ಚಿತ್ರದುರ್ಗ: ನಗರದ ಬಳಿ ರೈಲು ಹರಿದು ಮಹಿಳೆಯರಿಬ್ಬರು ಸಾವನ್ನಪ್ಪಿದ ದುರ್ಘಟನೆ ಇಂದು (ಡಿಸೆಂಬರ್ 15) ನಡೆದಿದೆ. ಚಿಂದಿ ಆಯುತ್ತಿದ್ದ ಸುಶೀಲಾ (32) ಹಾಗೂ ನೇತ್ರಾ (24) ಮೃತಪಟ್ಟಿದ್ದಾರೆ. ಚಿತ್ರದುರ್ಗ ನಗರದ ವೆಂಕಟೇಶ್ವರ ಬಡಾವಣೆಯ ನಿವಾಸಿಗಳು ಬ್ರಿಡ್ಜ್ ಮೇಲೆ ಚಿಂದಿ ಆಯುತ್ತಿದ್ದಾಗ ರೈಲು ಹರಿದಿರುವ ಶಂಕೆ ವ್ಯಕ್ತವಾಗಿದೆ. ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು: ಬಾರ್ ವಿರುದ್ಧ ಸ್ಥಳೀಯರ ಪ್ರತಿಭಟನೆ
ರಸ್ತೆ ತಡೆದು ಬಾರ್ ಮುಂದೆ ಇರುವ ರಸ್ತೆಯಲ್ಲಿ ಜನರು ಪ್ರತಿಭಟನೆ ನಡೆಸಿರುವ ಘಟನೆ ಬೆಂಗಳೂರಿನ ಮಾಗಡಿ ರಸ್ತೆಯ ಕೊಡಿಗೇಹಳ್ಲಿಯ ರಸ್ತೆಯಲ್ಲಿ ಇರುವ ಬಾರ್ ಮುಂದೆ ನಡೆದಿದೆ. ಓಪನ್ ಆಗಿರುವ ಬಾರ್ ಮುಚ್ಚುವಂತೆ ಜನರ ಆಕ್ರೋಶ ಕೇಳಿಬಂದಿದೆ. ಪ್ರತಿಭಟನೆಯಲ್ಲಿ ಸ್ಥಳೀಯರು, ಮಹಿಳೆಯರು ಸೇರಿ ಸುಮಾರು ಐವತ್ತು ಜನರು ಭಾಗಿ ಆಗಿದ್ದಾರೆ. ಈ ಹಿಂದೆಯೂ ಬಾರ್ ಓಪನ್ ಮಾಡಿದಾಗ ಸ್ಥಳೀಯರು ಪ್ರತಿಭಟನೆ ಮಾಡಿ ಬಾರ್ ಬಂದ್ ಮಾಡಿಸಿಲಾಗಿತ್ತು. ಬಳಿಕ, ಅಂದರೆ ಸುಮಾರು ಎರಡು ವರ್ಷಗಳ ನಂತರ ಇಂದು ಮತ್ತೆ ಸಿಬ್ಬಂದಿ ಬಾರ್ ಓಪನ್ ಮಾಡಿದ್ದಾರೆ.
ಬಾರ್ ಇರುವ ಸ್ಥಳಕ್ಕೆ ಅಬಕಾರಿ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಅಬಕಾರಿ ಅಧಿಕಾರಿಗಳಿಗೆ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಅಬಕಾರಿ ಅಧಿಕಾರಿಗಳು ಬಾರ್ ಪರ ಮಾತನಾಡಿದ್ದಕ್ಕೆ ತರಾಟೆಗೆ ತೆಗೆದುಕೊಂಡಿದ್ದಾರೆ. ಬಾರ್ ಮುಚ್ಚುವಂತೆ ಸ್ಥಳೀಯರು ಅಧಿಕಾರಿಗಳ ಮುಂದೆ ಆಕ್ರೋಶ ಹೊರಹಾಕಿದ್ದಾರೆ. ಜಿಲ್ಲಾಧಿಕಾರಿ ಹಿರೇಮಠ್ ವಿರುದ್ಧ ಧಿಕ್ಕಾರ ಕೂಗುತ್ತಾ ಬಾರ್ ಮುಂದೆ ಸ್ಥಳೀಯರು ಪ್ರತಿಭಟನೆ ಮಾಡಿದ್ದಾರೆ.
ಬೆಂಗಳೂರು: ಸಿನಿಮಾ ಸ್ಟೈಲ್ ನಲ್ಲಿ ಕಾಪಿ ಮಾಡಿ ಸಿಕ್ಕಿ ಬಿದ್ದ ಅಭ್ಯರ್ಥಿ
ಸಿನಿಮಾ ಶೈಲಿಯಲ್ಲಿ ಕಾಪಿ ಮಾಡಿ ಅಭ್ಯರ್ಥಿ ಸಿಕ್ಕಿ ಬಿದ್ದ ಘಟನೆ ನಡೆದಿದೆ. ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣಾ ಪೊಲೀಸರಿಂದ ಪರೀಕ್ಷಾರ್ಥಿಯ ಬಂಧನ ಮಾಡಲಾಗಿದೆ. ವೀರನಗೌಡ ಬಂಧಿತ ಆರೋಪಿ ಆಗಿದ್ದಾನೆ. ಎಲೆಕ್ಟ್ರಾನಿಕ್ ಟ್ರಾನ್ಸ್ಮೀಟರ್ ಬಳಸಿ ಪರೀಕ್ಷೆಯಲ್ಲಿ ಕಾಪಿ ಮಾಡುತ್ತಿದ್ದ. ಲೋಕೋಪಯೋಗಿ ಇಲಾಖೆಯ ಅಸಿಸ್ಟೆಂಟ್ ಇಂಜಿನಿಯರ್ ಹುದ್ದೆಗೆ ನಡೆಯುತ್ತಿದ್ದ ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ. ಕೆಪಿಎಸ್ಸಿಯಿಂದ ನಡೆಯುತ್ತಿದ್ದ ಪರೀಕ್ಷೆಯಲ್ಲಿ ಘಟನೆ ನಡೆದಿದೆ. ಕಾಪಿ ಮಾಡುತ್ತಿದ್ದಾಗಲೇ ಪರೀಕ್ಷಾ ಕೇಂದ್ರದ ಮುಖ್ಯಸ್ಥರ ಬಳಿ ಲಾಕ್ ಆಗಿದ್ದ. ಬಳಿಕ ಟ್ರಾನ್ಸ್ಮೀಟರ್ ಸಹಿತ ಆರೋಪಿಯ ಬಂಧನ ಮಾಡಲಾಗಿದೆ.
ಬೆಂಗಳೂರು: ಗಾಂಜಾ ಮಾರುತ್ತಿದ್ದ ಆರೋಪಿಗಳ ಬಂಧನ
ಬೆಂಗಳೂರಿನಲ್ಲಿ ಗಾಂಜಾ ಮಾರುತ್ತಿದ್ದ ಆರೋಪಿಗಳ ಬಂಧನ ಮಾಡಲಾಗಿದೆ. ಬ್ಯಾಟರಾಯನಪುರ ಠಾಣೆ ಪೊಲೀಸರಿಂದ ಇಬ್ಬರ ಬಂಧನ ಮಾಡಲಾಗಿದೆ. 2 ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ತುಕಾನ್ ಮಂಡಲ್ ಹಾಗೂ ನಿತ್ಯಾನಂದ ಸೇಥಿ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತ ಆರೋಪಿಗಳಿಂದ 8 ಕೆ.ಜಿ 500 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿದೆ.
ಹಾಸನ: ದೆವ್ವ ಬಿಡಿಸೋ ನೆಪದಲ್ಲಿ ಮಹಿಳೆಯ ಹತ್ಯೆ ಆರೋಪ; ಅರ್ಚಕ ಮನು ಸೆರೆ
ದೆವ್ವ ಬಿಡಿಸೋ ನೆಪದಲ್ಲಿ ಮಹಿಳೆಯ ಹತ್ಯೆ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಅರ್ಚಕ ಮನು (37) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ದೆವ್ವ ಬಿಡಿಸೋದಾಗಿ ಪೂಜೆ ಮಾಡಿ ಬೆತ್ತದಿಂದ ಹಲ್ಲೆ ಮಾಡಿದ್ದ. ತಲೆಗೆ ಗಂಭೀರ ಗಾಯವಾಗಿ ಮಹಿಳೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಡಿಸೆಂಬರ್ 8 ರಂದು ಗೌಡಗೆರೆಯ ಪಾರ್ವತಿ (37) ಮೃತಪಟ್ಟಿದ್ದರು. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಗೌಡಗೆರೆಯಲ್ಲಿ ಘಟನೆ ನಡೆದಿತ್ತು. ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.
ಇದನ್ನೂ ಓದಿ: Crime News: ಅಪ್ರಾಪ್ತೆ ಅತ್ಯಾಚಾರ; ಮೂವರ ಬಂಧನ, ಆತ್ಮಹತ್ಯೆಗೆ ಯತ್ನಿಸಿದ್ದ ಪತ್ನಿ ಸಾವಿನ ಸುದ್ದಿ ತಿಳಿದು ಪತಿ ನೇಣಿಗೆ ಶರಣು
ಇದನ್ನೂ ಓದಿ: Bengaluru Crime: ಕೆಲಸ ಕೊಡಿಸುವ ಆಸೆ ಹುಟ್ಟಿಸಿ ಯುವತಿಯನ್ನು ವೇಶ್ಯಾವಾಟಿಕೆಗೆ ಬಳಕೆ; ಪೊಲೀಸರ ದಾಳಿ ವೇಳೆ ಜಾಲ ಪತ್ತೆ
Published On - 5:47 pm, Wed, 15 December 21