ಚಿತ್ರದುರ್ಗ, ಮೇ.23: ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ಅರೆ ಬೆತ್ತಲೆಯಾಗಿ ಬಾಲಕಿಯರ ವಸತಿ ನಿಲಯ(Girls Hostel) ಪ್ರವೇಶಿಸಿದ ಘಟನೆ ಚಿತ್ರದುರ್ಗ(Chitradurga)ದ ಐಯುಡಿಪಿ ಬಡಾವಣೆಯ ಹಾಸ್ಟೆಲ್ನಲ್ಲಿ ನಡೆದಿದೆ. ಕೆಲ ಕಾಲ ಈ ವಿಕೃತ ವ್ಯಕ್ತಿ, ಹಾಸ್ಟೆಲ್ ವಿದ್ಯಾರ್ಥಿನಿಯರಲ್ಲಿ ಆತಂಕ ಸೃಷ್ಠಿಸಿದ್ದಾನೆ. ಕೂಡಲೇ ಎಚ್ಚೆತ್ತ ಸ್ಥಳೀಯರು, ಆರೋಪಿಯನ್ನು ಹಿಡಿದು ಬಡಾವಣೆ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಆಟೋದಲ್ಲಿ ಠಾಣೆಗೆ ಕರೆದೊಯ್ಯುವ ವೇಳೆ ಆರೋಪಿ ಕಣ್ಣೀರು ಹಾಕಿದ್ದು, ಈ ಘಟನೆ ಚಿತ್ರದುರ್ಗದ ಬಡಾವಣೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು: ನಗರದ ಹೊರವಲಯ ಬಂಡೇಪಾಳ್ಯ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಗೆ ಚಾಕು ಇರಿದ ಘಟನೆ ನಡೆದಿದೆ. ಕಾರು ಚಾಲಕ ನರಸಿಂಹ(37) ಚಾಕು ಇರಿತಕ್ಕೊಳಗಾದ ವ್ಯಕ್ತಿ. ಮಂಜು ಅಲಿಯಾಸ್ ಜೋಕರ್ ಮಂಜು ಮತ್ತು ಆತನ ಮಗ ದೀಪಕ್ ಆರೋಪಿಗಳು. ಮುನಿರಾಜು ಎಂಬ ಸ್ನೇಹಿತನ ಮನೆಯಲ್ಲಿ ಮಟನ್ ಊಟದ ಪಾರ್ಟಿಯಲ್ಲಿ ನರಸಿಂಹ ಮತ್ತು ಜೋಕರ್ ಮಂಜು ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಅವಾಚ್ಯ ಶಬ್ದಗಳಿಂದ ಇಬ್ಬರು ಬೈದಾಡಿಕೊಂಡು ಕಿರಿಕ್ ಮಾಡಿಕೊಂಡು ಅಲ್ಲಿಂದ ನರಸಿಂಹ ಹೊರಟು ಹೋಗಿದ್ದ.
ಇದನ್ನೂಓದಿ:ಬಾಕಿ ಹಣಕ್ಕಾಗಿ ವ್ಯಕ್ತಿಯನ್ನು ಅರೆಬೆತ್ತಲೆಯಾಗಿ ಕೂಡಿಸಿದ ಪೆಟ್ರೋಲ್ ಬಂಕ್ ಮಾಲೀಕರು
ಬಳಿಕ ಪೋನ್ ಮಾಡಿ ಮಗ ದೀಪಕ್ನನ್ನು ಜೋಕರ್ ಮಂಜ ಕರೆಸಿಕೊಂಡಿದ್ದ . ಬಂಡೇಪಾಳ್ಯ ಪೋಲಿಸ್ ಠಾಣಾ ಸಮೀಪದ ಖಾಲಿ ಜಾಗದಲ್ಲಿ ಕುಳಿತಿದ್ದ ನರಸಿಂಹ, ಅಲ್ಲಿಗೆ ಹೋದ ಜೋಕರ್ ಮಂಜ ಮತ್ತು ಆತನ ಮಗನಿಂದ ನರಸಿಂಹ ಜೊತೆ ಮತ್ತೆ ಗಲಾಟೆ ನಡೆದಿದೆ. ಈ ವೇಳೆ ಚಾಕುವಿನಿಂದ ನರಸಿಂಹನ ಎದೆ ಭಾಗಕ್ಕೆ ಇರಿದು ಹಲ್ಲೆ ಮಾಡಿದ್ದಾರೆ. ಅಲ್ಲಿಂದ ಜೋರಾಗಿ ಕಿರುಚಾಡಿಕೊಂಡು ಬಂಡೇಪಾಳ್ಯ ಪೋಲಿಸ್ ಠಾಣೆಗೆ ನರಸಿಂಹ ಓಡಿ ಬಂದಿದ್ದ. ಕೂಡಲೇ ಪೋಲೀಸರು ಆತನನ್ನ ಸೇಂಟ್ ಜಾನ್ಸ್ ಆಸ್ಪತ್ರೆಗೆ ರವಾನೆ ಮಾಡಿದ್ದರು. ಇದೀಗ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ನರಸಿಂಹ ಹೋರಾಟ ನಡೆಸುತ್ತಿದ್ದು, ಘಟನೆ ಸಂಬಂಧ ಬಂಡೇಪಾಳ್ಯ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ