AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shocking News: ಆಮ್ಲೆಟ್​ ಸೀದು ಹೋಗಿದೆ ಎಂದ ಗ್ರಾಹಕನಿಗೆ ಬಿಸಿ ಬಾಣಲೆಯಿಂದ ಹೊಡೆದ ಹೋಟೆಲ್ ಮಾಲೀಕ

Crime News Today: ಆಮ್ಲೆಟ್ ಮಾರಾಟಗಾರನೊಬ್ಬ ನೀಡಿದ ಆಮ್ಲೆಟ್ ಸೀದು ಹೋಗಿದೆ ಎಂದು ದೂರಿದ್ದರಿಂದ ಗ್ರಾಹಕನ ತಲೆಗೆ ಬಿಸಿ ಬಾಣಲೆಯಿಂದ ಹೊಡೆದ ಆರೋಪದ ಮೇಲೆ ಆ ಅಂಗಡಿಯ ಮಾಲೀಕನನ್ನು ಬಂಧಿಸಲಾಗಿದೆ

Shocking News: ಆಮ್ಲೆಟ್​ ಸೀದು ಹೋಗಿದೆ ಎಂದ ಗ್ರಾಹಕನಿಗೆ ಬಿಸಿ ಬಾಣಲೆಯಿಂದ ಹೊಡೆದ ಹೋಟೆಲ್ ಮಾಲೀಕ
ಆಮ್ಲೆಟ್
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Dec 13, 2021 | 8:30 PM

ಮುಂಬೈ: ರಸ್ತೆ ಬದಿಯ ಸಣ್ಣ ಹೋಟೆಲ್​ಗೆ ಹೋದ ಗ್ರಾಹಕನೊಬ್ಬ ಆಮ್ಲೆಟ್ ಆರ್ಡರ್ ಮಾಡಿದ. ತನಗೆ ನೀಡಿದ ಆಮ್ಲೆಟ್ ಸೀದು ಹೋಗಿದೆ ಎಂದು ಆತ ರೇಗಾಡಿದ್ದರಿಂದ ಕೋಪಗೊಂಡ ಆ ಅಂಗಡಿಯ ಮಾಲೀಕ ಆ ಗ್ರಾಹಕನ ತಲೆಗೆ ಬಿಸಿಯಾದ ಬಾಣಲೆಯಿಂದ ಹೊಡೆದಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಆಮ್ಲೆಟ್ ಮಾರಾಟಗಾರನೊಬ್ಬ ನೀಡಿದ ಆಮ್ಲೆಟ್ ಸೀದು ಹೋಗಿದೆ ಎಂದು ದೂರಿದ್ದರಿಂದ ಗ್ರಾಹಕನ ತಲೆಗೆ ಬಿಸಿ ಬಾಣಲೆಯಿಂದ ಹೊಡೆದ ಆರೋಪದ ಮೇಲೆ ಆ ಅಂಗಡಿಯ ಮಾಲೀಕನನ್ನು ಬಂಧಿಸಲಾಗಿದೆ ಎಂದು ನಾಗ್ಪುರದ ಸಿತಾಬುಲ್ಡಿ ಪ್ರದೇಶದ ಪೊಲೀಸರು ತಿಳಿಸಿದ್ದಾರೆ.

ತನ್ನ ಗ್ರಾಹಕನಿಗೆ ಬಾಣಲಿಯಿಂದ ಹೊಡೆದ ಆರೋಪಿಯನ್ನು ವಿನೋದ್ ರಾಥೋಡ್ (48) ಎಂದು ಗುರುತಿಸಲಾಗಿದ್ದು, ಹಲ್ಲೆಗೊಳಗಾದ ವ್ಯಕ್ತಿ ಅಮರಾವತಿ ನಿವಾಸಿ ಸಂದೀಪ್ ಸಾಯರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಸಯಾರೆ ಸಮೀಪದ ರೈಲ್ವೇ ನಿಲ್ದಾಣದಲ್ಲಿ ಇಳಿದು ಸಂದೀಪ್ ಸಾಯರೆ 40 ರೂ. ಬೆಲೆಯ ಆಮ್ಲೆಟ್‌ ಆರ್ಡರ್ ಮಾಡಿದ್ದರು. ಆದರೆ, ಆ ಅಂಗಡಿಯವನು ಕೊಟ್ಟ ಆಮ್ಲೆಟ್ ಸುಟ್ಟು ಹೋಗಿದ್ದರಿಂದ ಅದರ ಬದಲಾಗಿ ಬೇರೆ ಆಮ್ಲೆಟ್ ನೀಡುವಂತೆ ಆತ ಒತ್ತಾಯಿಸಿದ್ದ. ಇದೇ ವಿಷಯಕ್ಕೆ ಇಬ್ಬರ ಮಧ್ಯೆ ಸಣ್ಣ ವಾಗ್ವಾದವೂ ನಡೆದಿತ್ತು. ನಂತರ ಆ ಅಂಗಡಿಯ ಮಾಲೀಕ ಸಂದೀಪ್ ತಲೆಗೆ ಬಿಸಿ ಬಾಣಲೆಯಿಂದ ಹೊಡೆದಿದ್ದಾನೆ.

ಸಂದೀಪ್ ರಾಥೋಡ್ ಸಾಯರೆಗೆ ಹೊಡೆದಿದ್ದಕ್ಕಾಗಿ ಐಪಿಸಿ ಸೆಕ್ಷನ್ 324 ಮತ್ತು 504ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಂದೀಪ್​ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: Shocking News: ತಣ್ಣಗಾದ ಐಸ್​ ಕ್ರೀಂ ಕೊಟ್ಟಿದ್ದಕ್ಕೆ ರೆಸ್ಟೋರೆಂಟ್​ನಿಂದ ಹಣ ವಾಪಾಸ್ ಕೇಳಿದ ಗ್ರಾಹಕ!

Viral Photo: ಕುಕ್ಕರ್ ಜೊತೆ ಮದುವೆಯಾಗಿ ಎರಡೇ ದಿನಕ್ಕೆ ಡೈವೋರ್ಸ್ ನೀಡಿದ ಯುವಕ; ಕಾರಣವೇನು ಗೊತ್ತಾ?

ಗುರು ಸಂಚಾರದಿಂದ ವೃಶ್ಚಿಕ ರಾಶಿಯವರಲ್ಲಿ ಭಯದ ವಾತಾವಾರಣ ನಿರ್ಮಾಣವಾಗಲಿದೆ!
ಗುರು ಸಂಚಾರದಿಂದ ವೃಶ್ಚಿಕ ರಾಶಿಯವರಲ್ಲಿ ಭಯದ ವಾತಾವಾರಣ ನಿರ್ಮಾಣವಾಗಲಿದೆ!
ತುಲಾ ರಾಶಿಗೆ ಭಾಗ್ಯ ಸ್ಥಾನದಲ್ಲಿ ಗುರು ಸಂಚಾರ; ಅದೃಷ್ಟವೋ ಅದೃಷ್ಟ
ತುಲಾ ರಾಶಿಗೆ ಭಾಗ್ಯ ಸ್ಥಾನದಲ್ಲಿ ಗುರು ಸಂಚಾರ; ಅದೃಷ್ಟವೋ ಅದೃಷ್ಟ
2025ರ ಗುರು ಸಂಚಾರ ಕನ್ಯಾ ರಾಶಿಯವರ ಮೇಲೆ ಹೇಗೆ ಪ್ರಭಾವ ಬೀರಲಿದೆ?
2025ರ ಗುರು ಸಂಚಾರ ಕನ್ಯಾ ರಾಶಿಯವರ ಮೇಲೆ ಹೇಗೆ ಪ್ರಭಾವ ಬೀರಲಿದೆ?
ರಾಗಿಣಿ ಹಾಗೂ ಕುರಿ ಸೇರಿದ್ರೆ ‘ಕುರಾಗಿಣಿ’; ಪ್ರತಾಪ್ ಲೆಕ್ಕಾಚಾರ ನೋಡಿ
ರಾಗಿಣಿ ಹಾಗೂ ಕುರಿ ಸೇರಿದ್ರೆ ‘ಕುರಾಗಿಣಿ’; ಪ್ರತಾಪ್ ಲೆಕ್ಕಾಚಾರ ನೋಡಿ
ದಲಿತರಿಗೆ ಮೀಸಲಾತಿ ಸಿಕ್ಕಿದ್ದು ಡಾ ಅಂಬೇಡ್ಕರ್ ಪ್ರಯತ್ನಗಳಿಂದ: ಯತ್ನಾಳ್
ದಲಿತರಿಗೆ ಮೀಸಲಾತಿ ಸಿಕ್ಕಿದ್ದು ಡಾ ಅಂಬೇಡ್ಕರ್ ಪ್ರಯತ್ನಗಳಿಂದ: ಯತ್ನಾಳ್
ಬರೋಬ್ಬರಿ 90.23 ಮೀಟರ್: ಹೊಸ ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ
ಬರೋಬ್ಬರಿ 90.23 ಮೀಟರ್: ಹೊಸ ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ
ಸೂರ್ಯ ವೃಷಭ ರಾಶಿಯಲ್ಲಿ, ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ
ಸೂರ್ಯ ವೃಷಭ ರಾಶಿಯಲ್ಲಿ, ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ
‘ನನ್ನ ಹೇರ್​ ಕಟಿಂಗ್​ ಬಜೆಟ್ ಒಂದು ಲಕ್ಷ ರೂಪಾಯಿ’: ನಟ ಪ್ರಥಮ್
‘ನನ್ನ ಹೇರ್​ ಕಟಿಂಗ್​ ಬಜೆಟ್ ಒಂದು ಲಕ್ಷ ರೂಪಾಯಿ’: ನಟ ಪ್ರಥಮ್
ಮಳೆಯಲ್ಲಿ ಕೊಚ್ಚಿಹೋಗುತ್ತಿದ್ದ ಶೇಂಗಾ ಉಳಿಸಿಕೊಳ್ಳಲು ಯುವಕನ ಪರದಾಟ
ಮಳೆಯಲ್ಲಿ ಕೊಚ್ಚಿಹೋಗುತ್ತಿದ್ದ ಶೇಂಗಾ ಉಳಿಸಿಕೊಳ್ಳಲು ಯುವಕನ ಪರದಾಟ
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್