Crime News: ತಾಯಿ ಮಗಳ ಸರ ಕದಿಯಲು ಯತ್ನ; ಸರಗಳ್ಳರನ್ನು ಚೇಸ್ ಮಾಡಿ ಸೆರೆಹಿಡಿದ ಪೊಲೀಸರು!
ಬೈಕ್ ಅನ್ನು ಯುವತಿ ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಸುಮಾರು ಅರ್ಧ ಪರ್ಲಾಂಗ್ ದೂರ ಯುವತಿಯನ್ನು ಎಳೆದುಕೊಂಡು ಸರಗಳ್ಳರು ಓಡಿದ್ದಾರೆ. ಈ ವೇಳೆ, ಅದೇ ರಸ್ತೆಯಲ್ಲಿ ತೆರಳುತ್ತಿದ್ದ ಪಶ್ಚಿಮ ಸಂಚಾರ ಠಾಣೆಯ ಪೊಲೀಸ್ ಮುನೇಶಪ್ಪ ಸರಗಳ್ಳರ ಚೇಸ್ ಮಾಡಿದ್ದಾರೆ.
ಶಿವಮೊಗ್ಗ: ಸಂಚಾರಿ ಪೊಲೀಸರು ಜೇವದ ಹಂಗು ತೊರೆದು ಸರಗಳ್ಳರನ್ನು ಹಿಂಬಾಲಿಸಿ ಹೋಗಿ ಹಿಡಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಪೊಲೀಸ್ರ ಕೈಗೆ ಓರ್ವ ಸರಗಳ್ಳ ಸಿಕ್ಕಿಬಿದ್ದಿದ್ದಾನೆ. ಮತ್ತೊಬ್ಬ ಸರಗಳ್ಳ ಎಸ್ಕೇಪ್ ಆಗಿದ್ದಾನೆ. ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣಾ ಪೊಲೀಸ್ ವಿ.ಹೆಚ್. ಮುನೇಶಪ್ಪನ ಸಾಹಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಶಿವಮೊಗ್ಗದ ಉಷಾ ನರ್ಸಿಂಗ್ ಹೋಂ ಬಳಿ ಘಟನೆ ನಡೆದಿದೆ.
ಬಸ್ಗಾಗಿ ಕಾಯುತ್ತಿದ್ದ ತಾಯಿ ಮಗಳ ಕೈಯಿಂದ ಬೈಕ್ನಲ್ಲಿ ಬಂದ ಇಬ್ಬರು ಸರಗಳ್ಳರು ಕಳ್ಳತನ ಮಾಡಿದ್ದಾರೆ. ಯುವತಿಯ ಕತ್ತಿನಲ್ಲಿದ್ದ ಸರಕ್ಕೆ ಕದಿಯಲು ಯತ್ನಿಸಿದ್ದಾರೆ. ಯುವತಿ ಸರವನ್ನು ಗಟ್ಟಿಯಾಗಿ ಹಿಡಿದುಕೊಂಡ ಹಿನ್ನಲೆ ಕಳ್ಳತನ ವಿಫಲವಾಗಿದೆ. ಬೈಕ್ ಅನ್ನು ಯುವತಿ ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಸುಮಾರು ಅರ್ಧ ಪರ್ಲಾಂಗ್ ದೂರ ಯುವತಿಯನ್ನು ಎಳೆದುಕೊಂಡು ಸರಗಳ್ಳರು ಓಡಿದ್ದಾರೆ. ಈ ವೇಳೆ, ಅದೇ ರಸ್ತೆಯಲ್ಲಿ ತೆರಳುತ್ತಿದ್ದ ಪಶ್ಚಿಮ ಸಂಚಾರ ಠಾಣೆಯ ಪೊಲೀಸ್ ಮುನೇಶಪ್ಪ ಸರಗಳ್ಳರ ಚೇಸ್ ಮಾಡಿದ್ದಾರೆ.
2 ಕಿ.ಮೀಗೂ ದೂರ ಸರಗಳ್ಳರನ್ನು ಸಂಚಾರಿ ಪೊಲೀಸರು ಹಿಂಬಾಲಿಸಿದ್ದಾರೆ. ಶರಾವತಿ ನಗರದಲ್ಲಿ ಕಳ್ಳರ ಬೈಕ್ ಪೆಟ್ರೋಲ್ ಖಾಲಿ ಆಗಿದೆ. ಬೈಕ್ ಅಲ್ಲೇ ಬಿಟ್ಟು ಸರಗಳ್ಳರು ಎಸ್ಕೇಪ್ ಆಗಲು ಯತ್ನಿಸಿದ್ದಾರೆ. ಈ ವೇಳೆ, ಸರಗಳ್ಳರನ್ನು ಹಿಡಿಯಲೆತ್ನಿಸಿದ ಪೊಲೀಸ್ ಮುನೇಶಪ್ಪನ ಮೇಲೆ ಚಾಕುವಿನಿಂದ ಹಲ್ಲೆಗೆ ಯತ್ನ ಆಗಿದೆ. ಸಂಚಾರಿ ಪೊಲೀಸ್ ಧೈರ್ಯದಿಂದ ಸರಗಳ್ಳನನ್ನು ಹಿಡಿಯಲು ಯಶಸ್ವಿ ಆಗಿದ್ದಾರೆ. ಮತ್ತೊಬ್ಬ ಸರಗಳ್ಳನು ಎಸ್ಕೇಪ್ ಆಗಿದ್ಥಾನೆ. ಜಯನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.
ಬೀದರ್: ಬೈಕ್ ಕಳ್ಳನ ಬಂಧನ ಬೀದರ್ ಗಾಂಧಿಗಂಜ್ ಪೊಲೀಸರ ಕಾರ್ಯಾಚರಣೆಯಲ್ಲಿ ಬೈಕ್ ಕಳ್ಳನ ಬಂಧನ ಮಾಡಲಾಗಿದೆ. ಬಂದಿತನಿಂದ 22 ಬೈಕ್ ಪೊಲೀಸ್ ವಶಕ್ಕೆ ಪಡೆಯಲಾಗಿದೆ. 11 ಲಕ್ಷ 65 ಲಕ್ಷದ ಮೌಲ್ಯದ ಬೈಕ್ ಗಳನ್ನು ವಶಪಡಿಸಲಾಗಿದೆ. ಮಹಾರಾಷ್ಟ್ರ ತೆಲಂಗಾಣ ಕರ್ನಾಟಕ ಪಾಸಿಂಗ್ ಹೊಂದಿರುವ ಬೈಕ್ ಗಳನ್ನು ವಶಪಡಿಸಲಾಗಿದೆ. ಕಳ್ಳತನವಾಗಿದ್ದ ಎಲ್ಲಾ ಬೈಕ್ ಗಳು ಪಲ್ಸರ್ ಹಿರೋಹೊಂಡಾ ಆಗಿವೆ. ಬೈಕ್ ಕಳೆದುಕೊಂಡ ಮಾಲೀಕರ ಪತ್ತೆಕಾರ್ಯದಲ್ಲಿ ಪೊಲೀಸರು ತೊಡಗಿಕೊಂಡಿದ್ಧಾರೆ. ಬೀದರ್ ನಗರದ ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಧಾರವಾಡ: ಹುಬ್ಬಳ್ಳಿ ರಸ್ತೆಯಲ್ಲಿ ಸರಣಿ ಅಪಘಾತ ಧಾರವಾಡದ ಹುಬ್ಬಳ್ಳಿ ರಸ್ತೆಯಲ್ಲಿ ಸರಣಿ ಅಪಘಾತ ಆಗಿದೆ. ಬೈಕ್, ಕಾರು, ಅಟೋ ನಡುವೆ ಸರಣಿ ಅಪಘಾತ ಸಂಭವಿಸಿದೆ. ಧಾರವಾಡದ ಯಾಲಕ್ಕಿ ಶೆಟ್ಟರ್ ಕಾಲೋನಿ ಬಳಿ ಘಟನೆ ನಡೆದಿದೆ. ಅದೃಷ್ಟವಶಾತ್ ಅಪಘಾತದಲ್ಲಿ ಯಾರಿಗೂ ಗಾಯ ಆಗಿಲ್ಲ.
ಹೆದ್ದಾರಿಯಲ್ಲಿ ಚಾಲಕನ ನಿರ್ಲಕ್ಷ್ಯಕ್ಕೆ ಟ್ಯಾಂಕರ್ ಅಪಘಾತ ಸಂಭವಿಸಿದ ಘಟನೆ ಅಂಕೋಲಾ-ಯಲ್ಲಾಪುರ ಹೆದ್ದಾರಿಯಲ್ಲಿ ನಡೆದಿದೆ. ಮದ್ಯ ಸೇವಿಸಿ ವಾಹನ ಚಲಾಯಿಸಿದ್ದಕ್ಕೆ ಚಾಲಕನಿಗೆ ಥಳಿಸಲಾಗಿದೆ. ಚಾಲಕನಿಗೆ ಟ್ಯಾಂಕರ್ ಮಾಲೀಕ ಹಿಗ್ಗಾಮುಗ್ಗಾ ಥಳಿಸಿದ್ದಾನೆ.
ಇದನ್ನೂ ಓದಿ: Crime News: ಒಮಿಕ್ರಾನ್ ಪಾಸಿಟಿವ್ ವ್ಯಕ್ತಿ ಎಸ್ಕೇಪ್ ಪ್ರಕರಣದಲ್ಲಿ ನಾಲ್ವರ ಸೆರೆ, ಬೆಂಗಳೂರಿನಲ್ಲಿ ವಿದೇಶಿ ಪ್ರಜೆಯ ಹತ್ಯೆ
ಇದನ್ನೂ ಓದಿ: Crime News: ಆಸ್ಪತ್ರೆಯಲ್ಲಿ ರೋಗಿಯ ಮಾಂಗಲ್ಯ ಕದ್ದ ಆರೋಪಿ ಬಂಧನ, ಕಾರಣ ಇಲ್ಲದೇ ತಮಟೆ ಬಾರಿಸಿದ್ದಕ್ಕೆ ಹಲ್ಲೆ