ಮುರುಘಾಶ್ರೀ ಕೇಸ್‌ನ ಸಂತ್ರಸ್ತ ನಾಲ್ವರು ಮಕ್ಕಳಿಗೆ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಲಿ: ಒಡನಾಡಿ ಸಂಸ್ಥೆಯ ಪರಶುರಾಮ್ ಆಗ್ರಹ

| Updated By: ಗಂಗಾಧರ​ ಬ. ಸಾಬೋಜಿ

Updated on: Oct 31, 2022 | 7:37 PM

ಪೋಕ್ಸೋ ಪ್ರಕರಣದ ಬಗ್ಗೆ ಸಮಗ್ರವಾದ ತನಿಖೆ ನಡೆಯಲಿ. ನ್ಯಾಯಾಂಗದ ಸುಪರ್ದಿಯಲ್ಲಿ ಸಿಬಿಐ ತನಿಖೆ ಆಗಬೇಕು ಎಂದು ಒಡನಾಡಿ ಸಂಸ್ಥೆಯ ಪರಶುರಾಮ್ ಆಗ್ರಹಿಸಿದರು.

ಮುರುಘಾಶ್ರೀ ಕೇಸ್‌ನ ಸಂತ್ರಸ್ತ ನಾಲ್ವರು ಮಕ್ಕಳಿಗೆ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಲಿ: ಒಡನಾಡಿ ಸಂಸ್ಥೆಯ ಪರಶುರಾಮ್ ಆಗ್ರಹ
ಒಡನಾಡಿ ಸಂಸ್ಥೆಯ ಪರಶುರಾಮ್
Follow us on

ಚಿತ್ರದುರ್ಗ: ಪೋಕ್ಸೋ (Pocso) ಪ್ರಕರಣದ ಬಗ್ಗೆ ಸಮಗ್ರವಾದ ತನಿಖೆ ನಡೆಯಲಿ. ನ್ಯಾಯಾಂಗದ ಸುಪರ್ದಿಯಲ್ಲಿ ಸಿಬಿಐ ತನಿಖೆ ಆಗಬೇಕು ಎಂದು ಒಡನಾಡಿ ಸಂಸ್ಥೆಯ ಪರಶುರಾಮ್ ಆಗ್ರಹಿಸಿದರು. DySP ಕಚೇರಿಯಲ್ಲಿ ವಿಚಾರಣೆ ಬಳಿಕ ಅವರು ಮಾತನಾಡಿದರು. ಸಂತ್ರಸ್ತ ಮಕ್ಕಳಿಗೆ ಶಿಕ್ಷಣ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ ಸಂತ್ರಸ್ತ ನಾಲ್ವರಿಗೆ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಲಿ ಎಂದು ಹೇಳಿದರು. ನನಗೆ ಸಿಡಬ್ಲೂಸಿ ಮೇಲೆ ನಂಬಿಕೆ ಇಲ್ಲ, ಚಿತ್ರದುರ್ಗ ಸಿಡಬ್ಲೂಸಿ ಮೇಲಂತೂ ನಂಬಿಕೆಯೇ ಇಲ್ಲ. ನಾಲ್ಕೂವರೆ ವರ್ಷ, 16 ವರ್ಷದ ಮಗುವನ್ನು ತಬ್ಬಲಿ ಮಾಡಿದ್ದಾರೆ. ಇನ್ನೊಂದು ಮಗುವಿನ ಮಾನವ ಸಾಗಣೆ ಬಗ್ಗೆ ಮಾಹಿತಿಯಿದೆ. 13 ರಿಂದ 17 ಜನ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆಂಬ ಮಾಹಿತಿಯಿದೆ. ಒಂದು ಮಗು ಹತ್ಯೆ ಆಗಿದ್ದು, ಕೇಸ್ ಮುಚ್ಚಿ ಹಾಕಿದ ಮಾಹಿತಿಯಿದೆ. 17 ಜನರ ಪೈಕಿ ನಾಲ್ಕು – ಐದು ಜನ ಮಕ್ಕಳು ನಮ್ಮ ಸಂಪರ್ಕದಲ್ಲಿದ್ದಾರೆ. ಅಕ್ಕ ಪಕ್ಕದ ಜಿಲ್ಲೆಗಳ ಸಿಡಬ್ಲೂಸಿಗೆ ತೆರಳಿ ದೂರು ದಾಖಲಿಸಲು ಹೇಳಿದ್ದೇನೆ ಎಂದು ಹೇಳಿದರು.

ಚಾರ್ಜ್ ಶೀಟ್ ಸಲ್ಲಿಕೆ ಇನ್ನೂ ಬಾಕಿ

ಇನ್ನು ಪ್ರಕರಣ ಸಂಬಂಧ ಚಿತ್ರದುರ್ಗ ನಗರದ ಡಿವೈಎಸ್ಪಿ ಕಚೇರಿಯಲ್ಲಿ ಡಿವೈಎಸ್ಪಿ ಅನಿಲ್ ಕುಮಾರ್ ನೇತೃತ್ವದಲ್ಲಿ ಮೈಸೂರಿನ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ, ಪರಶುರಾಮ್ ಸೇರಿ ನಾಲ್ವರ ವಿಚಾರಣೆ ಮಾಡಲಾಯಿತು. ಸಂತ್ರಸ್ತ ಮಕ್ಕಳ ಬಗ್ಗೆ ಒಡನಾಡಿ ಸಂಸ್ಥೆ ಈಗಾಗಲೇ ಮಾಹಿತಿ ನೀಡಿದೆ. ಚಾರ್ಜ್ ಶೀಟ್ ಸಲ್ಲಿಕೆ ಇನ್ನೂ ಬಾಕಿ ಇರುವುದರಿಂದ ನಮ್ಮ ವಿಚಾರಣೆ ಮಾಡಲಾಗಿದೆ. ಸಂತ್ರಸ್ತರು ಒಡನಾಡಿ ಸಂಸ್ಥೆಗೆ ಬಂದದ್ದು ಹೇಗೆ, ಚಿತ್ರದುರ್ಗದಲ್ಲಿ ಉಳಿದಾಗ ಹೋಟೆಲ್ ಬಿಲ್‌ ಕಟ್ಟಿದ್ದು ಯಾರು, ಹೀಗೆ ಅನೇಕ ಪ್ರಶ್ನೆಗಳನ್ನು ಕೇಳಿ ವಿಚಾರಣೆ ಮಾಡಲಾಯಿತು ಎಂದು ಪರಶುರಾಮ್ ಹೇಳಿದರು.

ಒಡನಾಡಿ ಸಂಸ್ಥೆಯ ಮುಖ್ಯಸ್ಥ ಸ್ಟ್ಯಾನ್ಲಿ ಮಾತನಾಡಿ, ಚಿತ್ರದುರ್ಗ ಡಿವೈಎಸ್​ಪಿ ಕಚೇರಿಯಲ್ಲಿ ಪ್ರಕರಣದ ಸಂಬಂಧ ನಮ್ಮ ಹೇಳಿಕೆ ದಾಖಲಿಸಿಕೊಳ್ಳಲಾಯಿತು. ಈಗಾಗಲೇ 1ನೇ ಪೋಕ್ಸೋ ಕೇಸ್​​ನಲ್ಲಿ ಚಾರ್ಜ್​ಶೀಟ್ ಸಲ್ಲಿಕೆಯಾಗಿದೆ. ಚಾರ್ಜ್​ಶೀಟ್ ನಂತರ ನಮ್ಮ ಹೇಳಿಕೆ ದಾಖಲು ಮಾಡಲಾಗಿದೆ ಎಂದು ಹೇಳಿದರು.

ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಮುಂದೂಡಿಕೆ

ಚಿತ್ರದುರ್ಗದ ಮುರುಘಾಶ್ರೀ ವಿರುದ್ಧ 2ನೇ ಫೋಕ್ಸೋ ಕೇಸ್ ಹಿನ್ನೆಲೆ 6ನೇ ಆರೋಪಿ ಮುರುಘಾಶ್ರೀ ಸಹಾಯಕ ಮಹಾಲಿಂಗ, 7ನೇ ಆರೋಪಿ ಅಡುಗೆಭಟ್ಟ ಕರಿಬಸ್ಸಪ್ಪ ಇಬ್ಬರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನವೆಂಬರ್ 2 ಕ್ಕೆ ಮುಂದೂಡಲಾಗಿದೆ.
A6, A7 ಪರ ವಕೀಲ ಪ್ರತಾಪ ಜೋಗಿ ನಿರೀಕ್ಷಣಾ ಜಾಮೀನು ಅರ್ಜಿ‌ ಸಲ್ಲಿಸಿದ್ದರು. ಸದ್ಯ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮುಂದೂಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.