AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದಿರಾ ಕ್ಯಾಂಟೀನ್​ಗೆ ಅನ್ನಪೂರ್ಣೇಶ್ವರಿ ಹೆಸರು ಇಡುವುದರಿಂದ ಕಾಂಗ್ರೆಸ್​ನವರಿಗೆ ಏನು ಸಮಸ್ಯೆ? ಸಂಸದ ಭಗವಂತ ಖೂಬಾ

ಕರ್ನಾಟಕದಲ್ಲಿ ನ್ಯಾನೋ ಯೂರಿಯಾ ಘಟಕಕ್ಕೆ ಪ್ರಸ್ತಾವನೆ ಮಾಡಲಾಗಿದೆ. ಈ ಘಟಕಕ್ಕೆ ರಾಜ್ಯ ಸರ್ಕಾರ ಮೂಲ ಸೌಕರ್ಯ ಕೊಡಬೇಕಾಗಿದೆ ಎಂದು ಸಹ ಅವರು ವಿವರಿಸಿದರು.

ಇಂದಿರಾ ಕ್ಯಾಂಟೀನ್​ಗೆ ಅನ್ನಪೂರ್ಣೇಶ್ವರಿ ಹೆಸರು ಇಡುವುದರಿಂದ ಕಾಂಗ್ರೆಸ್​ನವರಿಗೆ ಏನು ಸಮಸ್ಯೆ? ಸಂಸದ ಭಗವಂತ ಖೂಬಾ
ಸಂಸದ ಭಗವಂತ ಖೂಬಾ
TV9 Web
| Updated By: guruganesh bhat|

Updated on: Aug 13, 2021 | 4:49 PM

Share

ಬೆಂಗಳೂರು: ಅನ್ನಪೂರ್ಣೇಶ್ವರಿ ಎಂದರೇನು ಎಂದು ಎಲ್ಲರಿಗೂ ಗೊತ್ತಿದೆ. ಆ ಹೆಸರು ನೋಡಿದರೆ ಎಲ್ಲರಿಗೂ ಹೊಟ್ಟೆ ತುಂಬುತ್ತದೆ, ಸಂತೃಪ್ತಿ ಆಗುತ್ತದೆ. ಇಂದಿರಾ ಕ್ಯಾಂಟೀನ್​ಗೆ ಅನ್ನಪೂರ್ಣೇಶ್ವರಿ ಹೆಸರು ಇಡುವುದರಿಂದ ಕಾಂಗ್ರೆಸ್​ನವರಿಗೆ ಏನು ಸಮಸ್ಯೆ ಎಂದು ಬೆಂಗಳೂರಿನಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಪ್ರಶ್ನಿಸಿದರು.

ಒಬಿಸಿ ಪಟ್ಟಿ ರಚನೆಗೆ ರಾಜ್ಯಗಳಿಗೆ ಅವಕಾಶ ನೀಡಲಾಗಿದೆ. ನನಗೆ ಸಚಿವ ಸ್ಥಾನ ಸಿಕ್ಕಿದ್ದರಿಂದ ಜವಾಬ್ದಾರಿ ಹೆಚ್ಚಾಗಿದೆ. ಕರ್ನಾಟಕಕ್ಕೆ ಆದ್ಯತೆ ಕೊಟ್ಟು ಅಭಿವೃದ್ಧಿ ಮಾಡುತ್ತೇನೆ. ದೇಶದಲ್ಲಿ ಈಗ ವಿದ್ಯುತ್ ಸ್ವಾವಲಂಬಿ ಆಗಿದ್ದೇವೆ. ಯೂರಿಯಾ ಉತ್ಪಾದನೆಯಲ್ಲೂ ಸ್ವಾವಲಂಬಿಯಾಗುತ್ತೇವೆ. ಕರ್ನಾಟಕದಲ್ಲಿ ನ್ಯಾನೋ ಯೂರಿಯಾ ಘಟಕಕ್ಕೆ ಪ್ರಸ್ತಾವನೆ ಮಾಡಲಾಗಿದೆ. ಈ ಘಟಕಕ್ಕೆ ರಾಜ್ಯ ಸರ್ಕಾರ ಮೂಲ ಸೌಕರ್ಯ ಕೊಡಬೇಕಾಗಿದೆ ಎಂದು ಸಹ ಅವರು ವಿವರಿಸಿದರು.

ಇಂದಿರಾ ಕ್ಯಾಂಟೀನ್​ ಹೆಸರು ಬದಲಿಸಿದ್ರೆ ಪರಿಣಾಮ ನೆಟ್ಟಗಿರಲ್ಲ: ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಎಚ್ಚರಿಕೆ ಇಂದಿರಾ ಕ್ಯಾಂಟೀನ್​ ಹೆಸರು ಬದಲಿಸಿದ್ರೆ ಪರಿಣಾಮ ನೆಟ್ಟಗಿರಲ್ಲ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಎಚ್ಚರಿಕೆ ನೀಡಿದ್ದಾರೆ. ವಿಧಾನ ಪರಿಷತ್ ಮುಖ್ಯ ಸಚೇತಕ ನಾರಾಯಣಸ್ವಾಮಿ, ಬಿ.ಕೆ ಹರಿಪ್ರಸಾದ್ ಅವರೊಂದಿಗೆ ಜಂಟಿ ಸುದ್ದಿ ಗೋಷ್ಟಿ ನಡೆಸಿ ಅವರು ಮಾತನಾಡಿದರು. ‘‘ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಅಗೌರವ ತೋರಿಸಿದರೆ ನಾವೂ ಅದೇ ಧಾಟಿಯಲ್ಲಿ  ಪ್ರತ್ಯುತ್ತರ ನೀಡಬೇಕಾಗುತ್ತದೆ. ಕೆಲವು ಫ್ಲೈಓವರ್, ರಸ್ತೆಗಳಿಗೆ ಬಿಜೆಪಿ ನಾಯಕರ ಹೆಸರಿಟ್ಟಿದ್ದಾರೆ. ಯಶವಂತಪುರ ಫ್ಲೈಓವರ್​​​ಗೆ ದೀನದಯಾಳ್ ಉಪಾಧ್ಯಾಯ, ಬಸ್ ನಿಲ್ದಾಣಕ್ಕೆ ಅಟಲ್ ಬಿಹಾರಿ ವಾಜಪೇಯಿ ಹೆಸರಿಟ್ಟಿದ್ದಾರೆ. ಒಂದು ವೇಳೆ ಇಂದಿರಾ ಕ್ಯಾಂಟೀನ್ ಹೆಸರು ಬದಲಿಸಿದರೆ ಈ ಎಲ್ಲ ಬೋರ್ಡ್​​​ಗಳಿಗೆ ಮಸಿ ಬಳಿಯುತ್ತೇವೆ’’ ಎಂದು ಅವರು ಎಚ್ಚರಿಕೆ ನೀಡಿದ್ಧಾರೆ.

ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯ ಹೆಸರು ಬದಲಾಯಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರಾಮಲಿಂಗಾರೆಡ್ಡಿ, ‘‘ರಾಜೀವ್​​ ಗಾಂಧಿ ಕೂಡ ದೇಶಕ್ಕೋಸ್ಕರವೇ ಪ್ರಾಣ ಕೊಟ್ಟಿದ್ದು. ಅವರ ಹೆಸರಿನ ಪ್ರಶಸ್ತಿ ಬದಲಿಸಿದ್ದು ಸರಿಯಲ್ಲ. ಧ್ಯಾನ್ ಚಂದ್ ಹೆಸರು ಬೇರೆ ದೊಡ್ಡ ಯೋಜನೆಗಳಿಗೆ ಇಡಲಿ. ಅದನ್ನ ಬೇಡ ಎನ್ನುವುದಿಲ್ಲ, ಇರುವ ಹೆಸರು ಬದಲಿಸೋದ್ಯಾಕೆ?’’ ಎಂದು ಅವರು ಪ್ರಶ್ನಿಸಿದ್ದಾರೆ.

ಗುಜರಾತ್​ನಲ್ಲಿನ ಕ್ರೀಡಾಂಗಣಕ್ಕೆ ನರೇಂದ್ರ ಮೋದಿ ಹೆಸರನ್ನು ಇಟ್ಟಿರುವುದನ್ನು ಪ್ರಸ್ತಾಪಿಸಿದ ರಾಮಲಿಂಗಾರೆಡ್ಡಿ, ‘‘ನರೇಂದ್ರ ಮೋದಿ ಸ್ಟೇಡಿಯಂ ಎಂದು ಬಿಜೆಪಿಯವರೇ ಹೆಸರಿಟ್ಟಿದ್ದಾರೆ. ನರೇಂದ್ರ ಮೋದಿ ಏನು ದೊಡ್ಡ ಕ್ರೀಡಾಪಟುವಾ? ಅವರೇನು ನೂರು ಕ್ಯಾಚ್ ಹಿಡಿದಿದ್ದಾರಾ? ಸೆಂಚುರಿ ಬಾರ್ಸಿದ್ದಾರಾ? ಇವರೇನು ಸಚಿನ್​​ ತೆಂಡುಲ್ಕರ್ ತರಹ ದೊಡ್ಡ ಕ್ರಿಕೆಟರಾ?’’ ಎಂದು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಮುಂದಕ್ಕೆ ಬಿಜೆಪಿ ಸರ್ಕಾರ ಎಲ್ಲೂ ಇರುವುದಿಲ್ಲ. ನಮ್ಮ ಸರ್ಕಾರ ಬಂದಾಗ,  ಬಿಜೆಪಿ ಇಟ್ಟಿರುವ ಹೆಸರು ಬದಲಿಸುವ ಕಾಲ ಬರುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: 

ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸಲು ಸಿ.ಟಿ.ರವಿ ಪರ ಸಚಿವ ಕೆ.ಸುಧಾಕರ್ ಬ್ಯಾಟಿಂಗ್

ಇಂದಿರಾ ಕ್ಯಾಂಟೀನ್ ಹೆಸರು ಬದಲಿಸುವಂತೆ ಸಿಎಂ ಬೊಮ್ಮಾಯಿಗೆ ಸಿ.ಟಿ.ರವಿ ಮನವಿ

(MP Bhagwanth Khuba What is the problem with Congress naming Annapoorneshwari name as Indira Canteen)