AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಟಿ ರವಿ ಕೊಲೆಗಡುಕ; ಕುಡಿದು ಕಾರು ಚಲಾಯಿಸಿ ಇಬ್ಬರನ್ನು ಕೊಂದು ತಲೆಮರೆಸಿಕೊಂಡಿದ್ದ: ಎಂ ಲಕ್ಷ್ಮಣ್ ವಾಗ್ದಾಳಿ

M Lakshman: ಮೇಕೆದಾಟು ಯೋಜನೆ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ತಮಿಳುನಾಡಿನಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದೆ ಎಂದು ಮೈಸೂರಿನಲ್ಲಿ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆರೋಪ ಮಾಡಿದ್ದಾರೆ.

ಸಿಟಿ ರವಿ ಕೊಲೆಗಡುಕ; ಕುಡಿದು ಕಾರು ಚಲಾಯಿಸಿ ಇಬ್ಬರನ್ನು ಕೊಂದು ತಲೆಮರೆಸಿಕೊಂಡಿದ್ದ: ಎಂ ಲಕ್ಷ್ಮಣ್ ವಾಗ್ದಾಳಿ
ಕೆಪಿಸಿಸಿ ವಕ್ತಾರ ಎಂ. ಲಕ್ಷಣ್
TV9 Web
| Updated By: ganapathi bhat|

Updated on:Aug 13, 2021 | 6:47 PM

Share

ಮೈಸೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರವಿ ಕೊಲೆಗಡುಕ ಎಂದು ಸಿ.ಟಿ. ರವಿ ವಿರುದ್ಧ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ರವಿ, 2019ರಲ್ಲಿ ಕುಣಿಗಲ್ ಬಳಿ ಕುಡಿದು ಕಾರು ಚಲಾಯಿಸಿದ್ದ. ಇಬ್ಬರನ್ನು ಕೊಂದು ಬಳಿಕ ಮದ್ರಾಸ್​ನಲ್ಲಿ ತಲೆ ಮರೆಸಿಕೊಂಡಿದ್ದ. ಇಂತಹ ಸಿ.ಟಿ. ರವಿ ಕಾಂಗ್ರೆಸ್​ ನಾಯಕರ ಬಗ್ಗೆ ಮಾತಾಡ್ತಾನೆ ಎಂದು ಲಕ್ಷ್ಮಣ್ ಹರಿಹಾಯ್ದಿದ್ದಾರೆ.

ಅಂತಹ ಸಿ.ಟಿ. ರವಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕಾಗುತ್ತದೆ. ಕೊಲೆಗಡುಕ ಸಿ.ಟಿ. ರವಿ ಈಗ ಕಾಂಗ್ರೆಸ್ ಬಗ್ಗೆ ಮಾತಾಡ್ತಾನೆ ಎಂದು ಎಂ. ಲಕ್ಷ್ಮಣ್ ಸಿ.ಟಿ.ರವಿ ವಿರುದ್ಧ ಏಕವಚನದಲ್ಲಿ ಹರಿಹಾಯ್ದಿದ್ದಾರೆ.

ಮೊದಲು ಭಾರತೀಯರು, ಆನಂತರ ಕನ್ನಡಿಗರು ಎಂಬ ಹೇಳಿಕೆಗೆ ಲಕ್ಷ್ಮಣ್ ತಿರುಗೇಟು ನೀಡಿದ್ದಾರೆ. ಮೇಕೆದಾಟು ಯೋಜನೆ ವಿಚಾರದಲ್ಲಿ ಕೇಂದ್ರ ಮೋಸಮಾಡ್ತಿದೆ. ಬಿಜೆಪಿ ನಾಯಕ ಸಿ.ಟಿ. ರವಿಗೆ ನಾಚಿಕೆಯಾಗಬೇಕು. ಮೇಕೆದಾಟು ವಿಚಾರದಲ್ಲಿ ಬಿಜೆಪಿಯವರದ್ದು ದ್ವಂದ್ವ ನಿಲುವು. ಮೇಕೆದಾಟು ಯೋಜನೆ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ತಮಿಳುನಾಡಿನಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದೆ ಎಂದು ಮೈಸೂರಿನಲ್ಲಿ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆರೋಪ ಮಾಡಿದ್ದಾರೆ.

ಈಶ್ವರಪ್ಪ ಸರ್ಕಾರದ ವ್ಯವಸ್ಥೆಯನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಕಾಂಗ್ರೆಸ್ ಬಗ್ಗೆ ಸಚಿವ ಈಶ್ವರಪ್ಪ ಅವಾಚ್ಯ ಶಬ್ದ ಬಳಕೆ ವಿಚಾರವಾಗಿಯೂ ಲಕ್ಷ್ಮಣ್ ಮಾತನಾಡಿದ್ದಾರೆ. ಈಶ್ವರಪ್ಪ ಬಿಜೆಪಿ ಮೇಲಿರುವ ಕೋಪವನ್ನು ಕಾಂಗ್ರೆಸ್ ಮೇಲೆ ತೋರಿಸುತ್ತಿದ್ದಾರೆ. ಇವರಿಗೇನಾದ್ರೂ ಸಂಸ್ಕೃತಿ, ಕಾಮನ್ಸೆಸ್ಸ್ ಇದೆಯಾ? ಈಶ್ವರಪ್ಪನವರಿಗೆ ಮಾನ ಮರ್ಯಾದೆ ಇದೆಯಾ ಎಂಬುದನ್ನು ಮೊದಲು ತಿಳಿಸಿ. ನಿಮ್ಮ ಮಗ ಕಾಂತೇಶ್ ಬೆಂಗಳೂರಿನ ಪೀಣ್ಯದಲ್ಲಿ ಸೈಟ್ ಖರೀದಿಸಿದ್ದಾರೆ. 4 ಇಂಡಸ್ಟ್ರಿಯಲ್ ಸೈಟು ಖರೀದಿಸಿದ್ದೀರಿ, ಅದರಲ್ಲಿ ಏನು ಮಾಡ್ತಿದ್ದೀರಿ? ಒಬ್ಬರಿಗೆ ನಾಲ್ಕು ಸೈಟ್ ಹೇಗೆ ನೀಡ್ತಾರೆ? ಇದರ ಒಟ್ಟು ಬೆಲೆ ಎಷ್ಟು? ಇಡಿ, ಐಟಿ ಯಾಕೆ ಇವರ ಬಗ್ಗೆ ಏಕೆ ತನಿಖೆ ಮಾಡುತ್ತಿಲ್ಲ. ಕೇವಲ ಕಾಂಗ್ರೆಸ್ ನಾಯಕರ ಮೇಲೆ ಮಾತ್ರಾ ರೈಡ್ ಮಾಡೋದಾ? ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಈ ಬಗ್ಗೆ ನನ್ನ ಬಳಿ ಸಂಪೂರ್ಣ ದಾಖಲಾತಿ ಇದೆ. ಈಶ್ವರಪ್ಪ ಸರ್ಕಾರದ ವ್ಯವಸ್ಥೆಯನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ನಿಮ್ಮ ಮಗ ಭ್ರಷ್ಟಾಚಾರ ಮಾಡಿದ್ದಾರೆ. ಇದರ ಬಗ್ಗೆ ಇಡಿ ಹಾಗೂ ಐಟಿಗೆ ದೂರು ನೀಡುತ್ತಿದ್ದೇವೆ. ಯಾವ ರೀತಿ ತನಿಖೆ ಮಾಡುತ್ತಾರೋ ನೋಡುತ್ತೇವೆ. ಈಶ್ವರಪ್ಪ ಮೊದಲು ಹುಚ್ಚರ ರೀತಿ ಮಾತನಾಡುವುದನ್ನು ಬಿಡಲಿ ಎಂದು ಲಕ್ಷ್ಮಣ್ ಹೇಳಿದ್ದಾರೆ.

ಇದನ್ನೂ ಓದಿ: ವಿವಾದಾತ್ಮಕ ಹೇಳಿಕೆಗಳ ಹಿನ್ನೆಲೆ; ಕೆಎಸ್ ಈಶ್ವರಪ್ಪಗೆ ಶಿವಮೊಗ್ಗ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಿಂದ ಹೆಚ್ಚಿನ ಭದ್ರತೆ

ಅಂಬೇಡ್ಕರರನ್ನು ಎರಡು ಬಾರಿ ಸೋಲಿಸಿದ್ದು ಕಾಂಗ್ರೆಸ್; ಸಿದ್ದರಾಮಯ್ಯ ತಮ್ಮ ಸಾಫ್ಟ್​​​ವೇರ್ ಅಪ್​ಡೇಟ್ ಮಾಡ್ಕೊಳ್ಳಲಿ- ಸಿಟಿ ರವಿ

(Congress M Lakshman against BJP Leader CT Ravi KS Eshwarappa at Mysuru)

Published On - 4:16 pm, Fri, 13 August 21