Crime News: ಆಸ್ಪತ್ರೆಯಲ್ಲಿ ರೋಗಿಯ ಮಾಂಗಲ್ಯ ಕದ್ದ ಆರೋಪಿ ಬಂಧನ, ಕಾರಣ ಇಲ್ಲದೇ ತಮಟೆ ಬಾರಿಸಿದ್ದಕ್ಕೆ ಹಲ್ಲೆ

ಏ. 4ರಂದು ಮಹಿಳೆಯ ಮಾಂಗಲ್ಯ ಸರ ಕದ್ದಿದ್ದ. ಸರ ಕಾಣೆಯಾಗಿದ್ದ ವಿಚಾರವಾಗಿ ಬ್ಯಾಡರಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ, ಇದೀಗ ತನಿಖೆ ನಡೆಸಿ ಆರೋಪಿ ಇಮ್ತಿಯಾಜ್​ನನ್ನು ಪೊಲೀಸರು ಬಂಧಿಸಿದ್ದಾರೆ.

Crime News: ಆಸ್ಪತ್ರೆಯಲ್ಲಿ ರೋಗಿಯ ಮಾಂಗಲ್ಯ ಕದ್ದ ಆರೋಪಿ ಬಂಧನ, ಕಾರಣ ಇಲ್ಲದೇ ತಮಟೆ ಬಾರಿಸಿದ್ದಕ್ಕೆ ಹಲ್ಲೆ
ಸಾಂಕೇತಿಕ ಚಿತ್ರ
Follow us
TV9 Web
| Updated By: ganapathi bhat

Updated on:Dec 12, 2021 | 7:17 PM

ಬೆಂಗಳೂರು: ಆಸ್ಪತ್ರೆಯಲ್ಲಿ ರೋಗಿಯ ಮಾಂಗಲ್ಯ ಸರ ಕದ್ದಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸರಿಂದ ಇಮ್ತಿಯಾಜ್​ ಸೆರೆ ಹಿಡಿಯಲಾಗಿದೆ. ಬಂಧಿತ ಇಮ್ತಿಯಾಜ್​ನಿಂದ 70 ಗ್ರಾಂ ಚಿನ್ನದ ಸರ ವಶಕ್ಕೆ ಪಡೆಯಲಾಗಿದೆ. ಖಾಸಗಿ ಆಸ್ಪತ್ರೆ ICU ವಾರ್ಡ್​ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ, ಕೊರೊನಾ ಚಿಕಿತ್ಸೆಗೆ ದಾಖಲಾಗಿದ್ದ ಮಹಿಳೆ ಸರ ಕದ್ದಿದ್ದ. ಏ. 4ರಂದು ಮಹಿಳೆಯ ಮಾಂಗಲ್ಯ ಸರ ಕದ್ದಿದ್ದ. ಸರ ಕಾಣೆಯಾಗಿದ್ದ ವಿಚಾರವಾಗಿ ಬ್ಯಾಡರಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ, ಇದೀಗ ತನಿಖೆ ನಡೆಸಿ ಆರೋಪಿ ಇಮ್ತಿಯಾಜ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಗದಗ: ತಲ್ವಾರ್ ಹಿಡಿದು ಡಾನ್ಸ್ ಮಾಡಿದ ರಾಜಕಾರಿಣಿ, ಶಿಸ್ತುಕ್ರಮಕ್ಕೆ ಜನರ ಒತ್ತಾಯ ನಗರದ ಜವಳ ಗಲ್ಲಿಯಲ್ಲಿ ಡಿಜೆ ಸದ್ದಿಗೆ ಕೆಲವರು ಮಾರಕಾಸ್ತ್ರ ಹಿಡಿದು ಕುಣಿದಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಆರೋಪಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ನಗರಸಭೆ ಮಾಜಿ ಉಪಾಧ್ಯಕ್ಷೆಯ ಪತಿ ಜೈನುಲ್ಲಾ ಇತರ ಯುವಕರೊಂದಿಗೆ ಡಾನ್ಸ್ ಮಾಡುವಾಗ ತಲ್ವಾರ್ ಪ್ರದರ್ಶಿಸಿದ್ದಾರೆ. ಶಾಂತಿಪ್ರಿಯ ಜಿಲ್ಲೆಯಲ್ಲಿ ತಲವಾರ್ ಪ್ರದರ್ಶನಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಾರದ ಹಿಂದೆ ಈ ಘಟನೆ ನಡೆದಿದೆ ಎನ್ನಲಾಗಿದೆ.

ವ್ಯಾಪಾರ ಮಾಡ್ತಿದ್ದ ಜಾಗ ಖಾಲಿ ಮಾಡುವಂತೆ ಕಿರುಕುಳ; ಗೊರವನಹಳ್ಳಿ ಮಹಾಲಕ್ಷ್ಮೀ ದೇಗುಲದ ಟ್ರಸ್ಟ್​ ವಿರುದ್ಧ ಆರೋಪ ವ್ಯಾಪಾರ ಮಾಡ್ತಿದ್ದ ಜಾಗ ಖಾಲಿ ಮಾಡುವಂತೆ ಕಿರುಕುಳ ನೀಡುತ್ತಿರುವ ಆರೋಪ ಗೊರವನಹಳ್ಳಿ ಮಹಾಲಕ್ಷ್ಮೀ ದೇಗುಲದ ಟ್ರಸ್ಟ್​ ವಿರುದ್ಧ ಕೇಳಿಬಂದಿದೆ. 15-20 ವರ್ಷಗಳಿಂದ ಹೂವು ಹಣ್ಣು ಪೂಜೆ ಸಾಮಗ್ರಿ ವ್ಯಾಪಾರ ಮಾಡ್ತಿದ್ದ ಅಂಗಡಿ ಮುಂಗಟ್ಟನ್ನು ಟ್ರಸ್ಟ್​ ಬಂದ್ ಮಾಡಿಸಿದೆ. ಸರ್ಕಾರಿ ಸ್ವತ್ತಿನ ಜಾಗದ ಮೇಲೆ ಟ್ರಸ್ಟ್​ನಿಂದ ದಬ್ಬಾಳಿಕೆ ಆರೋಪ ಕೇಳಿಬಂದಿದೆ.

ವಾಣಿಜ್ಯ ಸಂಕೀರ್ಣ ನಿರ್ಮಿಸಲು ಟ್ರಸ್ಟ್​ ಜಾಗ ಖಾಲಿ ಮಾಡಿಸುತ್ತಿರುವ ಬಗ್ಗೆ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಕಾನೂನು ಸಮರಕ್ಕೆ ಸ್ಥಳೀಯ ವ್ಯಾಪಾರಿಗಳು ಮುಂದಾಗಿದ್ದಾರೆ. ಈ ಮಧ್ಯೆ, ವಾಣಿಜ್ಯ ಸಂಕೀರ್ಣದ ಮಳಿಗೆ ಬಾಡಿಗೆ ನೀಡುತ್ತೇವೆ ಎಂದು ಟ್ರಸ್ಟ್​ ಹೇಳುತ್ತಿದೆ. ಅಧಿಕೃತ ರಶೀದಿ ನೀಡಿದರೆ ಖಾಲಿ ಮಾಡ್ತೇವೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ಪ್ರಕರಣ ಈಗ ಪೊಲೀಸ್ ಠಾಣೆ, ತಾಲೂಕು ಆಡಳಿತ ಕಚೇರಿ ಮೆಟ್ಟಿಲೇರಿದೆ. ಸುಮಾರು 10 ಕುಟುಂಬಗಳಿಂದ ಟ್ರಸ್ಟ್​ ವಿರುದ್ಧ ಅಸಮಾಧಾನ ಕೇಳಿಬಂದಿದೆ.

ಕಾರಣ ಇಲ್ಲದೇ ತಮಟೆ ಬಾರಿಸಿದ್ದಾಗಿ ಆರೋಪಿಸಿ ಹಲ್ಲೆ ಕಾರಣ ಇಲ್ಲದೇ ತಮಟೆ ಬಾರಿಸಿದ್ದಾಗಿ ಆರೋಪಿಸಿ ಹಲ್ಲೆ ಮಾಡಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಗ್ರಾಮ ಮೊದಲಕೋಟೆಯಲ್ಲಿ ನಡೆದಿದೆ. ಇಲ್ಲಿನ ಯುವಕನಿಗೆ ಥಳಿಸಿದ ಆರೋಪ ಕೇಳಿಬಂದಿದೆ. ಗ್ರಾಮ ಪಂಚಾಯಿತಿ ಸದಸ್ಯನ ನೇತೃತ್ವದಲ್ಲೇ ಹಲ್ಲೆ ಆರೋಪ ವ್ಯಕ್ತವಾಗಿದೆ. ನಾರಾಯಣಸ್ವಾಮಿಗೆ ಗಾಯವಾಗಿದ್ದು, ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗ್ರಾ.ಪಂ. ಸದಸ್ಯ ಗೋವಿಂದರಾಜು, ಗಂಗಮುನಿ, ಶಿವಕುಮಾರ, ಶಶಿಕಲಾ, ನರಸಿಂಹಮೂರ್ತಿ, ರಾಜು ವಿರುದ್ಧ ಹಲ್ಲೆ ಆರೋಪ ಕೇಳಿಬಂದಿದೆ. ನೆಲಮಂಗಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಸಂಚಾರಿ ಪೊಲೀಸರ ತಪಾಸಣೆ ವೇಳೆ ಅಪಘಾತ ಪ್ರಕರಣದಲ್ಲಿ ಗಂಭೀರ ಗಾಯಗೊಂಡಿದ್ದ ಯುವಕ ಸಾವು ಸಂಚಾರಿ ಪೊಲೀಸರ ತಪಾಸಣೆ ವೇಳೆ ಅಪಘಾತ ಪ್ರಕರಣದಲ್ಲಿ ಗಂಭೀರ ಗಾಯಗೊಂಡಿದ್ದ ಯುವಕ ಕೌಶಿಕ್(19) ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಕಳೆದ 3 ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೌಶಿಕ್ ತಲೆಗೆ ತೀವ್ರ ಪೆಟ್ಟಾಗಿ ಮೆದುಳು ನಿಷ್ಕ್ರಿಯವಾಗಿತ್ತು. ವಿಜಯನಗರ ಸಂಚಾರಿ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.

ಲಾರಿ ಡಿಕ್ಕಿ; ಬೈಕ್​ನಲ್ಲಿದ್ದ ಮಗಳು ಸಾವು ಲಾರಿ ಡಿಕ್ಕಿಯಾಗಿ ಬೈಕ್​ನಲ್ಲಿದ್ದ ಮಗಳು ಸಾವು, ತಂದೆಗೆ ಗಾಯವಾದ ಘಟನೆ ಹಾವೇರಿ ತಾಲೂಕಿನ ಗುತ್ತಲ ತಾಂಡಾ ಬಳಿ ಸಂಭವಿಸಿದೆ. ದೇವಗಿರಿ ಗ್ರಾಮದ ಮಾಲಾ ತಡಸದ(20) ಮೃತಪಟ್ಟವರು. ತಂದೆ ಕೋಟೆಪ್ಪ ಕಣ್ಣೆದುರೇ ಮಗಳು ಮಾಲಾ ಪ್ರಾಣಬಿಟ್ಟಿದ್ದಾರೆ. ಅಪಘಾತದ ನಂತರ ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾನೆ. ಗುತ್ತಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಜೇನು ನೊಣಗಳ ದಾಳಿಯಿಂದ ಮೂವರಿಗೆ ಗಾಯ ಕಿಡಿಗೇಡಿಗಳು ಮನೆ ಬಳಿ ನಿಲ್ಲಿಸಿದ್ದ ಬೈಕ್​ಗಳ ಪೆಟ್ರೋಲ್ ಕದ್ದ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಪಟ್ಟಣದಲ್ಲಿ ನಡೆದಿದೆ. ಪೆಟ್ರೋಲ್​ ಕಳ್ಳತನಕ್ಕೆ ಬೇಸತ್ತ ಜನರು ಸೂಕ್ತ ಕ್ರಮ ಕೈಗೊಳ್ಳುವಂತೆ ಜಾಲಹಳ್ಳಿ ಪೊಲೀಸರಿಗೆ ಮನವಿ ಮಾಡಿದ್ದಾರೆ. ಜೇನು ನೊಣಗಳ ದಾಳಿಯಿಂದ ಮೂವರಿಗೆ ಗಾಯವಾದ ಘಟನೆ ಉತ್ತರ ಕನ್ನಡ ಜಿಲ್ಲೆ ಅಂಕೋಲಾ ಬಸ್ ನಿಲ್ದಾಣದಲ್ಲಿ ನಡೆದಿದೆ. ಊರಿಗೆ ತೆರಳಲು ಬಸ್​ ನಿಲ್ದಾಣಕ್ಕೆ ಬಂದಿದ್ದಾಗ ದಾಳಿ ಮಾಡಿದ್ದು. ಓರ್ವ ವಿದ್ಯಾರ್ಥಿನಿ ಸೇರಿದಂತೆ ಮೂವರಿಗೆ ಗಾಯವಾಗಿದೆ. ಗಾಯಾಳುಗಳಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ಬಿಪಿನ್ ರಾವತ್ ಸಾವಿನ ಬಗ್ಗೆ ಆಕ್ಷೇಪಾರ್ಹ ಪೋಸ್ಟ್; ಮೈಸೂರು ಮೂಲದ ಟಿಕೆ ವಸಂತ್ ಕುಮಾರ್ ಬಂಧನ

ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಹೆರಿಗೆ ವೇಳೆ ಗರ್ಭಿಣಿ, ಮಗು ಸಾವು! ಆಸ್ಪತ್ರೆ ಮುಂದೆ ಕುಟುಂಬಸ್ಥರು ಧರಣಿ

Published On - 7:16 pm, Sun, 12 December 21