ಚಿತ್ರದುರ್ಗ: ಪೊಲೀಸ್ ಬಂದೋಬಸ್ತ್​ನಲ್ಲಿ ವೀರಾಂಜನೇಯ ದೇಗುಲ ತೆರವುಗೊಳಿಸಿದ ಪುರಸಭೆ ಅಧಿಕಾರಿಗಳು

ಮಾರ್ಚ್ 19ರಂದು ಕೋರ್ಟ್ ತಡೆಯಾಜ್ಞೆ ತೆರವುಗೊಳಿಸಿದೆ. ಬಸ್ ಸಂಚಾರಕ್ಕೆ ಅಡಚಣೆಯಾಗುವ ದೇಗುಲ ತೆರವುಗೊಳಿಸುವಂತೆ ಸಾರಿಗೆ ಇಲಾಖೆ ಅಧಿಕಾರಿಗಳು ಪುರಸಭೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಚಿತ್ರದುರ್ಗ: ಪೊಲೀಸ್ ಬಂದೋಬಸ್ತ್​ನಲ್ಲಿ ವೀರಾಂಜನೇಯ ದೇಗುಲ ತೆರವುಗೊಳಿಸಿದ ಪುರಸಭೆ ಅಧಿಕಾರಿಗಳು
ವೀರಾಂಜನೇಯ ದೇಗುಲವನ್ನು ತೆರವುಗೊಳಿಸಿದರು.
Edited By:

Updated on: Mar 28, 2022 | 10:41 AM

ಚಿತ್ರದುರ್ಗ: ಹೊಳಲ್ಕೆರೆ ಪಟ್ಟಣದ ಕೆಎಸ್ಆರ್​ಟಿಸಿ (KSRTC) ಬಸ್ ನಿಲ್ದಾಣದಲ್ಲಿದ್ದ ವೀರಾಂಜನೇಯ ದೇಗುಲವನ್ನು ಪುರಸಭೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಬಿಗಿ ಪೊಲೀಸ್ ಬಂದೋಬಸ್ತ್​ನಲ್ಲಿ ಬಸ್ ನಿಲ್ದಾಣದ ಮೂಲೆಯಲ್ಲಿ ನಿರ್ಮಿಸಿದ ಹೊಸ ದೇಗುಲ (Temple) ಕಟ್ಟಡಕ್ಕೆ ಆಂಜನೇಯ ಮೂರ್ತಿ ಸ್ಥಳಾಂತರಿಸಲಾಗಿದೆ. ಬಳಿಕ ಹಳೇ ದೇಗುಲ ತೆರವು ಕಾರ್ಯ ನಡೆದಿದೆ. ಕಳೆದ ಎರಡು ವರ್ಷಗಳ ಹಿಂದೆಯೇ 8 ಕೋಟಿ 84 ಲಕ್ಷ ರೂ. ವೆಚ್ಚದಲ್ಲಿ ನೂತನ ಕೆಎಸ್ಆರ್​ಟಿಸಿ ಬಸ್ ನಿಲ್ದಾಣ ನಿರ್ಮಿಸಲಾಗಿತ್ತು. ಆದರೆ ವೀರಾಂಜನೇಯ ದೇಗುಲ ಸಮಿತಿ ಕೋರ್ಟ್ ಮೊರೆ ಹೋಗಿ ತಡೆಯಾಜ್ಞೆ ತಂದಿತ್ತು. ಪರಿಣಾಮ ನೂತನ ಬಸ್ ನಿಲ್ದಾಣದಲ್ಲಿ ಬಸ್​ಗಳ ಸಂಚಾರಕ್ಕೆ ಅಡಚಣೆಯಾಗುವ ಹಿನ್ನೆಲೆಯಲ್ಲಿ ಬಸ್ ನಿಲ್ದಾಣ ಉದ್ಘಾಟನೆ ನೆನೆಗುದಿಗೆ ಬಿದ್ದಿತ್ತು.

ತಡೆಯಾಜ್ಞೆ ತೆರವು:
ಮಾರ್ಚ್ 19ರಂದು ಕೋರ್ಟ್ ತಡೆಯಾಜ್ಞೆ ತೆರವುಗೊಳಿಸಿದೆ. ಬಸ್ ಸಂಚಾರಕ್ಕೆ ಅಡಚಣೆಯಾಗುವ ದೇಗುಲ ತೆರವುಗೊಳಿಸುವಂತೆ ಸಾರಿಗೆ ಇಲಾಖೆ ಅಧಿಕಾರಿಗಳು ಪುರಸಭೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಪೊಲೀಸರ ಬಿಗಿ ಬಂದೋಬಸ್ತ್ನೊಂದಿಗೆ ಹೊಸ ದೇಗುಲಕ್ಕೆ ಮೂರ್ತಿ ಸ್ಥಳಾಂತರಿಸಿ ಹಳೇ ದೇಗುಲ ತೆರವು ಕಾರ್ಯಾಚರಣೆ ನಡೆದಿದೆ.

ವಿರೋಧ:
ವಿಶ್ವ ಹಿಂದೂ ಪರಿಷತ್ ಸೇರಿದಂತೆ ಕೆಲ ಹಿಂದೂಪರ ಸಂಘಟನೆ ಕಾರ್ಯಕರ್ತರು ಹಾಗೂ ಭಕ್ತರು ಹಳೇ ದೇಗುಲ ತೆರವು ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಗೆ ಮುಂದಾದ ಎಂಟು ಜನ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳಿಕ ದೇಗುಲ ತೆರವು ಕಾರ್ಯಾಚರಣೆ ನಡೆದಿದೆ.

ಬಿಜೆಪಿ ಸರ್ಕಾರವೇ ಹಳೇ ದೇಗುಲ ತೆರವು ಮಾಡಬಾರದು ಎಂಬ ನಿಯಮ ಜಾರಿಗೆ ತಂದಿದೆ. ಆದರೆ, ಬಿಜೆಪಿ ಶಾಸಕ ಹಾಗೂ ಸಾರಿಗೆ ನಿಗಮದ ಅದ್ಯಕ್ಷರು ಪ್ರತಿನಿಧಿಸುವ ಹೊಳಲ್ಕೆರೆಯಲ್ಲೇ ಹಳೇ ದೇಗುಲ ತೆರವು ಕಾರ್ಯ ನಡೆದಿದೆ. ವೀರಾಂಜನೇಯ ದೇಗುಲವೂ ಪುರಾತನ ಕಾಲದ್ದಾಗಿದೆ. ಈ ಬಗ್ಗೆ ಹೋರಾಟ ಮುಂದುವರೆಸುತ್ತೇವೆ ಎಂದು ಮಾಜಿ ಪುರಸಭೆ ಸದಸ್ಯ ಜಯಸಿಂಹ ಹೇಳಿದ್ದಾರೆ.

ಅನಧಿಕೃತವಾಗಿ ದೇಗುಲ ನಿರ್ಮಿಸಲಾಗಿದೆ ಎಂದು ಅನೇಕ ಸಲ ದೇಗುಲ ಸಮಿತಿಗೆ ನೋಟಿಸ್ ನೀಡಿದ್ದೆವು. ಸಾರಿಗೆ ಇಲಾಖೆ ಹಾಗೂ ದೇಗುಲ ಸಮಿತಿ ನಡುವೆ ಕೋರ್ಟಿನಲ್ಲಿ ವ್ಯಾಜ್ಯವಿತ್ತು. ತಡೆಯಾಜ್ಞೆ ತೆರವಾದ ಹಿನ್ನೆಲೆ ಹೊಸ ದೇಗುಲಕ್ಕೆ ಶಾಸ್ತ್ರೋಕ್ತವಾಗಿ ಮೂರ್ತಿ ಸ್ಥಳಾಂತರಿಸಿ ಹಳೆ ದೇಗುಲ ತೆರವುಗೊಳಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಎ.ವಾಸಿಂ ಹೇಳಿದ್ದಾರೆ.

ವರದಿ – ಬಸವರಾಜ ಮುದನೂರ್

ಇದನ್ನೂ ಓದಿ

ಭವಿಷ್ಯದ ದೃಷ್ಟಿಯಿಂದ ಮಕ್ಕಳನ್ನು ಪರೀಕ್ಷೆಗೆ ಕಳುಹಿಸಿ; ಮುಸ್ಲಿಂ ಧರ್ಮಗುರುಗಳಿಂದ ಶಿಕ್ಷಣದ ಬಗ್ಗೆ ಬುದ್ಧಿಮಾತು

ಬೆಲೆ ಕುಸಿತದಿಂದ ಕಂಗೆಟ್ಟಿದ್ದ ರೈತರಿಗೆ ಗುಡ್ ನ್ಯೂಸ್; ಒಂದು ಮೂಟೆ ಉತ್ತಮ ಗುಣಮಟ್ಟದ ನಿಂಬೆ 10 ಸಾವಿರ ರೂಪಾಯಿಗೆ ಮಾರಾಟ

Published On - 10:39 am, Mon, 28 March 22