ಕೇಂದ್ರ ಎಷ್ಟಾದರೂ ಪರಿಹಾರ ಕೊಡಲಿ, ರಾಜ್ಯ ಸರ್ಕಾರ ಬರಗಾಲವನ್ನ ಸಮರ್ಥವಾಗಿ ಎದುರಿಸುತ್ತದೆ: ಸಿಎಂ ಸಿದ್ದರಾಮಯ್ಯ

| Updated By: ಗಂಗಾಧರ​ ಬ. ಸಾಬೋಜಿ

Updated on: Oct 06, 2023 | 5:25 PM

ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಬಬ್ಬೂರು ಫಾರಂನಲ್ಲಿ ಆಯೋಜಿಸಿದ್ದ ಕೃಷಿ ಕೇಂದ್ರದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರ ಎಷ್ಟಾದರೂ ಬರ ಪರಿಹಾರ ಹಣವನ್ನು ಕೊಡಲಿ. ರಾಜ್ಯ ಸರ್ಕಾರ ಬರಗಾಲವನ್ನು ಸಮರ್ಥವಾಗಿ ಎದುರಿಸುತ್ತದೆ ಎಂದು ಹೇಳಿದ್ದಾರೆ.

ಕೇಂದ್ರ ಎಷ್ಟಾದರೂ ಪರಿಹಾರ ಕೊಡಲಿ, ರಾಜ್ಯ ಸರ್ಕಾರ ಬರಗಾಲವನ್ನ ಸಮರ್ಥವಾಗಿ ಎದುರಿಸುತ್ತದೆ: ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ
Follow us on

ಚಿತ್ರದುರ್ಗ, ಅಕ್ಟೋಬರ್​​ 06: ಕೇಂದ್ರ ಸರ್ಕಾರ ಎಷ್ಟಾದರೂ ಬರ ಪರಿಹಾರ ಹಣವನ್ನು ಕೊಡಲಿ. ರಾಜ್ಯ ಸರ್ಕಾರ ಬರಗಾಲವನ್ನು ಸಮರ್ಥವಾಗಿ ಎದುರಿಸುತ್ತದೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ಜಿಲ್ಲೆಯ ಹಿರಿಯೂರಿನ ಬಬ್ಬೂರು ಫಾರಂನಲ್ಲಿ ಆಯೋಜಿಸಿದ್ದ ಕೃಷಿ ಕೇಂದ್ರದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 42 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ ಆಗಿದೆ. 4,860 ಕೋಟಿ ರೂ. ಪರಿಹಾರಕ್ಕಾಗಿ ಕೇಂದ್ರಕ್ಕೆ ಮನವಿ ಮಾಡಿದ್ದೇವೆ ಎಂದು ಹೇಳಿದ್ದಾರೆ.

195 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಇನ್ನೂ 15-20 ತಾಲೂಕುಗಳು ಬರಪೀಡಿತ ಎಂದು ಘೋಷಣೆ ಮಾಡುತ್ತೇವೆ. ಆಗಸ್ಟ್​ ತಿಂಗಳಿನಲ್ಲಿ ಮಳೆ ಸಂಪೂರ್ಣ ಕೈಕೊಟ್ಟಿದೆ. ಕೃಷಿ ವಿವಿ, ತೋಟಗಾರಿಕೆ ವಿವಿಗಳಲ್ಲಿ ಹೆಚ್ಚು ಸಂಶೋಧನೆ ಆಗಬೇಕು ಎಂದಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಹೈಕಮಾಂಡ್​ಗೆ ಸೆಡ್ಡು: ನನಗೆ ಯಾವ ನೋಟಿಸ್ ಬಂದಿಲ್ಲ: ಶಾಸಕ ಶಾಮನೂರು ಶಿವಶಂಕರಪ್ಪ

ಕುಡಿಯುವ ನೀರಿಗೆ ಸಮಸ್ಯೆ ಆಗಬಾರದೆಂದು ಡಿಸಿಗಳಿಗೆ ಹೇಳಿದ್ದೇನೆ. ಎಷ್ಟೇ ಕಷ್ಟವಾದರೂ ಹಣ ಕೊಡುವುದಾಗಿ ಹೇಳಿದ್ದೇನೆ. ಜಾನುವಾರುಗಳಿಗೆ ಸಮಪರ್ಕವಾಗಿ ಮೇವು ಕೊಡುವ ವ್ಯವಸ್ಥೆ ಆಗಬೇಕು. ರಾಜ್ಯದ ಜನರು ಗುಳೆ ಹೋಗದಂತೆ ತಡೆಯಬೇಕು ಎಂದಿದ್ದಾರೆ.

ಭದ್ರಾ ಮೇಲ್ದಂಡೆ, ಎತ್ತಿನಹೊಳೆಯಿಂದ 6 ಟಿಎಂಸಿ ನೀರಿಗೆ ಮನವಿ ಮಾಡಿದ್ದು, ಈ ಬಗ್ಗೆ ಗಂಭೀರ ಚಿಂತನೆ ಮಾಡಿ ಕ್ರಮ ಕೈಗೊಳ್ಳಲಾಗುವುದು. ವಾಣಿ ವಿಲಾಸ ಸಾಗರ ಜಲಾಶಯದಿಂದ ಸೂಕ್ಷ್ಮ‌ ನೀರಾವರಿ ಹೆಚ್ಚಳ, ವಾಣಿ ಸಕ್ಕರೆ ಕಾರ್ಖಾನೆ ಅಭಿವೃದ್ಧಿಗೆ ಸುಧಾಕರ್ ಮನವಿ ಮಾಡಿದ್ದಾರೆ. ರಾಜ್ಯ ಸರ್ಕಾರದಿಂದ ಸಕ್ಕರೆ ಕಾರ್ಖಾನೆ ಚೆನ್ನಾಗಿ‌ ನಡೆಸುವುದು ಕಷ್ಟ. ಖಾಸಗಿಯವರು ಯಾರಾದರು ಬರುತ್ತಾರಾ ಎಂದು ನೋಡುತ್ತೇವೆ.

ಇದನ್ನೂ ಓದಿ: ರಾಜ್ಯದಲ್ಲಿ ಹೊಸದಾಗಿ 188 ಇಂದಿರಾ ಕ್ಯಾಂಟೀಟ್​ ಓಪನ್​: ಸಚಿವ ಭೈರತಿ ಸುರೇಶ್

ಈ ಭಾಗದಲ್ಲಿ ಕಬ್ಬು ಬೆಳೆಗೆ ಸಮರ್ಪಕ‌ ನೀರು ಇದೆಯೇ ನೋಡೋಣ. ಯುರೋಪ್‌ನಲ್ಲಿ ಯುನಿವರ್ಸಲ್‌ ಬೇಸಿಕ್‌ ಆದಾಯ ಕಾನ್ಸೆಪ್ಟ್‌ ಇದೆ. ಯುರೋಪ್ ಕಾನ್ಸೆಪ್ಟ್ ಬಳಸಲು ರಾಜ್ಯ ಸರ್ಕಾರದಿಂದಲೂ ಪ್ರಯತ್ನ ಮಾಡಲಾಗುವುದು ಎಂದರು.

ಶಾಸಕ ಶಾಮನೂರು ಆರೋಪಕ್ಕೆ ತಲೆಕೆಡಿಸಿಕೊಳ್ಳದ ಸಿಎಂ

ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯವಾಗ್ತಿರುವುದಾಗಿ ಶಾಸಕ ಶಾಮನೂರು ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ತಲೆಕೆಡಿಸಿಕೊಂಡಿಲ್ಲ. ನಾಳೆ ಮೈಸೂರಿನ ಕಲಾಮಂದಿರದಲ್ಲಿ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅಖಿಲ ಭಾರತ ವೀರಶೈವ ಮಹಾಸಭಾ ಲಿಂಗಾಯತ ಸಂಘ, ಸಂಸ್ಥೆಗಳು ಬಸವ ಬಳಗಗಳ ಒಕ್ಕೂಟದಿಂದ ಬಸವ ಜಯಂತಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

ಹೊಸ ಹೊಸ ತಳಿ ಕಂಡುಹಿಡಿಯಬೇಕು

ವಿವಿ, ಸಂಶೋಧನಾ ಕೇಂದ್ರ ಬೆಳೆದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಹೊಸ ಹೊಸ ತಳಿಗಳನ್ನು ಕಂಡು ಹಿಡಿಯಬೇಕು. ಜಗತ್ತಿನಲ್ಲಿ ಹವಾಮಾನ ಬದಲಾವಣೆ ಆಗುತ್ತದೆ. ಹವಾಮಾನ ಬದಲಾವಣೆ ಆದಾಗ ಯಾವ ಬೆಳೆ ಯಶಸ್ವಿ ಆಗುತ್ತದೆಂದು ಪತ್ತೆ ಹಚ್ಚಬೇಕು. ಮಳೆ ಕಡಿಮೆಯಾದರೂ ಬೆಳೆ ಹಾನಿ ಆಗದಂತ ಬೆಳೆ ಪತ್ತೆ ಹಚ್ಚಬೇಕು. ಕೃಷಿ ಪದವೀಧರರನ್ನು ತಯಾರು ಮಾಡುವುದು‌ ಮುಖ್ಯ ಅಲ್ಲ. ಎಷ್ಟು ತಳಿಗಳು ತಯಾರು ಮಾಡಿದ್ದೇವೆಂಬುದು ಮುಖ್ಯ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:25 pm, Fri, 6 October 23