ವಿಶ್ವ ಪರ್ವತ ದಿನದ ಅಂಗವಾಗಿ ಅದ್ಭುತ ಚಿತ್ರಗಳನ್ನು ಹಂಚಿಕೊಂಡ ನೆಟ್ಟಿಗರು; ಈ ವರ್ಷದ ಆಶಯವೇನು?
International Mountain Day: ಇಂದು (ಡಿಸೆಂಬರ್ 11) ವಿಶ್ವ ಪರ್ವತ ದಿನ. ಈ ಹಿನ್ನೆಲೆಯಲ್ಲಿ ನೆಟ್ಟಿಗರು ತಮ್ಮ ಅನುಭವಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಕುರಿತ ಬರಹ ಇಲ್ಲಿದೆ.
ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯಿಂದ (UNGA) ಪ್ರತಿ ವರ್ಷ ಡಿಸೆಂಬರ್ 11ರಂದು ಅಂತರರಾಷ್ಟ್ರೀಯ ಪರ್ವತ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನ ಸದ್ಯ ಅಂತರ್ಜಾಲದಲ್ಲಿ ಟ್ರೆಂಡ್ ಆಗಿದ್ದು, ಜನರು ತಾವು ತೆಗೆದ ವಿಶೇಷ ಪರ್ವತಗಳ ವಿಶೇಷ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಜತೆಗೆ, #InternationalMountainDay ಎಂಬ ಹ್ಯಾಶ್‌ಟ್ಯಾಗ್ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದೆ. ಕೇಂದ್ರ ಸಚಿವ ಕಿರಣ್ ರಿಜಿಜು ಕೂಡ ಈ ಕುರಿತು ಪೋಸ್ಟ್ ಮಾಡಿದ್ದು, ಚಿತ್ರ ಹಂಚಿಕೊಂಡಿದ್ದಾರೆ. ಈ ವರ್ಷ ಸುಸ್ಥಿರ ಪರ್ವತ ಪ್ರವಾಸೋದ್ಯಮ ಎಂಬ ಪರಿಕಲ್ಪನೆಯಲ್ಲಿ ಈ ವಿಶೇಷ ದಿನವನ್ನು ಆಚರಿಸುತ್ತಿರುವುದಾಗಿ ರಿಜಿಜು ಬರೆದಿದ್ದಾರೆ. ಇದರೊಂದಿಗೆ ಅವರು ಸುಂದರ ಚಿತ್ರವನ್ನೂ ಹಂಚಿಕೊಂಡಿದ್ದಾರೆ. ಪರ್ವತ ದಿನದಂದು ಹಂಚಿಕೊಂಡ ವಿಶೇಷ ಚಿತ್ರಗಳು ಇಲ್ಲಿವೆ.
ಸಚಿವ ಕಿರಣ್ ರಿಜಿಜು ಹಂಚಿಕೊಂಡ ಟ್ವೀಟ್ ಇಲ್ಲಿದೆ:
On the extremely special occasion of #INTERNATIONALMOUNTAINDAY, let’s pledge to save beautiful nature and majestic mountains. This year’s theme is ‘Sustainable Mountain Tourism’.#DekhoApnaDesh #IncredibleIndia #MountainDay #MountainsMatter pic.twitter.com/qBYjS9Duah
— Kiren Rijiju (@KirenRijiju) December 11, 2021
ಐಎಫ್ಎಸ್ ಅಧಿಕಾರಿ ಪರ್ವೀಣ್ ಕಾಸ್ವಾನ್ ತಾವು ತೆಗೆದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ, ಅವು ಇಲ್ಲಿವೆ:
On #InternationalMountainDay here check how the roof of the world gets lighten up with first ray of daylight. My clicks. Guess the mountain. pic.twitter.com/9B9hCgExlt
— Parveen Kaswan, IFS (@ParveenKaswan) December 11, 2021
ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಹಂಚಿಕೊಂಡ ಟ್ವೀಟ್ ಇಲ್ಲಿದೆ:
Flying over magnificent Himalays some years back filled me with awe. Mountains are so big yet so humble. They host about half of the world’s biodiversity and give birth to most rivers.On this beautiful #InternationalMountainDay lets keep the promise to protect and conserve them pic.twitter.com/QI93ag41zX
— Supriya Sahu IAS (@supriyasahuias) December 11, 2021
ಗುಜರಾತ್ ಪ್ರವಾಸೋದ್ಯಮ ಇಲಾಖೆ ಹಂಚಿಕೊಂಡ ಚಿತ್ರ ಇಲ್ಲಿದೆ:
This #InternationalMountainDay we urge you to enjoy this breathtaking view on your way up the ancient #Girnar #mountain of #Junagadh , #Gujarat
Tweet us in reply your experience, if you have already visited.#Gujarattourism
?: @mayank_pansheriya pic.twitter.com/xEQD13lGIM
— Gujarat Tourism (@GujaratTourism) December 11, 2021
#InternationalMountainDay #Ladakh pic.twitter.com/pggDECch4h
— प्रशिक (@Prashiksn1) December 11, 2021
ಈ ಬಾರಿಯ ವಿಶ್ವ ಪರ್ವತ ದಿನದ ಆಶಯ ‘ಸುಸ್ಥಿರ ಪರ್ವತ ಪ್ರವಾಸೋದ್ಯಮ’. ಈ ಕುರಿತು ನಿಮ್ಮ ಅನಿಸಿಕೆ ಏನು?
ಇದನ್ನೂ ಓದಿ:
ಪುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾ ಐಷಾರಾಮಿ ವಾಚ್ ಕದ್ದ ಆರೋಪಿ ಅಸ್ಸಾಂನಲ್ಲಿ ಸೆರೆ