Shocking News: ತಣ್ಣಗಾದ ಐಸ್ ಕ್ರೀಂ ಕೊಟ್ಟಿದ್ದಕ್ಕೆ ರೆಸ್ಟೋರೆಂಟ್ನಿಂದ ಹಣ ವಾಪಾಸ್ ಕೇಳಿದ ಗ್ರಾಹಕ!
ಚೀಸ್, ಮಿಲ್ಕ್‌ಶೇಕ್, ಐಸ್‌ಕ್ರೀಂ ಸೇರಿದಂತೆ ಆರ್ಡರ್ ತಣ್ಣಗಾಗಿದೆ ಎಂಬ ಕಾರಣ ನೀಡಿ ಹಣವನ್ನು ಮರುಪಾವತಿ (ರೀಫಂಡ್) ಮಾಡಲು ಒತ್ತಾಯಿಸಿರುವ ಘಟನೆಗಳೂ ನಡೆದಿವೆ ಎಂದರೆ ಆಶ್ಚರ್ಯವಾಗದಿರದು!
ಆನ್ಲೈನ್ ಡೆಲಿವರಿ ಶುರುವಾದಾಗಿನಿಂದ ಅನೇಕ ಗ್ರಾಹಕರು ಹೇಗೆ ರೆಸ್ಟೋರೆಂಟ್ಗಳಿಂದ, ಡೆಲಿವರಿ ಬಾಯ್ಗಳಿಂದ ವಂಚನೆಗೊಳಗಾಗಿದ್ದಾರೋ ಹಾಗೇ ರೆಸ್ಟೋರೆಂಟ್ನವರು ಕೂಡ ಗ್ರಾಹಕರಿಂದ ವಂಚನೆಗೊಳಗಾದ ಸಾಕಷ್ಟು ಉದಾಹರಣೆಗಳಿವೆ. ಚೀಸ್, ಮಿಲ್ಕ್‌ಶೇಕ್, ಐಸ್‌ಕ್ರೀಂ ಸೇರಿದಂತೆ ಆರ್ಡರ್ ತಣ್ಣಗಾಗಿದೆ ಎಂಬ ಕಾರಣ ನೀಡಿ ಹಣವನ್ನು ಮರುಪಾವತಿ (ರೀಫಂಡ್) ಮಾಡಲು ಒತ್ತಾಯಿಸಿರುವ ಘಟನೆಗಳೂ ನಡೆದಿವೆ ಎಂದರೆ ಆಶ್ಚರ್ಯವಾಗದಿರದು!
ಇಂಗ್ಲೆಂಡ್ನ ಓಲ್ಡ್‌ಹ್ಯಾಮ್‌ನಲ್ಲಿ ಲಕ್ಕಿಸ್ ನಡೆಸುತ್ತಿರುವ ಹಸನ್ ಹಬೀಬ್, ತಮ್ಮ ಹಣವನ್ನು ಮರಳಿ ಕೇಳುವ ಡೈನರ್‌ಗಳಿಗಾಗಿ ಡೆಲಿವರಿ ಸೇವೆಯು ತನ್ನ ನೀತಿಯನ್ನು ಬದಲಾಯಿಸಿದ ನಂತರ ಜಸ್ಟ್ ಈಟ್‌ನಲ್ಲಿ ಹೊಸ ಸಮಸ್ಯೆ ಪ್ರಾರಂಭವಾಗಿದೆ ಎಂದು ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಡೆಲಿವರಿ ಸೇವೆ ಬಗ್ಗೆ ಗ್ರಾಹಕರಿಂದ ಅತಿ ಹೆಚ್ಚು ದೂರುಗಳು ಬರುತ್ತಿದ್ದು, ಅವುಗಳಲ್ಲಿ ಕೆಲವು ವಿಚಿತ್ರವಾದ ಪ್ರಕರಣಗಳಾಗಿವೆ. ನಾಲ್ಕು ಮಿಲ್ಕ್‌ಶೇಕ್‌ಗಳು, ಚೀಸ್‌ಕೇಕ್ ಮತ್ತು ಐಸ್‌ಕ್ರೀಮ್ ಅನ್ನು ಆರ್ಡರ್ ಮಾಡಿದ ವ್ಯಕ್ತಿಯೊಬ್ಬರು ಅದಾದ 45 ನಿಮಿಷಗಳ ನಂತರ ಅವರು ಆಹಾರ ತಣ್ಣಗಿರುವ ಕಾರಣ ತಾವು ನೀಡಿದ ಹಣವನ್ನು ಮರುಪಾವತಿ ಮಾಡಬೇಕೆಂದು ದೂರು ನೀಡಿದರು. ಐಸ್‌ಕ್ರೀಂ, ಮಿಲ್ಕ್‌ಶೇಕ್, ಚೀಸ್ ಕೇಕ್ ಎಲ್ಲಾದರೂ ಬಿಸಿಯಾಗಿರುತ್ತದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.
ಕೆಲವೊಮ್ಮೆ ನಾವು ತಪ್ಪುಗಳನ್ನು ಮಾಡುತ್ತೇವೆ. ಟ್ರಾಫಿಕ್ನಿಂದಾಗಿ ಅಥವಾ ಇನ್ನಿತರ ಕಾರಣಗಳಿಂದ ಸರಿಯಾದ ಸಮಯದಲ್ಲಿ ಆಹಾರವನ್ನು ಡೆಲಿವರಿ ನೀಡಲು ಆಗುವುದಿಲ್ಲ. ಕೆಲವೊಮ್ಮೆ ನಾವು ಐಟಂಗಳನ್ನು ಕಳೆದುಕೊಳ್ಳುತ್ತೇವೆ ಅಥವಾ ತಪ್ಪು ಐಟಂ ಅನ್ನು ಕಳುಹಿಸುತ್ತೇವೆ. ಆದರೆ ಬದಲಿ ಐಟಂ ಅಥವಾ ಸಂಪೂರ್ಣ ಅರ್ಹ ಮರುಪಾವತಿಯೊಂದಿಗೆ ನಾವು ಅದನ್ನು ಗ್ರಾಹಕರಿಗೆ ಒಪ್ಪಿಸುತ್ತೇವೆ. ಆದರೆ, ಗ್ರಾಹಕರು ಹೀಗೆ ವಿಚಿತ್ರವಾದ ಕಾರಣಗಳನ್ನು ನೀಡಿ ಹಣವನ್ನು ಮರುಪಾವತಿ ಮಾಡಲು ದೂರು ನೀಡುವುದು ಇತ್ತೀಚೆಗೆ ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Viral News: ಶಿವನಿಗೆ ನೈವೇದ್ಯವಾಗಿ 10 ಕೆಜಿ ಐಸ್ ಕ್ರೀಂ ನೀಡಿದ ಭಕ್ತ; ಪ್ರಸಾದಕ್ಕಾಗಿ ಸಾಲುಗಟ್ಟಿ ನಿಂತ ಜನರು
Shocking Video: ಹೋಟೆಲ್ ಊಟದಲ್ಲಿ ಶಿಶ್ನದ ತುಂಡು ಪತ್ತೆ!; ತಿನ್ನೋ ಆಹಾರದಲ್ಲಿ ಗುಪ್ತಾಂಗ ಕಂಡು ಮಹಿಳೆ ಶಾಕ್
Published On - 6:54 pm, Sat, 11 December 21