
ಚಿತ್ರದುರ್ಗ, ಅಕ್ಟೋಬರ್ 03: ಕಾರು ಪಲ್ಟಿ (car accident) ಹೊಡೆದ ಪರಿಣಾಮ ಮಗು ಸೇರಿ ಮೂವರು ಸಾವನ್ನಪ್ಪಿರುವಂತಹ (death) ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಮೇಟಿಕುರ್ಕೆ ಬಳಿ ನಡೆದಿದೆ. ಯಾದಗಿರಿ ಮೂಲದ ಮಲ್ಲಮ್ಮ(26), ಸರೋಜಮ್ಮ(25) ಮತ್ತು ಪುಟ್ಟ ಮಗು ಮೃತರು. ಸ್ಥಳಕ್ಕೆ ಡಿವೈಎಸ್ಪಿ ಶಿವಕುಮಾರ್ ಮತ್ತು ಸಿಪಿಐ ಗುಡ್ಡಪ್ಪ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಹಿರಿಯೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಗೂಡ್ಸ್ ವಾಹನ ಪಲ್ಟಿಯಾಗಿ ಮಹಿಳೆ ಸಾವನ್ನಪ್ಪಿದ್ದು, ಎಂಟು ಜನರು ಗಂಭೀರ ಗಾಯಗೊಂಡಿರುವಂತಹ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಕಬ್ಬಳಿ ಗೇಟ್ ಸಮೀಪದ ವೇದಾವತಿ ನದಿ ಬಳಿ ನಡೆದಿದೆ. ಬಿ.ಎಂ.ಕೊಪ್ಪಲು ನಿವಾಸಿ ಈಶ್ವರಮ್ಮ(55) ಮೃತ ಮಹಿಳೆ.
ಇದನ್ನೂ ಓದಿ: ಕೊಪ್ಪಳ ಯಲ್ಲಾಲಿಂಗ ಕೊಲೆ ಕೇಸ್: ಸಚಿವ ಶಿವರಾಜ ತಂಗಡಗಿ ಆಪ್ತ ಸೇರಿ 9 ಆರೋಪಿಗಳು ಖುಲಾಸೆ
ನಾಮಕರಣ ಮುಗಿಸಿ ಬರುವಾಗ ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ದುರ್ಘಟನೆ ಸಂಭವಿಸಿದೆ. ಗಾಯಾಳುಗಳನ್ನು ಕಡೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಉಡುಪಿಯ ಮಲ್ಪೆ ಬೀಚ್ನಲ್ಲಿ ಇಬ್ಬರು ಪ್ರವಾಸಿಗರ ಪೈಕಿ ಓರ್ವ ನೀರುಪಾಲಾಗಿದ್ದು, ಮರ್ತೋವನ ಸ್ಥಿತಿ ಗಂಭೀರವಾಗಿರುವಂತಹ ಘಟನೆ ನಡೆದಿದೆ. ಹಾಸನದ ಮಿಥುನ್ ಮೃತ ಯುವಕ. ನೀರುಪಾಲಾಗುತ್ತಿದ್ದ ಶಶಾಂಕ್ನನ್ನ ಯುವಕರು ರಕ್ಷಿಸಿದ್ದು, ಸ್ಥಿತಿ ಗಂಭೀರವಾಗಿದೆ. ಸದ್ಯ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ಕೆರೆಯಲ್ಲಿ ಈಜಲು ಹೋಗಿ ಮೂವರು ಬಾಲಕರು ನೀರುಪಾಲು
ಉಡುಪಿ ಜಿಲ್ಲಾಡಳಿತದ ವಿರುದ್ಧ ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಸರಾ ರಜೆ ಹಿನ್ನೆಲೆಯಲ್ಲಿ ಮಲ್ಪೆ ಬೀಚ್ಗೆ ಸಾವಿರಾರು ಪ್ರವಾಸಿಗರು ಆಗಮಿಸಿದ್ದಾರೆ. ಆದರೆ ಕೇವಲ ಮೂವರು ಲೈಫ್ಗಾರ್ಡ್ ಇದ್ದು, ಅವರಿಗೂ ಈಜು ಬರಲ್ಲವೆಂಬ ಆರೋಪ ಮಾಡಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:35 pm, Fri, 3 October 25