ಬೆಂಗಳೂರು: ಬೈಕ್​ನಲ್ಲಿ ಬಂದ ದರೋಡೆಕೋರರಿಂದ ನಡುರಾತ್ರಿ ಟೆಕ್ಕಿಯ ದರೋಡೆ

ಬೈಕ್​​ನಲ್ಲಿ ಬಂದ ಇಬ್ಬರು ದರೋಡೆಕೋರರು ಟೆಕ್ಕಿಯೊಬ್ಬರ ಲೆನೊವೊ ಐಡಿಯಾಪ್ಯಾಡ್ ಮತ್ತು ಆಪಲ್ ಮ್ಯಾಕ್‌ಬುಕ್ ಅನ್ನು ದೋಚಿರುವ ಘಟನೆ ನಗರದ ಮಾರತ್ತಹಳ್ಳಿಯ ಹೊರ ವರ್ತುಲ ರಸ್ತೆಯಲ್ಲಿ ನಡೆದಿದೆ.

ಬೆಂಗಳೂರು: ಬೈಕ್​ನಲ್ಲಿ ಬಂದ ದರೋಡೆಕೋರರಿಂದ ನಡುರಾತ್ರಿ ಟೆಕ್ಕಿಯ ದರೋಡೆ
ಸಾಂದರ್ಭಿಕ ಚಿತ್ರ
Follow us
ವಿವೇಕ ಬಿರಾದಾರ
|

Updated on:May 30, 2023 | 2:47 PM

ಬೆಂಗಳೂರು: ಬೈಕ್​​ನಲ್ಲಿ ಬಂದ ಇಬ್ಬರು ದರೋಡೆಕೋರರು ಟೆಕ್ಕಿಯೊಬ್ಬರ (Techie) ಲೆನೊವೊ ಐಡಿಯಾಪ್ಯಾಡ್ ಮತ್ತು ಆಪಲ್ ಮ್ಯಾಕ್‌ಬುಕ್ ಅನ್ನು ದೋಚಿರುವ ಘಟನೆ ನಗರದ ಮಾರತ್ತಹಳ್ಳಿಯ ಹೊರ ವರ್ತುಲ ರಸ್ತೆಯಲ್ಲಿ (Outer Ring Road) ನಡೆದಿದೆ. ಟೆಕ್ಕಿ ಮುಶೀರ್ ಶೇಖ್ (22) ಮೇ 24 ರಂದು ಮಧ್ಯರಾತ್ರಿ 12:30 ರ ಸುಮಾರಿಗೆ ಅಹಮದಾಬಾದ್‌ನಿಂದ (Ahmedabad) ಬೆಂಗಳೂರಿಗೆ (Bengaluru) ಬಂದಿದ್ದರು. ನಂತರ ಬಿಎಂಟಿಸಿ (BMTC) ಬಸ್​ನಲ್ಲಿ ಕಾರ್ತಿಕನಗರಕ್ಕೆ ತೆರಳಿದ್ದಾರೆ. ಅಷ್ಟೊತ್ತಿಗಾಗಲೇ ಸಮಯ ರಾತ್ರಿ 2 ಗಂಟೆಯಾಗಿತ್ತು. ಅಲ್ಲಿ ಮಾರುತಿನಗರಕ್ಕೆ ತೆರಳಲು ಕ್ಯಾಬ್‌ಗಾಗಿ ಕಾಯುತ್ತಿದ್ದಾಗ ಸ್ಕೂಟರ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಅವರ ಬಳಿಗೆ ಬಂದು, ಟೆಕ್ಕಿಗೆ ಚಾಕು ತೋರಿಸಿ ಅವರ ಬಳಿ ಇರುವ ವಸ್ತುಗಳನ್ನು ನೀಡುವಂತೆ ಧಮಕಿ ಹಾಕಿದ್ದಾರೆ.

ಇದರಿಂದ ಭಯಭೀತರಾದ ಟೆಕ್ಕಿ ಮುಶೀರ್ ಶೇಖ್ ಅವರು ಲೆನೊವೊ ಐಡಿಯಾಪ್ಯಾಡ್ ಮತ್ತು ಆಪಲ್ ಮ್ಯಾಕ್‌ಬುಕ್ ಅನ್ನು ಒಳಗೊಂಡಿರುವ ತಮ್ಮ ಬ್ಯಾಗ್​​ ಅನ್ನು ದರೋಡೆಕೋರರಿಗೆ ನೀಡಿದ್ದಾರೆ. ಅಲ್ಲದೇ ಮೊಬೈಲ್ ಫೋನ್, ಆಧಾರ್ ಕಾರ್ಡ್, ಪಾಸ್ಪೋರ್ಟ್, ಕ್ರೆಡಿಟ್ ಕಾರ್ಡ್ ಮತ್ತು ಎರಡು ಡೆಬಿಟ್ ಕಾರ್ಡ್ಗಳನ್ನು ಆರೋಪಿಗಳು ದೋಚಿದ್ದಾರೆ.

ಇದನ್ನೂ ಓದಿ: ಜಾತ್ರೆಗೆಂದು ಸಂಬಂಧಿ ಮನೆಗೆ ಬಂದಿದ್ದ 11 ವರ್ಷದ ಬಾಲಕಿ ಮೇಲೆ ಅತ್ಯಾಚಾರ

ಪೊಲೀಸರು ಐಪಿಸಿ ಸೆಕ್ಷನ್ 392 (ದರೋಡೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಸದ್ಯ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಮುಸ್ಲಿಂ ಗೆಳತಿಯನ್ನು ಬೈಕ್‌ನಲ್ಲಿ ಡ್ರಾಪ್ ಕೊಟ್ಟಿದ್ದಕ್ಕೆ ಹಿಂದೂ ಯುವಕನ ಮೇಲೆ ಹಲ್ಲೆ

ಶಿವಮೊಗ್ಗ: ಮುಸ್ಲಿಂ ಯುವತಿಯನ್ನು ಬೈಕಿನಲ್ಲಿ ಡ್ರಾಪ್ ಮಾಡಿದ್ದಕ್ಕೆ ಹಿಂದೂ ಯುವಕನ ಮೇಲೆ ಮುಸ್ಲಿಂ ಯುವಕರ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ನಡೆದಿದೆ. ಭದ್ರಾವತಿಯ ವಿಶ್ವೇಶ್ವರಯ್ಯ ನಗರದ ಹಿಂದೂ ಯುವಕ ಹಾಗೂ ಖಲಂದರ್ ನಗರದ ಮುಸ್ಲಿಂ ಯುವತಿ ಇಬ್ಬರೂ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದರು. ಮುಸ್ಲಿಂ ವಿದ್ಯಾರ್ಥಿನಿಯ ಸಹೋದರಿಗೆ ಅಪಘಾತ ಸಂಭವಿಸಿ ಗಾಯಗೊಂಡಿದ್ದ ವಿಷಯ ತಿಳಿದ ನಂತರ ಆಕೆ ತನ್ನ ಸಹಪಾಠಿ ಹಿಂದೂ ಯುವಕನಿಂದ ಬೈಕ್‌ನಲ್ಲಿ ತನ್ನ ಮನೆಗೆ ಡ್ರಾಪ್ ಪಡೆದಿದ್ದಳು.

ಡ್ರಾಪ್ ನೀಡಿ ವಾಪಸ್ಸಾಗುತ್ತಿದ್ದ ವೇಳೆ ಝಂಡಾಕಟ್ಟೆ ಬಳಿ ಮುಸ್ಲಿಂ ಯುವಕರ ಗುಂಪು ಹಿಂದೂ ಯುವಕನನ್ನು ಅಡ್ಡ ಹಾಕಿದೆ. ನಿನ್ನ ಹೆಸರೇನು ಎಂದು ಪ್ರಶ್ನೆ ಮಾಡಿದ್ದು, ಆತ ಹೆಸರು ಹೇಳುತ್ತಿದ್ದ ಹಾಗೆಯೇ ನಮ್ಮ ಯುವತಿಯನ್ನು ನೀನು ಬೈಕ್‌ನಲ್ಲಿ ಏಕೆ ಕೂರಿಸಿಕೊಂಡು ಬಂದೆ ಎಂದು ಪ್ರಶ್ನಿಸಿ ಏಕಾಏಕಿ ಹಲ್ಲೆ ನಡೆಸಿದ್ದಾರೆ.

ಈ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಹಿಂದು ಯುವಕನ ಇಬ್ಬರು ಸ್ನೇಹಿತರ ಮೇಲೆಯೂ ಗುಂಪು ಹಲ್ಲೆ ನಡೆಸಿದೆ. ಈ ವೇಳೆ ಸ್ಥಳದಲ್ಲಿದ್ದ ಸ್ಥಳೀಯರು ಗಲಾಟೆ ಬಿಡಿಸಿ ಕಳುಹಿಸಿದ್ದಾರೆ. ಗಲಾಟೆ ಬಿಡಿಸಿದ ಸ್ಥಳೀಯರಿಗೂ ಮುಸ್ಲಿಂ ಯುವಕರ ಗುಂಪು ಬೆದರಿಕೆ ಹಾಕಿದೆ ಎನ್ನಲಾಗಿದೆ. ಘಟನೆ ಕುರಿತು ಹಳೆನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:41 pm, Tue, 30 May 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ