ಪುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾ ಐಷಾರಾಮಿ ವಾಚ್ ಕದ್ದ ಆರೋಪಿ ಅಸ್ಸಾಂನಲ್ಲಿ ಸೆರೆ
ಪುಟ್ಬಾಲ್ ದಂತಕಥೆ ಡಿ ಗೋ ಮರಡೋನಾ ಅವರ ವಾಚ್ ಕದ್ದ ಅರೋಪಿಯನ್ನು ಪೊಲೀಸರು ಅಸ್ಸಾಂನಲ್ಲಿ ಬಂಧಿಸಿದ್ದಾರೆ. ದುಬೈನಲ್ಲಿ ದಿವಂಗತ ಪುಟ್ಬಾಲ್ ಆಟಗಾರ ಡಿ ಗೋ ಮರಡೋನಾ ಅವರ ವಿಲಾಸಿ ವಾಚ್ ಕಳ್ಳತನವಾಗಿತ್ತು.
ಪುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾ ಅವರ ವಾಚ್ ಕದ್ದ ಅರೋಪಿಯನ್ನು ಪೊಲೀಸರು ಅಸ್ಸಾಂನಲ್ಲಿ ಬಂಧಿಸಿದ್ದಾರೆ. ದುಬೈನಲ್ಲಿ ದಿವಂಗತ ಪುಟ್ಬಾಲ್ ಆಟಗಾರ ಡಿ ಗೋ ಮರಡೋನಾ ಅವರ ವಿಲಾಸಿ ವಾಚ್ ಕಳ್ಳತನವಾಗಿತ್ತು. ದುಬೈ ಪೊಲೀಸರ ನೆರವಿನಿಂದ ಆರೋಪಿಯನ್ನು ಅಸ್ಸಾಂನಲ್ಲಿ ಬಂಧಿಸಲಾಗಿದೆ. ವಾಚ್ ಕದ್ದ ಆರೋಪಿಯನ್ನು ವಾಜೀದ್ ಹುಸೇನ್ ಎಂದು ಗುರುತಿಸಲಾಗಿದೆ. ದುಬೈನಲ್ಲಿ ಮರಡೋನಾ ವಸ್ತುಗಳನ್ನು ಸಂಗ್ರಹಿಸಿದ್ದ ಕಂಪನಿಯಿಂದ ಆರೋಪಿ ವಾಜಿದ್ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು, ಅಲ್ಲಿಂದ ವಾಚ್ ಕದ್ದು ತಲೆಮರೆಸಿಕೊಂಡಿದ್ದ.
ಇದೀಗ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಅಸ್ಸಾಂನಲ್ಲಿ ಬಂಧಿಸಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ತಿಳಿಸಿದ್ದಾರೆ. ಅರ್ಜೆಂಟೆನಾ ಪುಟ್ಬಾಲ್ ಆಟಗಾರ ಡಿ ಗೋ ಮರಡೋನಾಗೆ ಸೇರಿದ ಹೆರಿಟೇಜ್ ಹ್ಯಬ್ಲೋಟ್ ದುಬಾರಿ ವಾಚ್ 20 ಲಕ್ಷ ಬೆಲೆಬಾಳುವಂತದ್ದು ಎಂದು ಹೇಳಲಾಗಿದೆ. ಅಲ್ಲದೆ ಆಟಗಾರ ಡಿಯಾಗೋ ಮರಡೋನಾಗೆ ಸೇರಿದ ವಸ್ತುಗಳನ್ನು ಅತ್ಯಂತ ಜೋಪಾನವಾಗಿ ದುಬೈನಲ್ಲಿ ಸಂಗ್ರಹಿಸಲಾಗುತ್ತಿದೆ. ಆದ್ದರಿಂದ ದುಬೈ ಪೊಲೀಸರು ಮುತುವರ್ಜಿ ವಹಿಸಿ ಆರೋಪಿಗಾಗಿ ಶೋಧಕಾರ್ಯ ಆರಂಭಿಸಿದ್ದರು. ಅರೋಪಿ ತಪ್ಪಿಸಿಕೊಂಡು ಅಸ್ಸಾನಲ್ಲಿ ನೆಲೆಸಿದ್ದಾನೆ ಎಂದು ತಿಳಿದ ಅಸ್ಸಾಂ ಪೊಲೀಸರು ಭಾರತೀಯ ಪೆಡರಲ್ ಮೂಲಕ ದುಬೈ ಪೊಲೀಸರೊಂದಿಗೆ ಸಂಪರ್ಕ ಸಾಧಿಸಿ ಆರೋಪಿಯನ್ನು ಸೆರೆಹಿಡಿದಿದ್ದಾರೆ.
ಈ ಕುರಿತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಕೆಂದ್ರೀಯ ಪೊಲೀಸರಿಂದ ಮಾಹಿತಿ ಪಡೆದ ಅಸ್ಸಾಂ ಪೊಲೀಸರು ಶನಿವಾರ ಬೆಳಗಿನ ಜಾವ ಆರೋಪಿಯ ಮನೆ ಇರುವ ಸಿವಾಸ್ನಗರ ಬಳಿ ಆತನನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಈ ಕುರಿತು ಪೊಲೀಸರು ಮಾಹಿತಿ ನೀಡಿದ್ದು, ಮರಡೋನಾ ಬಗೆಗಿನ ವಸ್ತು ಸಂಗ್ರಹಿಸುತ್ತಿದ್ದ ಕಂಪನಿಯಲ್ಲಿ ಈತ ಸೆಕ್ಯರಿಟಿಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಕಳೆದ ಅಗಸ್ಟ್ ತಿಂಗಳಿನಲ್ಲಿ ವಾಚ್ ಕದ್ದು ಅಸ್ಸಾಂಗೆ ಬಂದು ತಲೆಮರೆಸಿಕೊಂಡಿದ್ದ. ಇದೀಗ ಆತನನ್ನು ಅಂತಾರಾಷ್ಟ್ರೀಯ ಪೊಲೀಸರ ನೆರವಿನಿಂದ ಸೆರೆಹಿಡಿಯಲಾಗಿದೆ ಎಂದು ತಿಳಿಸಿದ್ದಾರೆ.
ಡಿಯಾಗೋ ಮರಡೋನಾ ಅರ್ಜೆಂಟೆನಾದ ಖ್ಯಾತ ಪುಟ್ಬಾಲ್ ಆಟಗಾರ. ಇವರನ್ನು ಅತ್ಯಂತ ಶ್ರೇಷ್ಠ ಪುಟ್ಬಾಲ್ ಆಟಗಾರ ಎಂದು ಪರಿಗಣಿಸಲಾಗಿದೆ. ಇವರನ್ನು ಪುಟ್ಬಾಲ್ ದಂತಕಥೆ ಎಂತಲೂ ಕರೆಯುತ್ತಾರೆ. 2020ರ ನವೆಂಬರ್ 20ರಂದು ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಹೀಗಾಗಿ ಅವರು ಬಳಸುತ್ತಿದ್ದ ವಸ್ತುಗಳನ್ನು ಅರ್ಜೆಂಟೆನಾದ ಕಂಪನಿಯೊಂದು ಸಂಗ್ರಹಿಸುತ್ತಿದೆ.
ಇದನ್ನೂ ಓದಿ: