾಗಿದೆ. ನನಗೆ ಸಚಿವ ಸ್ಥಾನ ಸಿಕ್ಕಿದ್ದರಿಂದ ಜವಾಬ್ದಾರಿ ಹೆಚ್ಚಾಗಿದೆ. ಕರ್ನಾಟಕಕ್ಕೆ ಆದ್ಯತೆ ಕೊಟ್ಟು ಅಭಿವೃದ್ಧಿ ಮಾಡುತ್ತೇನೆ. ದೇಶದಲ್ಲಿ ಈಗ ವಿದ್ಯುತ್ ಸ್ವಾವಲಂಬಿ ಆಗಿದ್ದೇವೆ. ಯೂರಿಯಾ ಉತ್ಪಾದನೆಯಲ್ಲೂ ಸ್ವಾವಲಂಬಿಯಾಗುತ್ತೇವೆ. ಕರ್ನಾಟಕದಲ್ಲಿ ನ್ಯಾನೋ ಯೂರಿಯಾ ಘಟಕಕ್ಕೆ ಪ್ರಸ್ತಾವನೆ ಮಾಡಲಾಗಿದೆ. ಈ ಘಟಕಕ್ಕೆ ರಾಜ್ಯ ಸರ್ಕಾರ ಮೂಲ ಸೌಕರ್ಯ ಕೊಡಬೇಕಾಗಿದೆ ಎಂದು ಸಹ ಅವರು ವಿವರಿಸಿದರು.

ಇದನ್ನೂ ಓದಿ: ಇಂದಿರಾ ಕ್ಯಾಂಟೀನ್​ಗೆ ಅನ್ನಪೂರ್ಣೇಶ್ವರಿ ಹೆಸರು ಇಡುವುದರಿಂದ ಕಾಂಗ್ರೆಸ್​ನವರಿಗೆ ಏನು ಸಮಸ್ಯೆ? ಸಂಸದ ಭಗವಂತ ಖೂಬಾ

ಇಂದಿರಾ ಕ್ಯಾಂಟೀನ್​ ಹೆಸರು ಬದಲಿಸಿದ್ರೆ ಪರಿಣಾಮ ನೆಟ್ಟಗಿರಲ್ಲ: ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಎಚ್ಚರಿಕೆ

(Govinda Karajola on India Canteen Bhadra Meldande Yojana at Chitradurga)

Published On - 11:00 pm, Fri, 13 August 21