ಬಡ ಅರ್ಚಕರ ವೇತನವನ್ನು ವಾಪಸ್ ಕೇಳುವುದು ಎಷ್ಟು ಸರಿ : ಹಿರೇಮಗಳೂರು ಕಣ್ಣನ್ ಪ್ರಶ್ನೆ​​

| Updated By: ವಿವೇಕ ಬಿರಾದಾರ

Updated on: Jan 23, 2024 | 12:35 PM

ರಾಜ್ಯ ಕಾಂಗ್ರೆಸ್ ಸರ್ಕಾರ ಅರ್ಚಕರಿಗೆ ನೀಡಿದ್ದ ಸಂಬಳ ವಾಪಸ್​ ಕೇಳಿದೆ. ಚಿಕ್ಕಮಗಳೂರು ಜಿಲ್ಲಾಡಳಿತ ಕೋದಂಡ ರಾಮ ಮಂದಿರದಲ್ಲಿ ಪೂಜೆ ಮಾಡುತ್ತಿರುವ ಅರ್ಚಕ, ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್​​ ಅವರ ವೇತನ ತೆಡೆ ಹಿಡಿದು, ಹಿಂದ ನೀಡಿದ್ದ ವೇತನ್ನೂ ವಾಪಸ್​ ನೀಡುವಂತೆ ಹೇಳಿದೆ.

ಬಡ ಅರ್ಚಕರ ವೇತನವನ್ನು ವಾಪಸ್ ಕೇಳುವುದು ಎಷ್ಟು ಸರಿ : ಹಿರೇಮಗಳೂರು ಕಣ್ಣನ್ ಪ್ರಶ್ನೆ​​
ಹಿರೇಮಗಳೂರು ಕಣ್ಣನ್
Follow us on

ಚಿಕ್ಕಮಗಳೂರು, ಜನವರಿ 23: ಮುಜರಾಯಿ ಇಲಾಖೆ ಮೂಲಕ ದೇವಾಲಯಗಳನ್ನು ಸಂರಕ್ಷಿಸಬೇಕು. 44 ವರ್ಷದಿಂದ ದೇವಾಲಯದಲ್ಲಿ ಅರ್ಚಕನಾಗಿ ಕೆಲಸ ಮಾಡಿದ್ದೇನೆ. ದೇವಾಲಯಕ್ಕೆ ಆದಾಯ ಇಲ್ಲ ಎಂದು ಸಂಬಳ ತಡೆಹಿಡಿದು, ನೀಡಿದ್ದ ವೇತನ ವಾಪಸ್ ಕೇಳುವುದು ಸರಿಯಲ್ಲ. ದೇವಾಲಯಗಳಲ್ಲಿ ಅರ್ಚಕರ ಕೊರತೆ ಇದೆ. ಬಡ ಅರ್ಚಕರ ವೇತನವನ್ನು ವಾಪಸ್ ಕೇಳುವುದು ಎಷ್ಟು ಸರಿ. ಜಿಲ್ಲಾಡಳಿತದ ಈ ನಡೆ ಅಚ್ಚರಿತರಿಸಿದೆ ಎಂದು ಕನ್ನಡದ ಪೂಜಾರಿ, ಅರ್ಚಕ ಹಿರೇಮಗಳೂರು ಕಣ್ಣನ್  (Hiremagaluru Kannan) ಅಸಮಾಧನ ವ್ಯಕ್ತಪಡಿಸಿದರು.

ಚಿಕ್ಕಮಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ಸಾಹಿತಿಗಳಿಗೆ ಪ್ರೋತ್ಸಾಹ ನೀಡಬೇಕು. ಬಡ ಅರ್ಚಕರ ಸಂಬಳವನ್ನು ವಾಪಸ್ ಕೇಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಸರ್ಕಾರ  ನೀಡಿರುವ ನೋಟಿಸ್ ಬಗ್ಗೆ ಹಿರೇಮಗಳೂರು ಕಣ್ಣನ್​ ಅವರು ಮಾಜಿ ಸಚಿವ ಸಿಟಿ ಅವರಿಗೆ ತಿಳಿಸಿದ್ದು “ಯಾರು ಕೂಡ ಹಣ ವಾಪಸ್​ ನೀಡುವುದು ಅವಶ್ಯಕತೆ ಇಲ್ಲ” ಎಂದು ಸಿಟಿ ರವಿ ಹೇಳಿದ್ದಾರೆ.

ಇದನ್ನೂ ಓದಿ: ಅರ್ಚಕರ ವೇತನ ವಾಪಸ್​ ಕೇಳಿದ ಸರ್ಕಾರ: ಹಿರೇಮಗಳೂರು ಕಣ್ಣನ್​​ಗೆ ನೋಟಿಸ್

ಸರ್ಕಾರ ಹುಚ್ಚು ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಇದು. ನೀಡಿದ್ದ ವೇತನವನ್ನು ವಾಪಸ್​ ನೀಡುವಂತೆ ಹಿರೇಮಗಳೂರು ಕಣ್ಣನ್ ಅವರಿಗೆ ನೋಟಿಸ್​ ನೀಡಲಾಗಿದೆ. ಇದು ಕನ್ನಡದ ಪೂಜಾರಿಗೆ ಮಾಡುವ ದೊಡ್ಡ ಅಪಚಾರವಾಗಿದೆ. ಅರ್ಚಕರಿಗೆ ಮಾಡುತ್ತಿರುವ ದೊಡ್ಡ ಅವಮಾನವಿದು. ಹಿಂದೂ ಸಮಾಜ ಇದನ್ನೂ ಒಪ್ಪುವುದಿಲ್ಲ. ನಿಮಗೂ ಹೀಗೆ ಸಂಬಳ ವಾಪಸ್ ನೀಡಿ ಅಂದರೇ ಹೇಗೆ ಆಗುತ್ತದೆ? ಕಳೆದ  44 ವರ್ಷದಿಂದ ಅವರು ಕೋದಂಡರಾಮನ ಪೂಜೆ ಮಾಡಿದ್ದಾರೆ. ಇದರಿಂದ ನನಗೆ ತುಂಬಾ ಬೇಸರವಾಗಿದೆ ಎಂದು ಮಾಜಿ ಸಚಿವ ಕೆಎಸ್​ ಈಶ್ವರಪ್ಪ ಹೇಳಿದರು.

ಮುಜರಾಯಿ ಇಲಾಖೆ ಸಚಿವರು ರಾಜ್ಯದ ಜನರ ಕ್ಷಮೆ ಕೇಳಬೇಕು. ತಪ್ಪು ಆಗಿರುವುದನ್ನು ಒಪ್ಪಿಕೊಳ್ಳಬೇಕು. ಎಲ್ಲ ಹಿಂದೂ ಭಕ್ತರಿಗೆ ಅವಮಾನವಾಗಿದೆ. ತಹಸೀಲ್ದಾರ ಮತ್ತು ಜಿಲ್ಲಾಧಿಕಾರಿಯನ್ನು ಕೂಡಲೇ ಅಮಾನತ್ತು ಮಾಡಿ. ರಾಜ್ಯದಲ್ಲಿ 50 ಸಾವಿರ ಅರ್ಚಕರು ಇದ್ದಾರೆ. ಕೂಡಲೇ ನೋಟಿಸ್ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ಹಿರೆಮಗಳೂರು ಕಣ್ಣನ್​ಗೆ ನೋಟಿಸ್​ ಏಕೆ?

ಚಿಕ್ಕಮಗಳೂರಿನ ಕಲ್ಯಾಣ ಕೋದಂಡ ರಾಮನ ದೇವಾಲಯಕ್ಕೆ ಹೆಚ್ಚಿನ ಆದಾಯ ಬರುತ್ತಿಲ್ಲ. ದೇವಾಲಯಕ್ಕೆ ಬರುತ್ತಿರುವ ಆದಾಯಕ್ಕಿಂತ ಅರ್ಚಕರಿಗೆ ನೀಡುತ್ತಿರುವ ವೇತನ ಹೆಚ್ಚಾಗಿದೆ. ಈ ಕಾರಣ ನೀಡಿ ರಾಜ್ಯ ಸರ್ಕಾರ ಹಿರೇಮಗಳೂರು ಕಣ್ಣನ್​ ಅವರಿಗೆ ಕಳೆದ 10 ವರ್ಷ ನೀಡಿದ್ದ 7500 ರೂ. ವೇತನದಲ್ಲಿ ವರ್ಷಕ್ಕೆ 4500 ರೂ. ಅಂತೆ 10 ವರ್ಷಕ್ಕೆ 4,74,000 ರೂ. ನೀಡುವಂತೆ ನೋಟಿಸ್​ ನೀಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:13 pm, Tue, 23 January 24