Viral Video: ವಿಮಾನದಲ್ಲಿ ನಮಾಜ್ ಮಾಡಿದ ಮುಸ್ಲಿಂ ವ್ಯಕ್ತಿ; ಸಾರ್ವಜನಿಕ ಸ್ಥಳಗಳಲ್ಲಿ ಹೀಗೆ ಮಾಡುವುದು ಸರಿಯೇ?
ಮುಸ್ಲಿಂ ವ್ಯಕ್ತಿಯೊಬ್ಬರು ವಿಮಾನದಲ್ಲಿ ನಮಾಜ್ ಮಾಡುವ ಮೂಲಕ ಸಹ ಪ್ರಯಾಣಿಕರಿಗೂ ಅತ್ತಿಂದ ಇತ್ತ ಹೋಗಿ ಬರಲು ಅಡ್ಡಿಯುಂಟುಮಾಡಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿಯ ವರ್ತನೆ ಸರಿಯೇ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡಿದ ಘಟನೆಗಳ ಸುದ್ದಿಗಳು ಆಗಾಗ್ಗೆ ಕೇಳಿಬರುತ್ತಿರುತ್ತವೆ. ಈ ಹಿಂದೆ ನಾಲ್ವರು ಮುಸ್ಲಿಂ ವ್ಯಕ್ತಿಗಳು ರೈಲಿನಲ್ಲಿ ನಮಾಜ್ ಮಾಡುವ ಮೂಲಕ ಸಹ ಪ್ರಯಾಣಿಕರಿಗೆ ರೈಲು ಹತ್ತಲು ಮತ್ತು ಇಳಿಯಲು ತೊಂದರೆಯುಂಟುಮಾಡಿದ್ದಂತಹ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಮುಸ್ಲಿಂ ವ್ಯಕ್ತಿಯೊಬ್ಬರು ವಿಮಾನದಲ್ಲಿ ನಮಾಜ್ ಮಾಡುವ ಮೂಲಕ ಸಹ ಪ್ರಯಾಣಿಕರಿಗೂ ಅತ್ತಿಂದ ಇತ್ತ ಚಲಿಸಲು ಅಡ್ಡಿಯುಂಟುಮಾಡಿದ್ದಾರೆ. ಈ ಕುರಿತ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಅವರು ಹೇಗೆ ನಮಾಜ್ ಮಾಡುತ್ತಾರೆ, ಈ ವರ್ತನೆ ಸರಿಯೇ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.
ಈ ಕುರಿತ ವಿಡಿಯೋವನ್ನು @RadioGenoa ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಶೌಚಾಲಕ್ಕೆ ಹೋಗಲು ಕೂಡಾ ಸಾಧ್ಯವಾಗುತ್ತಿಲ್ಲ ಏಕೆಂದರೆ ಈ ಮುಸ್ಲಿಂ ವ್ಯಕ್ತಿ ನಮಾಜ್ ಮಾಡುತ್ತಿದ್ದಾರೆ, ಅವರಿಗೆ ತೊಂದರೆ ಕೊಡಲು ಬಯಸುವುದಿಲ್ಲ; ಈ ಪರಿಸ್ಥಿತಿ ನಿಮಗೂ ಎದುರಾದರೆ ನೀವು ಏನು ಮಾಡುತ್ತೀರಿ?” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
You can’t go to bathroom because this Muslim has to pray to Allah and doesn’t want to be disturbed. What would you have done in this situation? pic.twitter.com/QBdvheDXPV
— RadioGenoa (@RadioGenoa) April 17, 2024
ವೈರಲ್ ವಿಡಿಯೋದಲ್ಲಿ ಆಕಾಶದೆತ್ತರದಲ್ಲಿ ಹಾರಡುತ್ತಿರುವ ವಿಮಾನದಲ್ಲಿ ಮುಸ್ಲಿ ವ್ಯಕ್ತಿಯೊಬ್ಬರು ನಮಾಜ್ ಮಾಡುತ್ತಿರುವ ದೃಶ್ಯವನ್ನು ಕಾಣಬಹುದು. ಆ ವ್ಯಕ್ತಿ ನಮಾಜ್ ಮಾಡುತ್ತಿದ್ದ ಕಾರಣದಿಂದ ಸಹ ಪ್ರಯಾಣಿಕರಿಗೂ ಅತ್ತಿಂದ ಇತ್ತ ಓಡಾಡಲು, ಶೌಚಾಲಯಕ್ಕೆ ಹೋಗಲು ತೊಂದರೆಯುಂಟಾಗಿದೆ.
ಇದನ್ನೂ ಓದಿ: ಬಿಕಿನಿ ತೊಟ್ಟು ಅರೆಬೆತ್ತಲೆಯಾಗಿ ಬಸ್ಸಿನಲ್ಲಿ ಅಡ್ಡಾಡಿದ ಯುವತಿ; ವೈರಲ್ ಆಯ್ತು ವಿಡಿಯೋ
ಇಂದು ಮುಂಜಾನೆ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ 3.3 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡುವ ಮೂಲಕ ಇತರರಿಗೆ ತೊಂದರೆಯುಂಟುಮಾಡುವುದು ಎಷ್ಟು ಸರಿ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ