ಫೇಸ್​ಬುಕ್​ನಲ್ಲಿ ಜಾಹೀರಾತು ನೋಡಿ ಜ್ಯೋತಿಷಿಗಳನ್ನ ನಂಬುವ ಮುನ್ನಾ ಎಚ್ಚರ! ತುಮಕೂರಿನಲ್ಲಿ ಉದ್ಯಮಿಗೆ 46 ಲಕ್ಷ ರೂ. ವಂಚನೆ

ತುಮಕೂರು ನಗರದ ಉದ್ಯಮಿ ವಿಜಯ್ ಬಾಬುಗೆ ಆನ್​ಲೈನ್​ ಜ್ಯೋತಿಷಿಗಳು ಸುಮಾರು 46 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ. ಕೌಟುಂಬಿಕ ಸಮಸ್ಯೆ ಹಿನ್ನೆಲೆ ಉದ್ಯಮಿ ಫೇಸ್​ಬುಕ್​ ಮೂಲಕ ಜ್ಯೋತಿಷಿಗಳನ್ನ ಸಂಪರ್ಕ ಮಾಡಿದ್ದಾರೆ.

ಫೇಸ್​ಬುಕ್​ನಲ್ಲಿ ಜಾಹೀರಾತು ನೋಡಿ ಜ್ಯೋತಿಷಿಗಳನ್ನ ನಂಬುವ ಮುನ್ನಾ ಎಚ್ಚರ! ತುಮಕೂರಿನಲ್ಲಿ ಉದ್ಯಮಿಗೆ 46 ಲಕ್ಷ ರೂ. ವಂಚನೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: sandhya thejappa

Updated on: Apr 11, 2022 | 11:53 AM

ತುಮಕೂರು: ತಂತ್ರಜ್ಞಾನ ಬೆಳೆದಂತೆ ಒಂದಲ್ಲ ಒಂದು ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಇತ್ತೀಚೆಗೆ ಆನ್​ಲೈನ್ (Online) ಮೂಲಕ ವಂಚನೆಗೊಳಗಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆನ್​ಲೈನ್​ನಲ್ಲಿ ವ್ಯವಹರಿಸುವಾಗ ಎಷ್ಟು ಎಚ್ಚರ ಇದ್ದರೂ ಸಾಲದು. ಮುಖ- ಪರಿಚಯ ಇಲ್ಲದೆ ಅವರು ಕೇಳಿದಷ್ಟು ಹಣ ನೀಡುವುದು ತಪ್ಪು. ಲಕ್ಷ ಲಕ್ಷ ಹಣ ಪಡೆದು ಮೋಸ ಮಾಡುತ್ತಾರೆ. ಹೀಗಾಗಿ ಆನ್​ಲೈನ್​ನಲ್ಲಿ ವ್ಯವಹರಿಸುವಾಗ ನೂರು ಸಲ ಯೋಚನೆ ಮಾಡಬೇಕು. ಜಿಲ್ಲೆಯಲ್ಲಿ ಉದ್ಯಮಿಯೊಬ್ಬರು (Businessman) ಆನ್​ಲೈನ್​ ಜ್ಯೋತಿಷಿಗಳನ್ನ ನಂಬಿ ಸುಮಾರು 46 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ.

ತುಮಕೂರು ನಗರದ ಉದ್ಯಮಿ ವಿಜಯ್ ಬಾಬುಗೆ ಆನ್​ಲೈನ್​ ಜ್ಯೋತಿಷಿಗಳು ಸುಮಾರು 46 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ. ಕೌಟುಂಬಿಕ ಸಮಸ್ಯೆ ಹಿನ್ನೆಲೆ ಉದ್ಯಮಿ ಫೇಸ್​ಬುಕ್​ ಮೂಲಕ ಜ್ಯೋತಿಷಿಗಳನ್ನ ಸಂಪರ್ಕ ಮಾಡಿದ್ದಾರೆ. ಶಂಕರ್ ಶರ್ಮಾ ಮತ್ತು ಮಾಧವ್ರಾವ್ ಎಂಬುವವರನ್ನು ವಿಜಯ್ ಸಂಪರ್ಕಿಸಿದ್ದರು. ಆದರೆ ಜ್ಯೋತಿಷಿಗಳು ಕಷ್ಟಗಳಿಗೆ ಪರಿಹಾರ ಮಾಡಿಕೊಡುವುದಾಗಿ ನಂಬಿಸಿ ವಂಚಿಸಿದ್ದಾರೆ. ಪೂಜೆ ನೆಪದಲ್ಲಿ 46 ಲಕ್ಷ ರೂ. ಹಾಕಿಸಿಕೊಂಡು ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಅಂತ ತುಮಕೂರು ಸಿಇಎನ್ ಉದ್ಯಮಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕೌಟುಂಬಿಕ ಸಮಸ್ಯೆ ಹಿನ್ನೆಲೆ ವಿಜಯ್ ಬಾಬು ಜ್ಯೋತಿಷಿಗಳು ಬಳಿ ಹೋದರೆ ಪರಿಹಾರ ಸಿಗುತ್ತೆ ಅಂತ ಅಂದುಕೊಂಡಿದ್ದರು. ನಿಮ್ಮ ಕಷ್ಟಗಳಿಗೆ ಪರಿಹಾರ ಮಾಡಿಕೊಡುತ್ತೇವೆ ಅಂತ ನಂಬಿಸಿದ್ದ ಜ್ಯೋತಿಷಿಗಳು, ಬಳಿಕ ಪೂಜೆ, ಹೋಮ, ಹಾಗೂ ವಿವಿಧ ಕೈಂಕರ್ಯಗಳನ್ನ ಮಾಡಬೇಕು ಅಂದರು. ಇದಕ್ಕೆ ತುಂಬಾ ಹಣ ಖರ್ಚು ಆಗುತ್ತೆ ಅಂದಿದ್ದರು. ಹಂತ ಹಂತವಾಗಿ ವಿವಿಧ ಬ್ಯಾಂಕ್ ಖಾತೆಗಳಿಗೆ 46 ಲಕ್ಷ ರೂ. ಹಣ ಹಾಕಿಸಿಕೊಂಡು ವಂಚನೆ ಮಾಡಿದ್ದಾರೆ. ಕೊನೆಗೆ ಯಾವುದೇ ಪೂಜೆ ಮಾಡದೇ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಅಂತ ಉದ್ಯಮಿ ತಿಳಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ವಂಚಕರಿಗಾಗಿ ಶೋಧಕಾರ್ಯ ಮುಂದುವರಿಸಿದ್ದಾರೆ.

ಇದನ್ನೂ ಓದಿ

Sanju Samson: ಪಂದ್ಯ ಮುಗಿದ ಬಳಿಕ ಸಂಜು ಸ್ಯಾಮ್ಸನ್ ರಿವೀಲ್ ಮಾಡಿದ್ರು ರಣ ರೋಚಕ ಪ್ಲಾನ್

‘ಕೆಜಿಎಫ್​: ಚಾಪ್ಟರ್​ 2’ ಬಿಡುಗಡೆಗೂ ಮುನ್ನ ಯಶ್​ ಅಭಿಮಾನಿಗಳೇ ಮಾಡಿದ್ರು ದಾಖಲೆ; ಇಲ್ಲಿದೆ ವಿಡಿಯೋ