ಚಿತ್ರದುರ್ಗ: ತಾಲೂಕಿನ ಕಸವನಹಳ್ಳಿಯಲ್ಲಿ ಕಳಪೆ ಕಾಮಗಾರಿ ಆರೋಪ ಹಿನ್ನಲೆ, ಕಲ್ಲಿನಿಂದ ಪಿಡಬ್ಲ್ಯೂಡಿ(PWD) ಇಂಜಿನಿಯರ್ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ. ಗಾಯಾಳು ಪಿಡಬ್ಲ್ಯೂಡಿ ಇಂಜಿನಿಯರ್ ನಾಗರಾಜ್ ಎನ್ನುವವರನ್ನ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಸನವನಹಳ್ಳಿ ಬಳಿ 1ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಈ ಹಿನ್ನಲೆ ರಸ್ತೆ ಕಾಮಗಾರಿ ವೀಕ್ಷಣೆಗೆ ಇಂಜಿನಿಯರ್ ತೆರಳಿದ್ದರು. ಈ ವೇಳೆ ಗ್ರಾಮಸ್ಥರು ಕಳಪೆ ಕಾಮಗಾರಿ ಮಾಡಲಾಗುತ್ತಿದೆಯೆಂದು ಆರೋಪಿಸಿ ಅವರ ಜೊತೆ ವಾಗ್ವಾದ ನಡೆಸಿದ್ದಾರೆ. ಈ ಸಂದರ್ಭ ತಳ್ಳಾಟದ ವೇಳೆ ಇಂಜಿನಿಯರ್ ನಾಗರಾಜ್ ಮೇಲೆ ಕಲ್ಲೆಸೆತ ನಡೆಸಿದ್ದು, ತಲೆಗೆ ಪೆಟ್ಟು ಬಿದ್ದ ಹಿನ್ನೆಲೆ, ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಕಸವನಹಳ್ಳಿಯ ಕರಿಯಪ್ಪ ಹಾಗೂ ಮತ್ತಿತರರ ವಿರುದ್ಧ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗದಗ: ನಗರದಲ್ಲಿ ಇನ್ನೂ ಪುಡಿ ರೌಡಿಗಳ ಅಟ್ಟಹಾಸ ನಿಂತಂತೆ ಕಾಣುತ್ತಿಲ್ಲ. ರವಿವಾರ(ಜು.9) ನಕ್ಷತ್ರ ಕಂಫರ್ಟ್ ಬಾರ್ವೊಂದರಲ್ಲಿ ಯುವಕರ ನಡುವೆ ಗಲಾಟೆಯಾಗಿದ್ದು, ಈ ವೇಳೆ ಕುಡಿದ ಅಮಲಿನಲ್ಲಿ ಬಿಯರ್ ಬಾಟಲ್ನಿಂದ ಯುವಕನ ತಲೆಗೆ ಹೊಡೆದಿದ್ದಾರೆ. ತಲೆಯಿಂದ ಸುರಿದ ರಕ್ತದಲ್ಲೇ ಯುವಕ ಮುಖ ತೊಳೆದುಕೊಂಡಿದ್ದಾನೆ.ಇದನ್ನು ನೋಡಿದ ಜನರು ಕಂಗಾಲಾಗಿದ್ದಾರೆ. ಇನ್ನೂ ಇಷ್ಟೇಲ್ಲಾ ಆಗುತ್ತಿದ್ದು, ಯುವಕನ ತಲೆಯಿಂದ ರಕ್ತ ಸುರಿಯುತ್ತಿದ್ದರೂ ಬಾರ್ ಮಾಲೀಕ ಪೊಲೀಸ್ರಿಗೆ ಮಾಹಿತಿ ನೀಡಿಲ್ಲ. ಈ ಕುರಿತು ಗದಗ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: Koppala News: ಆಸ್ತಿಗೋಸ್ಕರ ಹೆತ್ತವಳ ಮೇಲೆಯೇ ಹಲ್ಲೆ ನಡೆಸಿದ ಮಗ; ನ್ಯಾಯಕ್ಕಾಗಿ ಕಣ್ಣೀರಿಡುತ್ತಿರುವ ತಾಯಿ
ಇನ್ನು ಇದೇ ಶನಿವಾರ(ಜು.8) ಅಕ್ರಮ ಅಕ್ಕಿ ಸಂಗ್ರಹಿಸಿಟ್ಟ ಕುರಿತು ಕರ್ನಾಟಕ ರಕ್ಷಣಾ ವೇದಿಕೆಯಿಂದ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದಕ್ಕೆ ಕುಪಿತಗೊಂಡ ಅಕ್ಕಿ ಚೋರರು ಕರವೇ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿತ್ತು. ಇದಾದ ಮಾರನೇ ದಿನ ಬಾರ್ನಲ್ಲಿ ಹಲ್ಲೆ ನಡೆದಿದೆ. ಇಷ್ಟಾದರೂ ಪೊಲೀಸ್ ಇಲಾಖೆ ಕೈ ಕಟ್ಟಿಕುಳಿತಿರುವುದು ವಿಷಾದನೀಯ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ