Mannava Balayya: 300ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ ಮನ್ನವ ಬಾಲಯ್ಯ ನಿಧನ; ಕಂಬನಿ ಮಿಡಿದ ಚಿತ್ರರಂಗ
Mannava Balayya Death: ಮನ್ನವ ಬಾಲಯ್ಯ ಅವರಿಗೆ 92 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಗಳಿಂದ ಅವರು ಬಳಲುತ್ತಿದ್ದರು.
ತೆಲುಗು ಚಿತ್ರರಂಗದ ಹಿರಿಯ ನಟ ಮನ್ನವ ಬಾಲಯ್ಯ (Mannava Balayya) ನಿಧನರಾಗಿದ್ದಾರೆ. ಅವರ ಮರಣದ (Mannava Balayya Death) ಸುದ್ದಿ ಕೇಳಿ ಟಾಲಿವುಡ್ ಸೆಲೆಬ್ರಿಟಿಗಳು ಸಂತಾಪ ಸೂಚಿಸುತ್ತಿದ್ದಾರೆ. ಅಭಿನಯದ ಮೂಲಕ ಅಪಾರ ಅಭಿಮಾನಿಗಳ ಮನಗೆದ್ದಿದ್ದ ಮನ್ನವ ಬಾಲಯ್ಯ ಅವರು ಚಿತ್ರರಂಗದ ವಿವಿಧ ವಿಭಾಗಗಳಲ್ಲಿ ಸಕ್ರಿಯರಾಗಿದ್ದರು. ನಟನೆ ಮಾತ್ರವಲ್ಲದೇ ನಿರ್ದೇಶನ, ನಿರ್ಮಾಣದಲ್ಲೂ ಅವರು ಗುರುತಿಸಿಕೊಂಡಿದ್ದರು. ಮನ್ನವ ಬಾಲಯ್ಯ ಅವರಿಗೆ 92 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಹೈದರಾಬಾದ್ನಲ್ಲಿ ಶನಿವಾರ (ಏ.9) ಬೆಳಗ್ಗೆ ನಿಧನರಾದರು ಎಂದು ವರದಿ ಆಗಿದೆ. ನಂದಮುರಿ ಬಾಲಕೃಷ್ಣ ಸೇರಿದಂತೆ ಹಲವು ಗಣ್ಯರು ಮನ್ನವ ಬಾಲಯ್ಯ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ಚೆನ್ನೈನಲ್ಲಿ ವಿದ್ಯಾಭ್ಯಾಸ ಮಾಡಿದ್ದ ಮನ್ನವ ಬಾಲಯ್ಯ ಅವರು ಮೆಕಾನಿಕಲ್ ಇಂಜಿನಿಯರಿಂಗ್ನಲ್ಲಿ ಪದವಿ ಪಡೆದಿದ್ದರು. ಕಾಲೇಜು ದಿನಗಳಲ್ಲಿ ನಾಟಕದ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದ ಅವರು ನಂತರ ಸಿನಿಮಾ ರಂಗಕ್ಕೆ ಕಾಲಿಟ್ಟರು. 1958ರಲ್ಲಿ ಅವರು ಬಣ್ಣದ ಲೋಕದಲ್ಲಿ ಜರ್ನಿ ಆರಂಭಿಸಿದರು. ಹಲವು ದಶಕಗಳ ತಮ್ಮ ವೃತ್ತಿ ಜೀವನದಲ್ಲಿ ಅನೇಕ ಗಮನಾರ್ಹ ಪಾತ್ರಗಳನ್ನು ಮಾಡಿ ಅವರು ಸೈ ಎನಿಸಿಕೊಂಡಿದ್ದರು. ಕುಂಕುಮ ರೇಖಾ, ಭಾಗ್ಯ ದೇವತ, ಪಾರ್ವತಿ ಕಲ್ಯಾಣ ಮುಂತಾದ ಸಿನಿಮಾಗಳಲ್ಲಿನ ಅವರ ನಟನೆಗೆ ಅಭಿಮಾನಿಗಳು ಮನಸೋತಿದ್ದರು.
ಹತ್ತಕ್ಕೂ ಅಧಿಕ ಸಿನಿಮಾಗಳನ್ನು ಮನ್ನವ ಬಾಲಯ್ಯ ನಿರ್ಮಾಣ ಮಾಡಿದ್ದರು. ನಿರ್ದೇಶಕನಾಗಿ, ಕಥೆಗಾರನಾಗಿ ಹಲವು ಸಿನಿಮಾಗಳಿಗೆ ಅವರು ಕೆಲಸ ಮಾಡಿದ್ದರು. ‘ಚೆಲ್ಲೆಲಿ ಕಾಪುರಮ್’ ಸಿನಿಮಾದಲ್ಲಿನ ನಟನೆಗಾಗಿ ಅವರು ನಂದಿ ಪ್ರಶಸ್ತಿ ಪಡೆದಿದ್ದರು. ಆ ಸಿನಿಮಾಗೆ ಅವರೇ ಕಥೆ ಬರೆದಿದ್ದರು. ಹಲವು ರೀತಿಯಲ್ಲಿ ತೆಲುಗು ಚಿತ್ರರಂಗಕ್ಕೆ ಮನ್ನವ ಬಾಲಯ್ಯ ಅವರು ಕೊಡುಗೆ ನೀಡಿದ್ದರು. ಅವರ ಅಗಲಿಕೆಗೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
Legendary Senior Actor,Writer, Producer,Director,Raghupathi VenkaiahAwardee Sri M.Balayya garu is no more.#OmShanti ?? I respect his writing works ChelliliKapuram,NeramuSiksha ChuttalunnaruJagratha films. He acted in 300+ movies.His role in #AlluriSeethaRamaRaju is unforgettable. pic.twitter.com/ugjmjVPt0m
— Gopi Mohan (@Gopimohan) April 9, 2022
Legendary senior actor Balayya Garu is no more, Our deepest condolences to the family members? pic.twitter.com/DXYuTWVXfC
— Aditya Music (@adityamusic) April 9, 2022
ಇದನ್ನೂ ಓದಿ:
ಹಿರಿಯ ನಟ ನಿಧನ, ಸಂತಾಪ ಸೂಚಿಸಿದ ಸಿಎಂ; ನಿಖರವಾಗಿ ತಿಳಿಯಲೇ ಇಲ್ಲ ಸಾವಿಗೆ ಕಾರಣ
33ನೇ ವಯಸ್ಸಿಗೆ ಕ್ಯಾನ್ಸರ್ನಿಂದ ಖ್ಯಾತ ಸಿಂಗರ್ ನಿಧನ; ಸಂತಾಪ ಸೂಚಿಸಿದ ಯುವರಾಜ್ ಸಿಂಗ್
Published On - 12:53 pm, Sat, 9 April 22