Chitradurga Murugha Shree: ಚಿತ್ರದುರ್ಗ ಜಿಲ್ಲಾ ಕಾರಾಗೃಹದಿಂದ ಮುರುಘಾಶ್ರೀ‌ ಬಿಡುಗಡೆ

Murugha Mutt Shivamurthy Muruga Sharanaru: ಪೋಕ್ಸೋ ಪ್ರಕರಣದಲ್ಲಿ ಸಂಬಂಧ ಜೈಲು ಪಾಲಾಗಿದ್ದ ಚಿತ್ರದುರ್ಗದ ಮುರುಘಾಶ್ರೀಗೆ ಜಾಮೀನು ಸಿಕ್ಕಿದ್ದು, ಇದೀಗ ಚಿತ್ರದುರ್ಗ ಜಿಲ್ಲಾ ಕಾರಾಗೃಹದಿಂದ ಮುರುಘಾಶ್ರೀ‌ ಬಿಡುಗಡೆಯಾಗಿದ್ದಾರೆ.

Chitradurga Murugha Shree: ಚಿತ್ರದುರ್ಗ ಜಿಲ್ಲಾ ಕಾರಾಗೃಹದಿಂದ ಮುರುಘಾಶ್ರೀ‌ ಬಿಡುಗಡೆ
ಡಾ. ಶಿವಮೂರ್ತಿ ಶರಣ
Updated By: ರಮೇಶ್ ಬಿ. ಜವಳಗೇರಾ

Updated on: Nov 16, 2023 | 1:12 PM

ಚಿತ್ರದುರ್ಗ, (ನವೆಂಬರ್ 16): ಪೋಕ್ಸೋ ಪ್ರಕರಣದಲ್ಲಿ ಸಂಬಂಧ ಜೈಲು ಪಾಲಾಗಿದ್ದ ಚಿತ್ರದುರ್ಗದ ಮುರುಘಾಶ್ರೀಗೆ (Chitradurga Murugha Shree ) ಜಾಮೀನು ಸಿಕ್ಕಿದ್ದು, ಇದೀಗ ಚಿತ್ರದುರ್ಗ ಜಿಲ್ಲಾ ಕಾರಾಗೃಹದಿಂದ ಮುರುಘಾಶ್ರೀ‌ ಬಿಡುಗಡೆಯಾಗಿದ್ದಾರೆ. ಮಠದ ಹಾಸ್ಟೆಲ್‌ನಲ್ಲಿದ್ದ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಸಿಲುಕಿ, ಪೋಕ್ಸೋ ಕೇಸ್ ದಾಖಲಾಗಿ ಕಳೆದ ವರ್ಷ ಮುರುಘಾ ಶರಣರು (Shivamurthy Muruga Sharanaru) ಜೈಲುಸೇರಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್, ನವೆಂಬರ್ 8ರಂದು ಜಾಮೀನು ನೀಡಿತ್ತು ಹೀಗಾಗಿ ಇಂದು(ನವೆಂಬರ್ 16) ಮುರುಘಾಶ್ರೀ ಬರೋಬ್ಬರಿ 14 ತಿಂಗಳು ಬಳಿಕ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಮಠದ ಹಾಸ್ಟೆಲ್‌ನಲ್ಲಿದ್ದ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಮುರುಘಾಶ್ರೀಗಳ ವಿರುದ್ಧ ವಿರುದ್ಧ ಎರಡು ಪೋಕ್ಸೋ ಪ್ರಕರಣಗಗಳು ದಾಖಲಾಗಿದ್ದವು. ಈ ಪೈಕಿ ಒಂದೇ ಕೇಸ್​ನಲ್ಲಿ ಮಾತ್ರ ಮುರುಘಾಶ್ರೀಗಳನ್ನು ಬಂಧಿಸಲಾಗಿತ್ತು. ಇದೇ ಒಂದನೇ ಪ್ರಕರಣರದಲ್ಲಿ ನವೆಂಬರ್ 8ರಂದು ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿತ್ತು. ಹೀಗಾಗಿ ಚಿತ್ರದುರ್ಗ ಜಿಲ್ಲಾ ಕಾರಾಗೃಹದಿಂದ ಇಂದು ಮುರುಘಾಶ್ರೀಗಳನ್ನು‌ ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ: ಅತ್ಯಾಚಾರ ಪ್ರಕರಣ: ಮುರುಘಾ ಶ್ರೀಗಳಿಗೆ ಹೈಕೋರ್ಟ್​​ನಿಂದ ಜಾಮೀನು, ಮುಂದೇನು?

ಜೈನಿಂದ ನೇರವಾಗಿ ದಾವಣಗೆರೆಯತ್ತ

ಚಿತ್ರದುರ್ಗದಲ್ಲಿ ನೆಲೆಸುವಂತಿಲ್ಲ ಎಂದು ಕೋರ್ಟ್‌ ಷರತ್ತು ವಿಧಿಸಿದ ಹಿನ್ನಲೆಯಲ್ಲಿ ಶ್ರೀಗಳು ಜೈಲಿನಿಂದ ನೇರವಾಗಿ ದಾವಣಗೆರೆ ಕಡೆ ಹೊರಟಿದ್ದಾರೆ. ದಾವಣಗೆರೆ ನಗರದ ಜಯದೇವ ವೃತ್ತದ ಬಳಿ ಇರುವ ಶಿವಯೋಗಿ ಮಂದಿರಕ್ಕೆ ತೆರಳಿ ಜಯದೇವ ಸ್ವಾಮೀಜಿ ಗದ್ದುಗೆಗೆ ನಮಸ್ಕರಿಸಲಿದ್ದಾರೆ. ಚಿತ್ರದುರ್ಗ ಪ್ರವೇಶ ಇಲ್ಲದಿರುವುದರಿಂದ ಮುರುಘಾಶ್ರೀಗಳು ಶಿವಯೋಗಿ ಮಂದಿರದಲ್ಲೇ ಉಳಿದುಕೊಳ್ಳುವ ಸಾಧ್ಯತೆಗಳಿವೆ.

Published On - 12:46 pm, Thu, 16 November 23