AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘2 ಸ್ಟೇಟ್ಸ್​’ ನಟ ಶಿವಕುಮಾರ್​ ಸುಬ್ರಮಣಿಯಂ ಇನ್ನಿಲ್ಲ; ಮಗ ಸತ್ತು 2 ತಿಂಗಳು ಕಳೆಯೋದರಲ್ಲಿ ತಂದೆ ನಿಧನ

Shiv Kumar Subramaniam Death: ನಟ ಶಿವಕುಮಾರ್​ ಶಿವಸುಬ್ರಮಣಿಯಂ ಅವರು ಇಂದು (ಏ.11) ನಿಧನರಾಗಿದ್ದು, ಅನೇಕ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ. ಮುಂಬೈನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

‘2 ಸ್ಟೇಟ್ಸ್​’ ನಟ ಶಿವಕುಮಾರ್​ ಸುಬ್ರಮಣಿಯಂ ಇನ್ನಿಲ್ಲ; ಮಗ ಸತ್ತು 2 ತಿಂಗಳು ಕಳೆಯೋದರಲ್ಲಿ ತಂದೆ ನಿಧನ
ಶಿವಕುಮಾರ್ ಸುಬ್ರಮಣಿಯಂ
TV9 Web
| Edited By: |

Updated on:Apr 11, 2022 | 12:05 PM

Share

ಬಾಲಿವುಡ್​ನ ಹಲವು ಸಿನಿಮಾಗಳಲ್ಲಿ ನಟಿಸಿ ಫೇಮಸ್​ ಆಗಿದ್ದ ನಟ ಶಿವಕುಮಾರ್​ ಸುಬ್ರಮಣಿಯಂ (Shiv Kumar Subramaniam) ಅವರು ನಿಧನರಾಗಿದ್ದಾರೆ. ಸೋಮವಾರ (ಏ.11) ಮುಂಜಾನೆ ಅವರ ಮರಣದ ಸುದ್ದಿ ಕೇಳಿ ಅನೇಕ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ. ವಿಪರ್ಯಾಸ ಎಂದರೆ, ಕೇವಲ ಎರಡು ತಿಂಗಳ ಹಿಂದೆ ಶಿವಕುಮಾರ್​ ಶಿವಸುಬ್ರಮಣಿಯಂ ಅವರು ಮಗನನ್ನು ಕಳೆದುಕೊಂಡಿದ್ದರು. ಕ್ಯಾನ್ಸರ್​ನಿಂದ (Cancer) ಅವರ ಪುತ್ರನ ಸಾವು ಸಂಭವಿಸಿತ್ತು. ಆ ನೋವು ಮಾಸುವ ಮುನ್ನವೇ ಶಿವಕುಮಾರ್​ ಶಿವಸುಬ್ರಮಣಿಯಂ ಕೊನೆಯುಸಿರು ಎಳೆದಿರುವುದು (Shiv Kumar Subramaniam Death) ಇಡೀ ಕುಟುಂಬಕ್ಕೆ ಆಘಾತ ಉಂಟು ಮಾಡಿದೆ. ‘2 ಸ್ಟೇಟ್ಸ್​’, ‘ಮೀನಾಕ್ಷಿ ಸುಂದರೇಶ್ವರ್​’, ‘ನೇಲ್​ ಪಾಲಿಶ್​’, ‘ಹಿಚ್ಕಿ’ ಮುಂತಾದ ಬಾಲಿವುಡ್​ ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಕಥೆ ಮತ್ತು ಚಿತ್ರಕಥೆ ಬರಹಗಾರರಾಗಿಯೂ ಅವರು ಗುರುತಿಸಿಕೊಂಡಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಭಿಮಾನಿಗಳು, ಸ್ನೇಹಿತರು ಮತ್ತು ಸೆಲೆಬ್ರಿಟಿಗಳು ಪ್ರಾರ್ಥಿಸುತ್ತಿದ್ದಾರೆ. ಮುಂಬೈನಲ್ಲಿ ಶಿವಕುಮಾರ್​ ಸುಬ್ರಮಣಿಯಂ ಅವರ ಅಂತ್ಯಕ್ರಿಯೆ ಸೋಮವಾರ ನಡೆಯಲಿದೆ.

1989ರಲ್ಲಿ ವಿಧು ವಿನೋದ್​ ಚೋಪ್ರಾ ಅವರ ‘ಪರಿಂದಾ’ ಸಿನಿಮಾಗೆ ಚಿತ್ರಕಥೆ ಬರೆಯುವ ಮೂಲಕ ಶಿವಕುಮಾರ್​ ಸುಬ್ರಮಣಿಯಂ ಅವರು ಚಿತ್ರರಂಗದಲ್ಲಿ ತಮ್ಮ ಜರ್ನಿ ಆರಂಭಿಸಿದ್ದರು. ‘1942: ಎ ಲವ್​ ಸ್ಟೋರಿ’, ‘ಇಸ್​ ರಾತ್​ ಕಿ ಸುಬಾಹ್​ ನಹೀ’, ‘ಅರ್ಜುನ್​ ಪಂಡಿತ್’, ‘ಚಮೇಲಿ’, ‘ಹಜಾರೋ ಕ್ವಾಯಿಷೆ ಐಸಿ’ ಮುಂತಾದ ಸಿನಿಮಾಗಳಿಗೆ ಅವರು ಬರಹಗಾರನಾಗಿ ಕೆಲಸ ಮಾಡಿದ್ದರು.

‘ಪರಿಂದಾ’ ಚಿತ್ರದ ಚಿತ್ರಕಥೆ ಹಾಗೂ ‘ಹಜಾರೋ ಕ್ವಾಯಿಷೆ ಐಸಿ’ ಸಿನಿಮಾದ ಕಥೆಗಾಗಿ ಅವರು ಪ್ರಶಸ್ತಿ ಪಡೆದಿದ್ದರು. ಕಿರುತೆರೆಯಲ್ಲಿಯೂ ಶಿವಕುಮಾರ್​ ಸುಬ್ರಮಣಿಯಂ ಫೇಮಸ್​ ಆಗಿದ್ದರು. ‘ಮುಕ್ತಿ ಬಂಧನ್​’ ಧಾರಾವಾಹಿಯಲ್ಲಿ ಅವರು ಮುಖ್ಯ ಪಾತ್ರ ಮಾಡುವ ಮೂಲಕ ಮನೆಮಾತಾಗಿದ್ದರು. ಹೀಗೆ ಸಿನಿಮಾ ಮತ್ತು ಕಿರುತೆರೆ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಅವರ ಅಗಲಿಕೆಗೆ ಅನೇಕರು ಕಂಬನಿ ಮಿಡಿಯುತ್ತಿದ್ದಾರೆ. ಸೋಶಿಯಲ್​ ಮೀಡಿಯಾ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಗುತ್ತಿದೆ.

ಪತ್ನಿ ದಿವ್ಯಾ ಅವರನ್ನು ಶಿವಕುಮಾರ್​ ಸುಬ್ರಮಣಿಯಂ ಅಗಲಿದ್ದಾರೆ. ಸೆಲೆಬ್ರಿಟಿಗಳಾದ ಹನ್ಸಲ್​ ಮೆಹ್ತಾ, ಅಶೋಕ್​ ಪಂಡಿತ್​, ಆಯೆಶಾ ಮಿಶ್ರಾ ಮುಂತಾದವರು ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ:

Mannava Balayya: 300ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ ಮನ್ನವ ಬಾಲಯ್ಯ ನಿಧನ; ಕಂಬನಿ ಮಿಡಿದ ಚಿತ್ರರಂಗ

Mannava Balayya: 300ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ ಮನ್ನವ ಬಾಲಯ್ಯ ನಿಧನ; ಕಂಬನಿ ಮಿಡಿದ ಚಿತ್ರರಂಗ

Published On - 11:44 am, Mon, 11 April 22

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ