ಸಿದ್ದರಾಮಯ್ಯ ಪರ ಹರ್ಷೋದ್ಘಾರ; ಯುವ ಕಾಂಗ್ರೆಸ್ ಅಭಿಮಾನವನ್ನು ಹಸನ್ಮುಖಿಯಾಗಿ ಸಂಭ್ರಮಿಸಿದ ವಿಪಕ್ಷ ನಾಯಕ

Siddaramaiah: ಕೆ.ಎಸ್. ಈಶ್ವರಪ್ಪ, ಸಿ.ಟಿ ರವಿ ವಿರುದ್ಧ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ಅವರ ಹೆಸರು ಹೇಳೋಕೆ ನಾಚಿಕೆಯಾಗುತ್ತೆ. ಈಶ್ವರಪ್ಪನಿಗೆ ನಾಲಿಗೆ, ಬ್ರೈನ್ ಮಧ್ಯೆ ಲಿಂಕೇ ಇಲ್ಲ. ಎರಡರ ಮಧ್ಯೆ ಲಿಂಕ್ ತಪ್ಪಿಹೋಗಿದೆ ಎಂದು ಈಶ್ವರಪ್ಪ ವಿರುದ್ಧ ಸಿದ್ದು ಲೇವಡಿ ಮಾಡಿದ್ದಾರೆ.

ಸಿದ್ದರಾಮಯ್ಯ ಪರ ಹರ್ಷೋದ್ಘಾರ; ಯುವ ಕಾಂಗ್ರೆಸ್ ಅಭಿಮಾನವನ್ನು ಹಸನ್ಮುಖಿಯಾಗಿ ಸಂಭ್ರಮಿಸಿದ ವಿಪಕ್ಷ ನಾಯಕ
ಸಿದ್ದರಾಮಯ್ಯ
Follow us
TV9 Web
| Updated By: ganapathi bhat

Updated on:Aug 13, 2021 | 6:45 PM

ಬೆಂಗಳೂರು: ಬಿಜೆಪಿಯವರು ಟಿಪ್ಪು ಜಯಂತಿ ಆಚರಣೆಗೆ ವಿರೋಧ ಮಾಡಿದ್ದರು. ಟಿಪ್ಪು ದಿವಾನರಾಗಿದ್ದವರು ಪೂರ್ಣಯ್ಯ. ಟಿಪ್ಪು ಖಜಾಂಚಿಯಾಗಿದ್ದವರು ಕೃಷ್ಣಯ್ಯ. ಇವರ ವಿರುದ್ಧ ಯಾಕೆ ಬಿಜೆಪಿ ಧ್ವನಿ ಎತ್ತುವುದಿಲ್ಲ. ಯುವಕರನ್ನ ಮೋದಿ ದಾರಿ ತಪ್ಪಿಸಿದ್ದರು. ಇವತ್ತು ಅದೇ ಯುವಕರು ಭ್ರಮ ನಿರಸನಗೊಂಡಿದ್ದಾರೆ. ಹಿಂದೆ ಕೆಲವರು‌ ಮೋದಿ ಮೋದಿ ಅನ್ನುತ್ತಿದ್ದರು. ಕಾರ್ಯಕ್ರಮದಲ್ಲಿ ಮಾತನಾಡೋಕೆ ಬಿಡ್ತಿರಲಿಲ್ಲ. ಆದರೆ ಈಗ ಎಲ್ಲವೂ ಮಾಯವಾಗಿದೆ ಎಂದು ಯುವ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಯುವ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಪರ ಹರ್ಷೋದ್ಘಾರ ಜೋರಾಗಿತ್ತು. ಒಂದು ನಿಮಿಷ ಕಾಲ ವೇದಿಕೆಯಲ್ಲಿ ನಿಂತು‌ ಯುವ ಕಾಂಗ್ರೆಸ್ ಹರ್ಷೋದ್ಘಾರವನ್ನು ಸಿದ್ದರಾಮಯ್ಯ ಸಂಭ್ರಮಿಸಿದ್ದಾರೆ. ಹಸನ್ಮುಕಿಯಾಗಿ ನಿಂತು ಯುವ ಕಾಂಗ್ರೆಸಿಗರ ಕೂಗನ್ನ ನೋಡುತ್ತ ನಿಂತಿದ್ದಾರೆ. ಸಿದ್ದರಾಮಯ್ಯ ಭಾಷಣಕ್ಕೆ ಬರುತ್ತಿದ್ದಂತೆ ಯುವ ಕಾಂಗ್ರೆಸ್ ಹರ್ಷೋದ್ಘಾರ ಮುಗಿಲು ಮುಟ್ಟಿದೆ. ಸತತವಾಗಿ ಜೈಕಾರ ಕೂಗಿ, ವಿಶಲ್ ಹೊಡೆದು, ಹುಲಿಯ, ಹೌದು ಹುಲಿಯ, ಟಗರು ಎಂದು ಯುವ ಕಾಂಗ್ರೆಸ್ ಕಾರ್ಯಕರ್ತರು ಹುಚ್ಚೆದ್ದು ಕೂಗಿದ್ದಾರೆ. ಬಳಿಕ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕೆ.ಎಸ್. ಈಶ್ವರಪ್ಪ, ಸಿ.ಟಿ ರವಿ ವಿರುದ್ಧ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ಅವರ ಹೆಸರು ಹೇಳೋಕೆ ನಾಚಿಕೆಯಾಗುತ್ತೆ. ಈಶ್ವರಪ್ಪನಿಗೆ ನಾಲಿಗೆ, ಬ್ರೈನ್ ಮಧ್ಯೆ ಲಿಂಕೇ ಇಲ್ಲ. ಎರಡರ ಮಧ್ಯೆ ಲಿಂಕ್ ತಪ್ಪಿಹೋಗಿದೆ ಎಂದು ಈಶ್ವರಪ್ಪ ವಿರುದ್ಧ ಸಿದ್ದು ಲೇವಡಿ ಮಾಡಿದ್ದಾರೆ.

ನೀವು ನೇರವಾಗಿ ವಿಧಾನಸೌಧಕ್ಕೆ ಬರಬೇಕು ಎಂದುಕೊಳ್ಳಬೇಡಿ: ಡಿಕೆಶಿ ಸಲಹೆ ಬಿಜೆಪಿ ನಾಯಕರ ಬಗ್ಗೆ ನೀವು ಯಾರೂ ಮಾತನಾಡಬೇಡಿ. ಬಿಜೆಪಿಯವರ ಬಗ್ಗೆ ನಾವು ಸಮರ್ಥವಾಗಿ ಮಾತಾಡುತ್ತೇವೆ. ಸಿ.ಟಿ.ರವಿ, ಈಶ್ವರಪ್ಪ, ಬಿಜೆಪಿ ಸಂಸ್ಕೃತಿ ಜನರಿಗೆ ತಲುಪಿಸ್ತೇವೆ ಎಂದು ಬೆಂಗಳೂರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ನೀವು ಜನರನ್ನು ಕಾಂಗ್ರೆಸ್ ಛತ್ರಿ ಕೆಳಗೆ ಕರೆದುಕೊಂಡು ಬನ್ನಿ. ನೀವು ನೇರವಾಗಿ ವಿಧಾನಸೌಧಕ್ಕೆ ಬರಬೇಕು ಎಂದುಕೊಳ್ಳಬೇಡಿ. ನಾನು ಸಹ ಜಿಲ್ಲಾ ಪಂಚಾಯಿತಿಯಿಂದಲೇ ಬಂದವನು. ನಿಮ್ಮ ಕೆಲಸದ ಮೇಲೆ ನಿಮ್ಮ ಭವಿಷ್ಯ ನಿರ್ಧಾರ ಆಗುತ್ತೆ ಎಂದು ಯೂತ್​ ಕಾಂಗ್ರೆಸ್​ ಅಧ್ಯಕ್ಷರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಲಹೆ ನೀಡಿದ್ದಾರೆ.

ಅಧ್ಯಕ್ಷ ಸ್ಥಾನ ಎಲ್ಲರಿಗೂ ಸಿಗುವುದಿಲ್ಲ. ಸಿಕ್ಕ ಅವಕಾಶವನ್ನ ನಾವು ಸದ್ಬಳಕೆ ಮಾಡಿಕೊಳ್ಬೇಕು. ಶ್ರಮವಿದ್ದರೆ ಮಾತ್ರ ಫಲ. ಇದಕ್ಕೆ ನಿಮಗೆ ಉತ್ತಮ ಉದಾಹರಣೆ ಶ್ರೀನಿವಾಸ್. ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ. ಸ್ವಾತಂತ್ರ್ಯಕ್ಕಾಗಿ ಬಿಜೆಪಿಯವರದ್ದು ಏನೇನೂ ಇಲ್ಲ. ಅಧಿಕಾರ ಮುಖ್ಯವಲ್ಲ, ದೇಶದ ಭವಿಷ್ಯ ಮುಖ್ಯ. ಅಧಿಕಾರವನ್ನ ತ್ಯಾಗ ಮಾಡಿದವರು ಸೋನಿಯಾ. ಅವರು ಮನಸ್ಸು ಮಾಡಿದ್ದರೆ ಪ್ರಧಾನಿಯಾಗುತ್ತಿದ್ದರು. ರಾಹುಲ್ ಗಾಂಧಿ ಪ್ರಧಾನಿಯಾಗಬಹುದಿತ್ತು. ಅವರು ಸಚಿವರಾಗಬಹುದಿತ್ತು, ಆಗಲಿಲ್ಲ. ಇಂದಿರಾ ಗಾಂಧಿ ದೇಶಕ್ಕೆ ಪ್ರಾಣ ಕೊಟ್ರು. ರಾಜೀವ್ ದೇಶದ ಐಕ್ಯತೆಗೆ ಬಲಿದಾನ ಮಾಡಿದ್ರು. ಬಿಜೆಪಿಯವರು ಯಾವ ಬಲಿದಾನ ಮಾಡಿದ್ರು ಎಂದು ಡಿ.ಕೆ. ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ನರೇಂದ್ರ ಮೋದಿ ಅಲೆ ದುರಾಡಳಿತದ ಅಲೆ, ದ್ವೇಷದ ಅಲೆ ಆಗಿದೆ: ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ವಾಗ್ದಾಳಿ

ಕುರಿ ಕಾಯುತ್ತಿದ್ದ ಸಿದ್ದರಾಮಯ್ಯನವರ ರಾಜಕೀಯ ಹಾದಿಯೇ ಅಚ್ಚರಿ; ಇಲ್ಲಿದೆ ರೋಚಕ ಸ್ಟೋರಿ

(Congress Leader Siddaramaiah and DK Shivakumar at Youth Congress Program)

Published On - 6:40 pm, Fri, 13 August 21