ಚಿತ್ರದುರ್ಗ: ಟ್ಯಾಂಕರ್​​ ಡಿಕ್ಕಿಯಾಗಿ ಬೈಕ್​ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು

| Updated By: ಆಯೇಷಾ ಬಾನು

Updated on: Nov 27, 2022 | 8:32 AM

ಚಿತ್ರದುರ್ಗದಲ್ಲಿ ಟ್ಯಾಂಕರ್​ ಡಿಕ್ಕಿಯಾಗಿ ಒಂದೇ ಬೈಕಿನಲ್ಲಿ ತೆರಳುತ್ತಿದ್ದ ಒಂದೇ ಗ್ರಾಮದ ಮೂವರು ಮೃತಪಟ್ಟಿದ್ದಾರೆ. ಮತ್ತೊಂದೆಡೆ ದಾವಣಗೆರೆ ಜಿಲ್ಲೆ ಹೊನ್ನಾಳಿ ರಸ್ತೆಯಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ.

ಚಿತ್ರದುರ್ಗ: ಟ್ಯಾಂಕರ್​​ ಡಿಕ್ಕಿಯಾಗಿ ಬೈಕ್​ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು
ಟ್ಯಾಂಕರ್​​ ಡಿಕ್ಕಿಯಾಗಿ ಬೈಕ್​ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು
Follow us on

ಚಿತ್ರದುರ್ಗ: ಟ್ಯಾಂಕರ್​​ ಡಿಕ್ಕಿಯಾಗಿ ಬೈಕ್​ನಲ್ಲಿದ್ದ ಮೂವರು ಮೃತಪಟ್ಟ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಕೈನಡು ಗ್ರಾಮದ ಬಳಿ ನಡೆದಿದೆ. ಟ್ಯಾಂಕರ್​ ಡಿಕ್ಕಿಯಾಗಿ ಒಂದೇ ಬೈಕಿನಲ್ಲಿ ತೆರಳುತ್ತಿದ್ದ ಒಂದೇ ಗ್ರಾಮದ ಮೂವರು ಮೃತಪಟ್ಟಿದ್ದಾರೆ. ಕೈನಡು ಗ್ರಾಮದ ನಿವಾಸಿಗಳಾದ ಉಜ್ಜೀರಪ್ಪ(38), ರವಿಕುಮಾರ್(29), ಗಿರೀಶ್(23) ಮೃತ ದುರ್ದೈವಿಗಳು. ಹೊಸದುರ್ಗದಿಂದ ಕೈನಡು ಗ್ರಾಮಕ್ಕೆ ತೆರಳುವ ವೇಳೆ ಅಪಘಾತ ಸಂಭವಿಸಿದ್ದು ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರು ಹಳ್ಳಕ್ಕೆ ಬಿದ್ದು ಎಎಸ್​ಐ ಪುತ್ರ ಸಾವು

ದಾವಣಗೆರೆ ಜಿಲ್ಲೆ ಹೊನ್ನಾಳಿ ರಸ್ತೆಯಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ. ರೇಣುಕಾಚಾರ್ಯ ಸಹೋದರನ‌ ಪುತ್ರ ಚಂದ್ರು ಸಾವನ್ನಪ್ಪಿದ ರೀತಿಯಲ್ಲಿ ಬೆಳಗಾವಿ ಮೂಲದ ಯುವಕ ಸಾವನ್ನಪ್ಪಿದ್ದಾನೆ. ಪ್ರಕಾಶ್ ಅರಳೀಕಟ್ಟೆ(28) ಎಂಬ ಯುವಕ ಹೊನ್ನಾಳಿ ಹರಿಹರದ ಮಧ್ಯೆ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಮಾಸಡಿ ಗ್ರಾಮದ ಬಳಿ ಕಾರು ಹಳ್ಳಕ್ಕೆ ಬಿದ್ದು ಬಸವನಕುಡಚಿ ಗ್ರಾಮದ ASI ಪುತ್ರ ಪ್ರಕಾಶ್ ಅರಳೀಕಟ್ಟೆ ಮೃತಪಟ್ಟಿದ್ದಾರೆ. ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬೆಳಗಾವಿಯಿಂದ ಶಿವಮೊಗ್ಗಕ್ಕೆ ತನ್ನ ಸ್ನೇಹಿತರನ್ನು ಬಿಟ್ಟುಬರಲು ಹೋಗಿದ್ದ ಪ್ರಕಾಶ್ ಕಾರು ಹಳ್ಳಕ್ಕೆ ಬಿದ್ದು ಅಪಘಾತ ಸಂಭವಿಸಿದೆ.

ಇದನ್ನೂ ಓದಿ: ಅಫಜಲಪುರ ಪಟ್ಟಣದಲ್ಲಿ ಟ್ರ್ಯಾಕ್ಟರ್ ಹರಿದು ಪಾದಚಾರಿ ಸಾವು; ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಅಕ್ರಮವಾಗಿ ಜಿಂಕೆ ಬೇಟೆಯಾಡಿದ್ದ ಇಬ್ಬರ ಬಂಧನ ನಾಲ್ವರು ಪರಾರಿ

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಎಚ್.ಡಿ.ಕೋಟೆ ತಾಲ್ಲೂಕು ಮೇಟಿಕುಪ್ಪೆ ಅರಣ್ಯ ವ್ಯಾಪ್ತಿಯಲ್ಲಿ ಮೇಟಿಕುಪ್ಪೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಹಾಗೂ ಬಂಧಿತರಿಂದ ಅಕ್ರಮ ನಾಡಬಂದೂಕು ಜಿಂಕೆಯ ಮೃತದೇಹ ವಶಕ್ಕೆ ಪಡೆಯಲಾಗಿದೆ. ಮೇಟಿಕುಪ್ಪೆ ಅಭಿಷೇಕ್, ಕಲ್ಲಹಟ್ಟಿ ನೆಹರು ನಾಯಕ್ ಬಂಧಿತ ಆರೋಪಿಗಳು. ಆರೋಪಿಗಳು ಜಿಂಕೆ ಕೊಂದು‌ ಮೃತದೇಹ ಸಾಗಿಸುತ್ತಿದ್ದರು. ಈ ವೇಳೆ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ಇಬ್ಬರನ್ನು ಬಂಧಿಸಿದ್ದಾರೆ. ಆದ್ರೆ ಈ ವೇಳೆ ನಾಲ್ವರು ಪರಾರಿಯಾಗಿದ್ದಾರೆ. ವನ್ಯಜೀವಿ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗಿದೆ. ತಲೆ ಮರೆಸಿಕೊಂಡಿರುವ ಆರೋಪಿಗಳಿಗಾಗಿ ತಂಡ ರಚಿಸಿ ಶೋಧ ಕಾರ್ಯ ನಡೆಸಲಾಗುತ್ತಿದೆ.

Published On - 8:32 am, Sun, 27 November 22