Bengaluru Crime: ಕೆಲಸ ಕೊಡಿಸುವ ಆಸೆ ಹುಟ್ಟಿಸಿ ಯುವತಿಯನ್ನು ವೇಶ್ಯಾವಾಟಿಕೆಗೆ ಬಳಕೆ; ಪೊಲೀಸರ ದಾಳಿ ವೇಳೆ ಜಾಲ ಪತ್ತೆ
Crime News: ಹಣ, ಎರಡು ಮೊಬೈಲ್ ಹಾಗೂ ಕಾಂಡೋಮ್ ಬಾಕ್ಸ್ ಜಪ್ತಿ ಮಾಡಲಾಗಿದೆ. ಮೊಬೈಲ್ ಕರೆಗಳ ಮುಖಾಂತರವಾಗಿ ಗಿರಾಕಿಗಳನ್ನ ಕರೆಸಿಕೊಂಡು ಹಣ ಸಂಪಾದನೆ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ನೆಲಮಂಗಲ: ಕೆಲಸ ಕೊಡಿಸುವುದಾಗಿ ಆಸೆ ಹುಟ್ಟಿಸಿ ಹೊರ ರಾಜ್ಯದ ಯುವತಿಯನ್ನು ವೇಶ್ಯಾವಾಟಿಕೆಗೆ ಬಳಕೆ ಮಾಡಿದ ಘಟನೆ ನಡೆದಿದೆ. ಬ್ಯಾಡರಹಳ್ಳಿ ಪೊಲೀಸರು ದಾಳಿ ನಡೆಸಿ ಯುವತಿ ರಕ್ಷಣೆ ಮಾಡಿದ್ದಾರೆ. ಪಶ್ಚಿಮ ಬಂಗಾಳದ 25 ವರ್ಷದ ಯುವತಿಯನ್ನು ರಕ್ಷಣೆ ಮಾಡಲಾಗಿದೆ. ಕಿಂಗ್ ಪಿನ್ ಆಶಾ (38) ವಶಕ್ಕೆ ಪಡೆಯಲಾಗಿದೆ. ತಲೆಮರೆಸಿಕೊಂಡಿರುವ ರಾಜುಗೆ ತಲಾಷ್ ನೀಡಲಾಗಿದೆ. ಹಣ, ಎರಡು ಮೊಬೈಲ್ ಹಾಗೂ ಕಾಂಡೋಮ್ ಬಾಕ್ಸ್ ಜಪ್ತಿ ಮಾಡಲಾಗಿದೆ. ಮೊಬೈಲ್ ಕರೆಗಳ ಮುಖಾಂತರವಾಗಿ ಗಿರಾಕಿಗಳನ್ನ ಕರೆಸಿಕೊಂಡು ಹಣ ಸಂಪಾದನೆ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇಲ್ಲಿನ ವೀರಭದ್ರೇಶ್ವರ ನಗರ ಪ್ರಸನ್ನ ಬಡಾವಣೆ ಕಟ್ಟಡದ 2ನೇ ಮಹಡಿಯಲ್ಲಿ ಹುಡುಗಿಯರನ್ನು ಇಟ್ಟುಕೊಂಡು ಮೊಬೈಲ್ ಕರೆಗಳ ಮೂಲಕ ಗಿರಾಕಿಗಳನ್ನು ಬರಮಾಡಿಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿತ್ತು. ತಮ್ಮ ಜೊತೆ ಬಂದರೆ ಸ್ಥಳ ತೋರಿಸುವುದಾಗಿ ಮಾಹಿತಿಯನ್ನು ತಿಳಿಸಿದ ಮೇರೆಗೆ ಮೇಲಾಧಿಕಾರಿಗಳಿಗೆ ತಿಳಿಸಿ, ಅನುಮತಿಯನ್ನು ಪಡೆದುಕೊಂಡು ಇಬ್ಬರು ಆ ವಿಳಾಸದ ಬಳಿ ಹೋಗಿ ಮನೆಯ ಮೇಲೆ ದಾಳಿ ನಡೆಸಿದ್ದಾರೆ.
ಆ ವೇಳೆ, ಮನೆಯಲ್ಲಿದ್ದ ಒಬ್ಬಾತ ತಪ್ಪಿಸಿಕೊಂಡಿದ್ದಾನೆ. ನಂತರ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ನೊಂದ ಯುವತಿಯನ್ನು ರಕ್ಷಣೆ ಮಾಡಲಾಗಿದೆ. ಬಡಕುಟುಂಬದ ಹೆಣು ಮಕ್ಕಳಿಗೆ ಹೆಚ್ಚಿನ ಸಂಬಳ ಬರುವ ಕೆಲಸ ಕೊಡಿಸುವುದಾಗಿ ನಂಬಿಸಿ ಮಾನವಸಾಗಣೆ ಮಾಡಿಕೊಂಡು ಬಂದು, ವೇಶ್ಯಾವಾಟಿಕೆಯಲ್ಲಿ ತೊಡಗಿದರೆ ಹೆಚ್ಚಿನ ಹಣ ಸಂಪಾದನೆ ಮಾಡಬಹುದು ಎಂದು ಅಮೀಷ ತೋರಿಸಿ, ಗಿರಾಕಿಗಳೊಂದಿಗೆ ವೇಶ್ಯಾವಾಟಿಕೆಯಲ್ಲಿ ತೊಡಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ.
ಬೆಂಗಳೂರು: ನೈಜೀರಿಯಾ ಮೂಲದ ವಿಕ್ಟರ್ ಕೊಂದಿದ್ದ ಮೂವರು ವಶಕ್ಕೆ ಬೆಂಗಳೂರಿನಲ್ಲಿ ವಿದೇಶಿ ಪ್ರಜೆಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನೈಜೀರಿಯಾ ಮೂಲದ ವಿಕ್ಟರ್ ಕೊಂದಿದ್ದ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಕಮ್ಮನಹಳ್ಳಿ ಕುಳ್ಳಪ್ಪ ಸರ್ಕಲ್ನಲ್ಲಿ ನಿನ್ನೆ ನಡೆದಿದ್ದ ಹತ್ಯೆ ಕೇಸ್ ಸಂಬಂಧಿಸಿ ಅರುಣ್, ನೀಲಕಂಠ, ಫಿಲಿಪ್ ರಾಜ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಿಯರ್, ಸಿಗರೇಟ್ ವಿಚಾರಕ್ಕೆ ಗಲಾಟೆ ನಡೆದು ಕೊಲೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಬಿಯರ್ ಬಾಟಲಿಯಿಂದ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಗೆ ಮಾಡಲಾಗಿದೆ. ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಮಂಗಳೂರು: ಗಾಂಜಾ ಸಾಗಿಸ್ತಿದ್ದ ವಿದ್ಯಾರ್ಥಿಗಳ ಬಂಧನ ಸ್ಕೂಟರ್ನಲ್ಲಿ ಗಾಂಜಾ ಸಾಗಿಸ್ತಿದ್ದ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಮಂಗಳೂರು ಸಮೀಪದ ಉಳ್ಳಾಲದ ಬಗಂಬಿಲ ಬಳಿ ಸೆರೆ ಹಿಡಿಯಲಾಗಿದೆ. ಕೇರಳ ಮೂಲದ ವಿದ್ಯಾರ್ಥಿ ಆದರ್ಶ್ ಜ್ಯೋತಿ ಹಾಗೂ ಕೊಟ್ಟಾಯಂನ ಲೋಯಲ್ ಜೋಯ್ಸ್ ಬಂಧಿತ ವಿದ್ಯಾರ್ಥಿಗಳು. ಬಂಧಿತ ವಿದ್ಯಾರ್ಥಿಗಳಿಂದ 220 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ: Crime News: ತಾಯಿ ಮಗಳ ಸರ ಕದಿಯಲು ಯತ್ನ; ಸರಗಳ್ಳರನ್ನು ಚೇಸ್ ಮಾಡಿ ಸೆರೆಹಿಡಿದ ಪೊಲೀಸರು!
ಇದನ್ನೂ ಓದಿ: Crime News: ಒಮಿಕ್ರಾನ್ ಪಾಸಿಟಿವ್ ವ್ಯಕ್ತಿ ಎಸ್ಕೇಪ್ ಪ್ರಕರಣದಲ್ಲಿ ನಾಲ್ವರ ಸೆರೆ, ಬೆಂಗಳೂರಿನಲ್ಲಿ ವಿದೇಶಿ ಪ್ರಜೆಯ ಹತ್ಯೆ