Viral Video: ಬಿಕಿನಿ ತೊಟ್ಟು ಅರೆಬೆತ್ತಲೆಯಾಗಿ ಬಸ್ಸಿನಲ್ಲಿ ಅಡ್ಡಾಡಿದ ಯುವತಿ; ವೈರಲ್ ಆಯ್ತು ವಿಡಿಯೋ

ದೆಹಲಿಯಲ್ಲಿ ಯುವತಿಯೊಬ್ಬಳು ಬ್ರಾ ಮತ್ತು ಪ್ಯಾಂಟಿ ಧರಿಸಿ ಅರೆ ಬೆತ್ತಲಾಗಿ ಬಸ್ಸಿನಲ್ಲಿ ಪ್ರಯಾಣಿಸಿದ್ದಾಳೆ. ಈ ಕುರಿತ ವಿಡಿಯೋವೊಂದು ಇದೀಗ ಸಖತ್ ವೈರಲ್ ಆಗುತ್ತಿದ್ದು, ಸಾರ್ವಜನಿಕ ಸ್ಥಳದಲ್ಲಿ ಆಕೆ ತೋರಿದ ಅತಿರೇಕದ ವರ್ತನೆಯನ್ನು ಕಂಡು ನೆಟ್ಟಿಗರು ಗರಂ ಆಗಿದ್ದಾರೆ. 

Viral Video: ಬಿಕಿನಿ ತೊಟ್ಟು ಅರೆಬೆತ್ತಲೆಯಾಗಿ ಬಸ್ಸಿನಲ್ಲಿ ಅಡ್ಡಾಡಿದ ಯುವತಿ; ವೈರಲ್ ಆಯ್ತು ವಿಡಿಯೋ
ವೈರಲ್ ವಿಡಿಯೋ ಇಲ್ಲಿದೆ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 18, 2024 | 12:47 PM

ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಹಲವಾರು ವಿಡಿಯೋಗಳು ಹರಿದಾಡುತ್ತಿರುತ್ತವೆ. ಅದರಲ್ಲಿ ಕೆಲವೊಂದು ಅತಿರೇಕದ ದೃಶ್ಯಗಳು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗುತ್ತಿರುತ್ತವೆ. ಸದ್ಯ ಅದೇ ರೀತಿಯ ಘಟನೆಯೊಂದು ದೆಹಲಿಯಲ್ಲಿ ನಡೆದಿದ್ದು, ಯುವತಿಯೊಬ್ಬಳು ಕೇವಲ ಒಳ ಉಡುಪನ್ನು ಧರಿಸಿ ಅರೆಬೆತ್ತಲೆಯಾಗಿ ಬಸ್ಸಿನಲ್ಲಿ ಅಡ್ಡಾಡ್ಡಿದ್ದಾಳೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ಮಹಿಳೆಯ ಅತಿರೇಕದ ವರ್ತನೆಯನ್ನು ಕಂಡು ನೆಟ್ಟಿಗರು ಗರಂ ಆಗಿದ್ದಾರೆ.

ಸೆಲೆಬ್ರಿಟಿಗಳು, ಇನ್ಫ್ಲುಯೆನ್ಸರ್ ಗಳು ಫೋಟೋಶೂಟ್ ಗಳಿಗಾಗಿ ಬಿಕಿನಿ ಧರಿಸುವುದು ಹೊಸದೇನಲ್ಲ. ಆದರೆ ಇಲ್ಲೊಬ್ಬಳು ಯುವತಿ ಮಾತ್ರ ಸಾರ್ವಜನಿಕ ಸ್ಥಳದಲ್ಲಿ ಬಿಕಿನಿ ತೊಟ್ಟು ಓಡಾಡುವ ದುಸ್ಸಾಹಸಕ್ಕೆ ಕೈ ಹಾಕಿದ್ದಾಳೆ. ಹೌದು ದೆಹಲಿಯಲ್ಲಿ ಯುವತಿಯೊಬ್ಬಳು  ಕೇವಲ ಬ್ರಾ ಮತ್ತ ಪ್ಯಾಂಟಿ ಧರಿಸಿ   ಸಾರ್ವಜನಿಕವಾಗಿ  DTC ಬಸ್ಸಿನಲ್ಲಿ ಅರೆಬೆತ್ತಲೆಯಾಗಿ ಪ್ರಯಾಣಿಸಿದ್ದಾಳೆ.

ಈ ಕುರಿತ ವಿಡಿಯೋವನ್ನು @kamaalrkhan ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ದಿಲ್ಲಿ ಬಸ್ಸಿನಲ್ಲಿ ಬಟ್ಟೆ ಇಲ್ಲದೆ ಓಡಾಡಿದ ಮಹಿಳೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವೈರಲ್​ ವಿಡಿಯೋ ಇಲ್ಲಿದೆ:

ವೈರಲ್ ವಿಡಿಯೋದಲ್ಲಿ ದೆಹಲಿಯ ಬಸ್ಸ್ ಒಂದರಲ್ಲಿ ಮಹಿಳೆಯೊಬ್ಬಳು ಕೇವಲ ಬ್ರಾ ಮತ್ತು ಪ್ಯಾಂಟಿಯನ್ನು ಧರಿಸಿ ಅರೆಬೆತ್ತಲೆಯಾಗಿ ನಿಂತಿರುವ ದೃಶ್ಯವನ್ನು ಕಾಣಬಹುದು. ಆಕೆಯ ಈ ಅವತಾರವನ್ನು ನೋಡಲಾರದೆ ಆಕೆಯ ಹತ್ತಿರ ಇದ್ದಂತಹ ಸಹ ಪ್ರಯಾಣಿಕರ ಅಲ್ಲಿಂದ ಎದ್ದು ಹೋಗಿದ್ದಾರೆ.

ಇದನ್ನೂ ಓದಿ: ಶಿವನೊಂದಿಗೆ ಜೋಗಿನಿಯರು, ತೃತೀಯಲಿಂಗಿಗಳ ವಿವಾಹ! ಈ ಆಚರಣೆ ಯಾಕೆ? 

ಏಪ್ರಿಲ್ 18 ರಂದು ಹಂಚಿಕೊಳ್ಳಲಾದ ಈ ವಿಡಿಯೋ ನಾಲ್ಕುವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಸಾರ್ವಜನಿಕ ಸ್ಥಳದಲ್ಲಿ ಯುವತಿಯ ಅತಿರೇಕದ ವರ್ತನೆಯನ್ನು ಕಂಡು ನೆಟ್ಟಿಗರು ಗರಂ ಆಗಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ