ನರೇಂದ್ರ ಮೋದಿ ಅಲೆ ದುರಾಡಳಿತದ ಅಲೆ, ದ್ವೇಷದ ಅಲೆ ಆಗಿದೆ: ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ವಾಗ್ದಾಳಿ
Youth Congress: ಕೊರೊನಾ ವೇಳೆ ಸರ್ಕಾರದ ಕೆಲಸ ನಾವು ಮಾಡಿದ್ದೇವೆ. ರೈತ ವಿರೋಧಿ ಕೃಷಿ ಕಾನೂನುಗಳ ವಿರುದ್ಧ ಹೋರಾಟ ಮಾಡಿದ್ದೇವೆ. ಬೆಲೆ ಏರಿಕೆಯ ವಿರುದ್ಧವೂ ನಾವು ಹೋರಾಟ ಮಾಡಿದ್ದೇವೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ವಿರುದ್ಧ ರಕ್ಷಾ ರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು: ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲೆ ಇದೆ ಅಂತಾರೆ. ನರೇಂದ್ರ ಮೋದಿ ಅಲೆ ದುರಾಡಳಿತದ ಅಲೆ, ದ್ವೇಷದ ಅಲೆ ಆಗಿದೆ. ದ್ವೇಷದ ಅಲೆಯಲ್ಲಿ ಪ್ರಧಾನಿ ಮೋದಿ ಅಲೆ ಮರೆಯಾಗಿದೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ವಿರುದ್ಧ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ಇಂದು (ಆಗಸ್ಟ್ 13) ವಾಗ್ದಾಳಿ ನಡೆಸಿದ್ದಾರೆ. ಅವರು ಐಟಿ, ಸಿಬಿಐ, ಇಡಿ ಪ್ರೈವೇಟ್ ಪ್ರಾಪರ್ಟಿ ಮಾಡಿಕೊಂಡಿದ್ದಾರೆ. ನಮ್ಮ ಕಾಂಗ್ರೆಸ್ ಟ್ವಿಟರ್ ಅಕೌಂಟ್ ಬ್ಯಾನ್ ಮಾಡ್ತಾರೆ ಎಂದು ಯುವ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಆರೋಪಿಸಿದ್ದಾರೆ.
ಬಿಜೆಪಿ ಸರ್ಕಾರ ಸಂವಿಧಾನದ ಕಗ್ಗೊಲೆ ಮಾಡ್ತಿದ್ದಾರೆ. ಐಟಿ, ಸಿಬಿಐ, ಇಡಿ ಪ್ರೈವೇಟ್ ಪ್ರಾಪರ್ಟಿ ಮಾಡಿಕೊಂಡಿದ್ದಾರೆ. ಇದೆಲ್ಲವನ್ನೂ ನಾವು ಕಿತ್ತು ತೆಗೆಯಬೇಕು. ಡಿಜಿಟಲ್ ಇಂಡಿಯಾ ಅಂತ ಹೇಳ್ತಿದ್ದಾರೆ. ಆದರೆ ಎಲ್ಲವೂ ಡಿಜಿಟಲ್ ಆಗಿದ್ದು ಕಾಂಗ್ರೆಸ್ ಅವಧಿಯಲ್ಲಿ. ಆಧಾರ್, ಮನರೇಗಾ ಎಲ್ಲವೂ ಆಗಿದ್ದು ನಮ್ಮ ಅವಧಿಯಲ್ಲಿ. ಈಗ ನಮ್ಮ ಕಾಂಗ್ರೆಸ್ ಟ್ವಿಟರ್ ಅಕೌಂಟ್ ಬ್ಯಾನ್ ಮಾಡ್ತಾರೆ. ಡಿಜಿಟಲ್ ವ್ಯವಸ್ಥೆಯನ್ನೂ ಕಿಲ್ ಮಾಡಿದ್ದಾರೆ. ಪೆಗಾಸಸ್ ಮೂಲಕ ಫೋನ್ ಟ್ಯಾಪ್ ಆಗಿದೆ ಎಂದು ರಕ್ಷಾ ರಾಮಯ್ಯ ಆರೋಪಿಸಿದ್ದಾರೆ.
ಮೋದಿ ನಾ ಖಾವೂಂಗಾ ನಾ ಖಾನೆ ದೂಂಗಾ ಅಂತಾರೆ. ಆದರೆ ಅವರ ನಾಯಕರೇ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಕೊರೊನಾ ವೇಳೆ ಸರ್ಕಾರದ ಕೆಲಸ ನಾವು ಮಾಡಿದ್ದೇವೆ. ರೈತ ವಿರೋಧಿ ಕೃಷಿ ಕಾನೂನುಗಳ ವಿರುದ್ಧ ಹೋರಾಟ ಮಾಡಿದ್ದೇವೆ. ಬೆಲೆ ಏರಿಕೆಯ ವಿರುದ್ಧವೂ ನಾವು ಹೋರಾಟ ಮಾಡಿದ್ದೇವೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ವಿರುದ್ಧ ರಕ್ಷಾ ರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಪಕ್ಷ ಸಂಘಟನೆಗೆ ಹಿರಿಯರು ಅವಕಾಶ ಕೊಟ್ಟಿದ್ದಾರೆ. ಯೂತ್ ಕಾಂಗ್ರೆಸ್ ದೇಶದ ಶಕ್ತಿ. ಬ್ರಿಟೀಷರ ವಿರುದ್ಧ ಹಿಂದೆ ನಮ್ಮ ಯೂತ್ ಕಾಂಗ್ರೆಸ್ ನಾಯಕರು ಹೋರಾಡಿದ್ದರು. ಇಂದೂ ದೇಶಕ್ಕಾಗಿ ಹೋರಾಟ ಮುಂದುವರಿದಿದೆ. ಆರು ತಿಂಗಳು ಈಗ ಮುಗಿದಿದೆ. ಇನ್ನೂ ಎರಡು ವರ್ಷ ಅವಧಿಯಿದೆ. ಎಲ್ಲರು ಒಗ್ಗಟ್ಟಿನಿಂದ ಜವಾಬ್ದಾರಿ ನಿಭಾಯಿಸಬೇಕಿದೆ. ಕೊವಿಡ್ ಎರಡನೇ ಅಲೆಯಲ್ಲಿ ಭಾಗಿಯಾಗಿದ್ದೇವೆ. ರಾಜ್ಯದಲ್ಲಿ 9 ಸಾವಿರ ರೋಗಿಗಳಿಗೆ ಬೆಡ್ ನೀಡಲಾಗಿದೆ. ಆ್ಯಂಬುಲೆನ್ಸ್ ವ್ಯವಸ್ಥೆಯನ್ನ ಮಾಡಲಾಗಿದೆ. 500 ಠಾಣೆಗಳಲ್ಲಿ ಸಹಾಯ ಮಾಡಿದ್ದೇವೆ. ನಮ್ಮ ಪೊಲೀಸ್ ನಮ್ಮ ಹೆಮ್ಮೆ ಎಂದು ಮಾಡಿದ್ದೇವೆ. 12 ಲಕ್ಷ ಫುಡ್ ಕಿಟ್ ಹಂಚಿಕೆ ಮಾಡಿದ್ದೇವೆ ಎಂದು ರಕ್ಷಾ ರಾಮಯ್ಯ ತಿಳಿಸಿದ್ದಾರೆ.
ಸರ್ಕಾರದಲ್ಲಿದ್ದವರು ಈ ಕೆಲಸ ಮಾಡಬೇಕಿತ್ತು. ಆದರೆ ಸರ್ಕಾರ ಸಂತ್ರಸ್ಥರಿಗೆ ನೆರವಾಗಲಿಲ್ಲ. ಯೂತ್ ಕಾಂಗ್ರೆಸ್ ಜನರ ಕಷ್ಟಕ್ಕೆ ನೆರವಾಗಿದೆ. ಏಳೆಂಟು ವರ್ಷಗಳಲ್ಲಿ ನಾವು ಕೆಲಸ ಮಾಡಿದ್ದೇವೆ. ಯೂತ್ ಕಾಂಗ್ರೆಸ್ ಕಾರ್ಯಕರ್ತರಾಗಿ ಮಾಡಿದ್ದೇವೆ. ರೈತ ವಿರೋಧಿ ಕಾನೂನುಗಳ ವಿರುದ್ಧ ಹೋರಾಟ, ಬೆಲೆ ಏರಿಕೆಯ ವಿರುದ್ಧವೂ ಹೋರಾಡಿದ್ದೇವೆ.
ತೇಜಸ್ವಿ ಸೂರ್ಯ ಬಿಜೆಪಿ ನ್ಯಾಷನಲ್ ಪ್ರೆಸಿಡೆಂಟ್. ನಮ್ಮ ಪಕ್ಷದ ಯೂತ್ ಅಧ್ಯಕ್ಷರು ನಮ್ಮ ರಾಜ್ಯದವರೇ. ಶ್ರೀನಿವಾಸ್ ಕೆಲಸ ತೇಜಸ್ವಿ ಮಾಡಬೇಕು. 25 ಸಂಸದರು ರಾಜ್ಯದವರಿದ್ದಾರೆ. ಸ್ವಿಮ್ಮಿಂಗ್ ಫೂಲ್ನಲ್ಲಿ ಕೆಲವರು ಇರ್ತಾರೆ. ಕೆಲವರು ಪ್ರವಾಸ ಮೋಜುಮಸ್ತಿಗಳಲ್ಲಿ ಇದ್ದಾರೆ. ಕೋಮುವಾದವನ್ನ ಬಿಚ್ಚಿ ತೋರಿಸಿದ್ದಾರೆ. ಅವರ ಸರ್ಕಾರದ ವೈಫಲ್ಯ ಅವರೇ ತೋರಿಸಿದ್ದಾರೆ. ಅವರ ಬೆಡ್ ಸ್ಕ್ಯಾಂ ಅವರೇ ತೋರಿಸಿದ್ದಾರೆ. ಇದೆಲ್ಲವನ್ನೂ ಜನ ಮರೆಯಲ್ಲ, ನೆನಪಿನಲ್ಲಿಟ್ಟುಕೊಳ್ತಾರೆ ಕಾರ್ಯಕ್ರಮದಲ್ಲಿ ರಕ್ಷಾ ರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಇಂದಿರಾ ಕ್ಯಾಂಟೀನ್ಗೆ ಅನ್ನಪೂರ್ಣೇಶ್ವರಿ ಹೆಸರು ಇಡುವುದರಿಂದ ಕಾಂಗ್ರೆಸ್ನವರಿಗೆ ಏನು ಸಮಸ್ಯೆ? ಸಂಸದ ಭಗವಂತ ಖೂಬಾ
ಜನರ ಆಶೀರ್ವಾದ ಕೇಳಲು ಹೊರಡುತ್ತಿದ್ದಾರೆ ಕೇಂದ್ರ ಸಚಿವರು; ಆಗಸ್ಟ್ 16ರಿಂದ ಪ್ರಾರಂಭ ಬಿಜೆಪಿ ಜನಾಶೀರ್ವಾದ ಯಾತ್ರೆ
(Youth Congress President Raksha Ramayya against PM Narendra Modi BJP Govt)