ವಿಜಯನಗರ ಶ್ರೀಕೃಷ್ಣದೇವರಾಯ ಘಟಿಕೋತ್ಸವ: ಎನ್ ತಿಪ್ಪಣ್ಣ, ಹಿರೇಮಗಳೂರು ಕಣ್ಣನ್, ನರೇಂದ್ರಕುಮಾರ್ ಬಲ್ದೋಟ್ಗೆ ಗೌರವ ಡಾಕ್ಟರೇಟ್
ಸಮಾಜಸೇವೆ ಸಲ್ಲಿಸಿದ ಬಳ್ಳಾರಿಯ ಮಾಜಿ ಎಂಎಲ್ಸಿ, ಎನ್ ತಿಪ್ಪಣ್ಣ, ಕನ್ನಡದ ಪೂಜಾರಿ ಎಂದು ಬಿರುದಾಂಕಿತ ಹಿರೇಮಗಳೂರು ಕಣ್ಣನ್, ಉದ್ಯಮ, ಶಿಕ್ಷಣ, ಪರಿಸರ ಸಂರಕ್ಷಣೆ, ಸಮಾಜಸೇವೆ ಸಲ್ಲಿಸಿದ ನರೇಂದ್ರಕುಮಾರ್ ಬಲ್ದೋಟ್ ರಿಗೆ ಗೌರವ ಡಾಕ್ಟರೇಟ್ ಘೋಷಿಸಲಾಗಿದೆ.
ಬಳ್ಳಾರಿ: ಜಿಲ್ಲೆಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ 8ನೇ ವಾರ್ಷಿಕ ಘಟಿಕೋತ್ಸವ ನಾಳೆ ವಿವಿ ಆವರಣದಲ್ಲಿರುವ ಬಯಲು ಮಂದಿರದಲ್ಲಿ ಬೆಳಗ್ಗೆ 11ಕ್ಕೆ ನಡೆಯಲಿದೆ. ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ಘೋಷಿಸಲಾಗಿದೆ. ಸಮಾಜಸೇವೆ ಸಲ್ಲಿಸಿದ ಬಳ್ಳಾರಿಯ ಮಾಜಿ ಎಂಎಲ್ಸಿ, ಎನ್ ತಿಪ್ಪಣ್ಣ, ಕನ್ನಡದ ಪೂಜಾರಿ ಎಂದು ಬಿರುದಾಂಕಿತ ಹಿರೇಮಗಳೂರು ಕಣ್ಣನ್, ಉದ್ಯಮ, ಶಿಕ್ಷಣ, ಪರಿಸರ ಸಂರಕ್ಷಣೆ, ಸಮಾಜಸೇವೆ ಸಲ್ಲಿಸಿದ ನರೇಂದ್ರಕುಮಾರ್ ಬಲ್ದೋಟ್ ರಿಗೆ ಗೌರವ ಡಾಕ್ಟರೇಟ್ ಘೋಷಿಸಲಾಗಿದೆ.
ಕುಲಪತಿ ಪ್ರೊ.ಸಿದ್ದು ಆಲಗೂರ ಗೌರವ ಡಾಕ್ಟರೇಟ್ ಪಟ್ಟಿ ಬಿಡುಗಡೆಗೊಳಿಸಿದ್ದು ನಾಳೆ ನಡೆಯಲಿರುವ ಘಟಿಕೋತ್ಸವದಲ್ಲಿ ರಾಜ್ಯಪಾಲರು ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದ್ದಾರೆ. 8ನೇ ಘಟಿಕೋತ್ಸವದ ಅಧ್ಯಕ್ಷತೆಯನ್ನು ಉನ್ನತ ಶಿಕ್ಷಣ ಸಚಿವ, ವಿವಿ ಸಮಕುಲಾಧಿಪತಿ ಡಾ. ಅಶ್ವತ್ಥನಾರಾಯಣ ವಹಿಸಲಿದ್ದಾರೆ. ಘಟಿಕೋತ್ಸವ ಭಾಷಣವನ್ನು ನವದೆಹಲಿಯ ವಿವಿ ಅನುದಾನ ಆಯೋಗದ ಕಾರ್ಯದರ್ಶಿ ಸಿ.ವಿ.ಓ. ಪ್ರೊ. ರಜನೀಶ್ ಜೈನ್ ಆನ್ಲೈನ್ ಮೂಲಕ ಮಾಡಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಘಟಿಕೋತ್ಸವದಲ್ಲಿ ವಿವಿಧ ವಿಭಾಗಗಳಲ್ಲಿ ಒಟ್ಟು 52 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗುವುದು. ವಿವಿಧ ವಿಭಾಗಗಳ 43 ಸಂಶೋಧನಾ ವಿದ್ಯಾರ್ಥಿಗಳು ಡಾಕ್ಟರೇಟ್ ಹಾಗೂ ಒಟ್ಟು 40 ವಿದ್ಯಾರ್ಥಿಗಳು ರ್ಯಾಂಕ್ ಪ್ರಮಾಣ ಪತ್ರಗಳನ್ನು ಪಡೆಯಲಿದ್ದಾರೆ.
ಇದನ್ನೂ ಓದಿ: ಫೇಸ್ಬುಕ್ನಲ್ಲಿ ಜಾಹೀರಾತು ನೋಡಿ ಜ್ಯೋತಿಷಿಗಳನ್ನ ನಂಬುವ ಮುನ್ನಾ ಎಚ್ಚರ! ತುಮಕೂರಿನಲ್ಲಿ ಉದ್ಯಮಿಗೆ 46 ಲಕ್ಷ ರೂ. ವಂಚನೆ
‘2 ಸ್ಟೇಟ್ಸ್’ ನಟ ಶಿವಕುಮಾರ್ ಸುಬ್ರಮಣಿಯಂ ಇನ್ನಿಲ್ಲ; ಮಗ ಸತ್ತು 2 ತಿಂಗಳು ಕಳೆಯೋದರಲ್ಲಿ ತಂದೆ ನಿಧನ