Hyderabad: ಮದುವೆಯಾಗಲು ಒಪ್ಪಲಿಲ್ಲ ಎಂದು ಮಹಿಳಾ ಟೆಕ್ಕಿಯ ಕತ್ತು ಸೀಳಿದ ಯುವಕ
ಮದುವೆಯಾಗಲು ನಿರಾಕರಿಸಿದ್ದಕ್ಕೆ 22 ವರ್ಷದ ಮಹಿಳಾ ಸಾಫ್ಟ್ವೇರ್ ಇಂಜಿನಿಯರ್ನ ಕತ್ತು ಸೀಳಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ಮದುವೆಯಾಗಲು ನಿರಾಕರಿಸಿದ್ದಕ್ಕೆ 22 ವರ್ಷದ ಮಹಿಳಾ ಸಾಫ್ಟ್ವೇರ್ ಇಂಜಿನಿಯರ್ನ ಕತ್ತು ಸೀಳಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ಈಗ ಟೆಕ್ಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ, ಆರೋಪಿಯನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಘಟನೆಯು ನರಸಿಂಗಿ ಪೊಲೀಸ್ಠಾಣಾ ವ್ಯಾಪ್ತಿಯ ಪುಪ್ಪಲಗೂಡದಲ್ಲಿ ನಡೆದಿದೆ. ಫುಡ್ ಡೆಲಿವರಿ ಮಾಡುತ್ತಿದ್ದ ಯುವಕ ಗಣೇಶ್ ಯುವತಿಯನ್ನು ಮದುವೆಯಾಗಲು ಬಯಸಿದ್ದ , ಆಕೆಯು ಆತನ ಪ್ರಸ್ತಾಪವನ್ನು ತಿರಸ್ಕರಿಸಿದ್ದಳು.
ಯುವತಿ ಹೈದರಾಬಾದ್ನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು, ಹಾಸ್ಟೆಲ್ವೊಂದರಲ್ಲಿ ವಾಸವಿದ್ದಳು. ಗಣೇಶ್ ಮಂಗಳವಾರ ರಾತ್ರಿ ಹುಡುಗಿಯ ಹಾಸ್ಟೆಲ್ಗೆ ಹೋಗಿ ಪುಪ್ಪಲಗುಡದ ಹೋಟೆಲ್ ಬಳಿ ಕರೆದೊಯ್ದಿದ್ದ, ಅಲ್ಲಿ ಮತ್ತೊಮ್ಮೆ ಮದುವೆ ಪ್ರಸ್ತಾಪ ಇಟ್ಟಿದ್ದ, ಆಕೆ ಮತ್ತೆ ತಿರಸ್ಕರಿಸಿದ್ದಾಳೆ, ಇಬ್ಬರ ನಡುವೆ ವಾಗ್ವಾದ ನಡೆದಿದೆ.
ಮತ್ತಷ್ಟು ಓದಿ: Hassan News: ಬಾಡಿಗೆದಾರರ ಕಿರುಕುಳಕ್ಕೆ ಬೇಸತ್ತು ಮನೆ ಒಡತಿ ಆತ್ಮಹತ್ಯೆ; ಮಗಳ ಸಾವಿನ ಸುದ್ದಿ ಕೇಳಿ ಸಾವನ್ನಪ್ಪಿದ ತಾಯಿ
ನಂತರ ಯುವಕ ಬ್ಯಾಗ್ನಲ್ಲಿ ಇಟ್ಟಿದ್ದ ಚಾಕು ತೆಗೆದು ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಆಕೆಯ ಕತ್ತು ಹಾಗೂ ಕೈಗಳ ಮೇಲೆ ಇರಿತದ ಗಾಯಗಳಾಗಿವೆ. ಅಲ್ಲೇ ಇದ್ದ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ, ಗಣೇಶ್ನನ್ನು ಬಂಧಿಸಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ