ಬೆಲೆ ಕುಸಿತದಿಂದ ಕಂಗೆಟ್ಟಿದ್ದ ರೈತರಿಗೆ ಗುಡ್ ನ್ಯೂಸ್; ಒಂದು ಮೂಟೆ ಉತ್ತಮ ಗುಣಮಟ್ಟದ ನಿಂಬೆ 10 ಸಾವಿರ ರೂಪಾಯಿಗೆ ಮಾರಾಟ

ನಿಂಬೆ ಬೆಳೆಗಾರರ ಸಂತಸಕ್ಕೆ ಕಾರಣವಾಗಿದೆ. ವಾರದಲ್ಲಿ ಬುಧವಾರ ಹಾಗೂ ರವಿವಾರ ನಡೆಯೋ ಮಾರುಕಟ್ಟೆಯಲ್ಲಿ ನಿಂಬೆಗೆ ಉತ್ತಮ ದರ ಸಿಗುತ್ತಿದೆ. ಕೊರೊನಾ ಕಾರಣದಿಂದ ಹಾಗೂ ಬೆಲೆ ಇಳಿಕೆಯಿಂದ ನಮಗೆ ನಿಂಬೆ ನಷ್ಟವನ್ನೇ ಮಾಡಿತ್ತು. ಇದೀಗಾ ದರ ಉತ್ತಮವಾಗಿದೆ. ಇದೇ ರೀತಿ ದರ ಮುಂದುವರೆದರೆ ಅನಕೂಲವೆಂದು ರೈತರು ಖುಷಿಯನ್ನು ಹಂಚಿಕೊಂಡಿದ್ದಾರೆ.

ಬೆಲೆ ಕುಸಿತದಿಂದ ಕಂಗೆಟ್ಟಿದ್ದ ರೈತರಿಗೆ ಗುಡ್ ನ್ಯೂಸ್; ಒಂದು ಮೂಟೆ ಉತ್ತಮ ಗುಣಮಟ್ಟದ ನಿಂಬೆ 10 ಸಾವಿರ ರೂಪಾಯಿಗೆ ಮಾರಾಟ
ನಿಂಬೆ
Follow us
TV9 Web
| Updated By: preethi shettigar

Updated on: Mar 28, 2022 | 8:29 AM

ವಿಜಯಪುರ: ನಿಂಬೆ ಹಾಗೂ ದ್ರಾಕ್ಷಿ ಬೆಳೆಗಳ ತವರೂರು ವಿಜಯಪುರ ಜಿಲ್ಲೆ. ಬೆಳೆಗಾರರ ಪಾಲಿನ ಪ್ರಮುಖ ಆರ್ಥಿಕ ಬೆಳೆಗಳಾಗಿದ್ದರೂ ಸಹ ಹಲವಾರು ಸಮಸ್ಯೆಗಳು ಅನ್ನದಾತರನ್ನಾ ಕಾಡುತ್ತಿವೆ. ಸಾಲ ಸೋಲ ಮಾಡಿ ತೋಟಗಾರಿಕಾ ಬೆಳೆ ಬೆಳೆಯೋ ರೈತರು (Farmers) ಒಂದಿಲ್ಲೊಂದು ಸಂಕಷ್ಟಕ್ಕೆ ಸಿಲುಕಿರುತ್ತಾರೆ. ಕಳೆದ ಎರಡು ಕೊರೊನಾ ಅಲೆಗಳ ಹೊಡೆದಿಂದ ನಿಂಬೆ(Lemon) ಬೆಳೆಗಾರರು ಸಾಕಷ್ಟು ಹಾನಿ ಅನುಭವಿಸಿದ್ದಾರೆ. ಲಾಕ್​ಡೌನ್(Lockdown)​ ವೇಳೆ ದ್ರಾಕ್ಷಿ ಬೆಳೆಗಾರರರು ದ್ರಾಕ್ಷಿಯನ್ನು ಒಣ ದ್ರಾಕ್ಷಿ ಮಾಡಿ ಹಾನಿಯಿಂದ ಬಚಾವ್ ಆಗಿದ್ದರು. ಆದರೆ ನಿಂಬೆ ಕೊಳೆತು ಹೋಗಿತ್ತು. ಕೊರೊನಾ ಬಳಿಕವೂ ಕಡಿಮೆ ದರದಲ್ಲಿ ಮಾರಾಟವಾಗುತ್ತಿದ್ದ ನಿಂಬೆ ಕಳೆದ ಎರಡು ವಾರದಿಂದ ಉತ್ತಮ ದರಕ್ಕೆ ಮಾರಾಟವಾಗುತ್ತಿದೆ. ರೈತರ ಮುಖದಲ್ಲಿ ನಗು ಮೂಡಿಸಿದೆ.

ನಿಂಬೆ ಹಾಗೂ ದ್ರಾಕ್ಷಿ ಬೆಳೆಯುವ ತವರೂರು ವಿಜುಯಪುರ ಜಿಲ್ಲೆಯಲ್ಲೀಗಾ ನಿಂಬೆ ಬೆಳೆಗಾರರಿಗೆ ಅದೃಷ್ಟ ಖುಲಾಯಿಸಿದೆ ಅನ್ನಬಹುದು. ಕಾರಣ 2019 ರಿಂದ ಇಲ್ಲಿಯವರೆಗೆ ನಿಂಬೆ ಬೆಳೆಗಾರರು ನಷ್ಟವನ್ನೇ ಅನುಭವಿಸಿದ್ದರು. ಕೊರೊನಾದ ಲಾಕ್​ಡೌನ್ ಜಾರಿಯಿಂದ ನಿಂಬೆ ಸಾಗಾಟ ಮಾಡಲಾಗದೇ ಹಾಗೂ ಲಾಕ್​ಡೌನ್ ಬಳಿಕ ಸೂಕ್ತ ದರವಿಲ್ಲದೇ ಕಂಗಾಲಾಗಿದ್ದರು. ಈ ಕಾರಣದಿಂದ ನಿಂಬೆ ಬೆಳೆ ಸಂಪೂರ್ಣ ಹಾಳಾಗಿತ್ತು. ಆದರೆ ಇದೀಗಾ ನಿಂಬೆಗೆ ಬೆಲೆ ಬಂದಿದೆ. ಕಳೆದ 15 ದಿನಗಳಿಂದ ಉತ್ತಮ ದರ ಕಾಣುತ್ತಿದೆ.

ಕಳೆದ ವಾರ ಒಂದು ಮೂಟೆ ಉತ್ತಮ ಗುಣಮಟ್ಟದ ನಿಂಬೆಗೆ 10 ಸಾವಿರ ರೂಪಾಯಿವರೆಗೂ ಮಾರಾಟವಾಗಿದೆ.  ವಿಜಯಪುರ ನಗರದ ಎಪಿಎಂಸಿ ಆವರಣದಲ್ಲಿನ ಹಣ್ಣು ಮತ್ತು ತರಕಾರಿ ಮಾರುಕಟ್ಟೆಯಲ್ಲಿ ಹಾಗೂ ತಾಲೂಕಾ ಭಾಗಗಳ ಮಾರುಕಟ್ಟೆಗಳಲ್ಲಿ, ರೈತರ ಜಮೀನಿಗೆ ತೆರಳಿ ಅಲ್ಲಿಯೇ ನಿಂಬೆ ಖರೀಧಿ ಮಾರುವವರು ನಿಂಬೆಗೆ ಹೆಚ್ಚಿನ ಬೆಲೆ ನೀಡುತ್ತಿದ್ದಾರೆ. ನಿನ್ನೆ (ಮಾರ್ಚ್​ 27) ಎಪಿಎಂಸಿಯ ಹಣ್ಣು ಮತ್ತು ತರಕಾರಿ ಮಾರುಕಟ್ಟೆಯಲ್ಲಿ ನಡೆದ ಬಹಿರಂಗ ಹರಾಜಿನಲ್ಲಿ 1000 ನಿಂಬೆಯಿರೋ ಒಂದು ಮೂಟೆಗ 4 ರಿಂದ 6 ಸಾವಿರ ರೂಪಾಯಿವರೆಗೂ ಮಾರಾಟವಾಯಿತು. ಅಂದರೆ ಒಂದು ನಿಂಬೆ 4 ರಿಂದ 6 ರೂಪಾಯಿಗೆ ಮಾರಾಟವಾಗಿದೆ.

ಇದು ನಿಂಬೆ ಬೆಳೆಗಾರರ ಸಂತಸಕ್ಕೆ ಕಾರಣವಾಗಿದೆ. ವಾರದಲ್ಲಿ ಬುಧವಾರ ಹಾಗೂ ರವಿವಾರ ನಡೆಯೋ ಮಾರುಕಟ್ಟೆಯಲ್ಲಿ ನಿಂಬೆಗೆ ಉತ್ತಮ ದರ ಸಿಗುತ್ತಿದೆ. ಕೊರೊನಾ ಕಾರಣದಿಂದ ಹಾಗೂ ಬೆಲೆ ಇಳಿಕೆಯಿಂದ ನಮಗೆ ನಿಂಬೆ ನಷ್ಟವನ್ನೇ ಮಾಡಿತ್ತು. ಇದೀಗಾ ದರ ಉತ್ತಮವಾಗಿದೆ. ಇದೇ ರೀತಿ ದರ ಮುಂದುವರೆದರೆ ಅನಕೂಲವೆಂದು ರೈತರು ಖುಷಿಯನ್ನು ಹಂಚಿಕೊಂಡಿದ್ದಾರೆ.

ವಿಜಯಪುರ ಜಿಲ್ಲೆಯ ಇಂಡಿ, ಚಡಚಣ, ಸಿಂದಗಿ, ದೇವರಹಿಪ್ಪರಗಿ, ಬಸವನಬಾಗೇವಾಡಿ ಸೇರಿದಂತೆ ಇತರೆ ಭಾಗಗಳಲ್ಲಿ ನಿಂಬೆಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ಇದು ರೈತರಿಗೆ ನಿತ್ಯ ಆದಾಯವನ್ನು ತಂದುಕೊಡೋ ಬೆಳೆಯಾಗಿದೆ. ರಾಜ್ಯದಲ್ಲಿ ಒಟ್ಟು 40 ಸಾವಿರ ನಿಂಬೆ ಬೆಳೆಗಾರರು ಇದ್ದಾರೆ. ಅದರಲ್ಲಿ ವಿಜಯಪುರ ಜಿಲ್ಲೆಯಯವರೇ 25,000 ರೈತರಿದ್ದಾರೆ. ರಾಜ್ಯದಲ್ಲಿ ಬೆಳೆಯಿವ ಒಟ್ಟು ನಿಂಬೆ ಪ್ರದೇಶದ ಪೈಕಿ ವಿಜಯಪುರ ಜಿಲ್ಲೆ ಹೆಚ್ಚು ನಿಂಬೆ ಬೆಳೆಯೋ ಪ್ರದೇಶವಾಗಿದೆ. ರಾಜ್ಯದಲ್ಲಿ 21,000 ಹೆಕ್ಟೇರ್ ಪ್ರದೇಶದಲ್ಲಿ ನಿಂಬೆ ಬೆಳೆಯಲಾಗುತ್ತಿದ್ದರೆ, ಇದರಲ್ಲಿ ವಿಜಯಪುರ ಜಿಲ್ಲೆಯಲ್ಲೇ 16,000 ಹೆಕ್ಟೇರ್ ಪ್ರದೇಶದಲ್ಲಿ ನಿಂಬೆ ಬೆಳೆಯಿದೆ.

ಇಡೀ ರಾಜ್ಯದಲ್ಲಿ ನಿಂಬೆ ಬೇಡಿಕೆಗಿಂತ ಪೂರೈಕೆ ಕಡಿಮೆಯಿರೋ ಕಾರಣ ಬೆಲೆಯಲ್ಲಿ ಏರಿಕೆಯಾಗಿದೆ. ಜೊತೆಗೆ ಈ ಹಿಂದೆ ಹವಾಮಾನ ವೈಪ್ಯರಿತ್ಯ, ಅಕಾಲಿಕ ಮಳೆ ಹಾಗೂ ರೋಗಬಾಧೆಗೂ ನಿಂಬೆ ಈಡಾಗಿದ್ದ್ದರಿಂದ ಈಗಾ ಇಳುವರಿ ಕಡಿಮೆಯಾಗಿದೆ. ಈ ಭಾಗದಲ್ಲಿ ಬೆಳೆಯುವ ನಿಂಬೆಗೆ ಗುಜರಾತ್, ಮಹಾರಾಷ್ಟ್ರ ಹಾಗೂ ಇತರೆ ರಾಜ್ಯಗಳಲ್ಲಿ ಬೇಡಿಕೆ ಹೆಚ್ಚಾಗಿದೆ. ಬೇಸಿಗೆ ಕಾಲ ಆರಂಭವಾಗಿದ್ದು, ತಂಪು ಪಾನೀಯ ಹಾಗೂ ಆಹಾರದಲ್ಲಿ ಹೆಚ್ಚಾಗಿ ನಿಂಬೆಯನ್ನು ಬಳಕೆ ಮಾಡುತ್ತಿರೋದಕ್ಕೆ, ಬೇಡಿಕೆಯೂ ಹೆಚ್ಚಾಗಿದೆ. ಈ ಕಾರಣದಿಂದ ನಿಂಬೆಗೆ ಬೆಲೆ ಏರಿಕೆಯಾಗಿದೆ ಎಂದು ಖರೀದಿದಾರರಾದ ಬಸವರಾಜ ಮಾಳಿ ಹೇಳಿದ್ದಾರೆ.

ಒಟ್ಟಾರೆ ಸತತ ಎರಡು ವರ್ಷಗಳ ಬಳಿಕ ನಿಂಬೆ ಬೆಳೆಗಾರರಿಗೆ ನಿಂಬೆ ಹೆಚ್ಚಿನ ದರಕ್ಕೆ ಮಾರಾಟ ಆಗುತ್ತಿರೋದು ಅನಕೂಲವಾಗಿದೆ. ಇದೇ ರಿತಿ ಬೇಸಿಗೆ ಮುಗಿಯೋವರೆಗೂ ನಿಂಬೆಗೆ ಉತ್ತಮ ದರ ಇದ್ದರೆ ಕಳೆದ ಎರಡು ವರ್ಷಗಳಿಂದ ಆಗಿದ್ದ ಹಾನಿಯನ್ನು ಸರಿದೂಗಿಸಿಕೊಳ್ಳುತ್ತೇವೆಂದು ಹೇಳಿದ್ದಾರೆ. ವ್ಯಾಪಾರಸ್ಥರ ಹಾಗೂ ಮಧ್ಯವರ್ತಿಗಳ ಕಾರಣದಿಂದ ಮುಂದಿನ ದಿನಗಳಲ್ಲಿ ದರ ಕಡಿಮೆಯಾಗದಿದ್ದರೆ ಸಾಕೆಂದು ನಿಂಬೆ ಬೆಳೆಗಾರರು ಆತಂಕವನ್ನೂ ಕೂಡ ಈ ಸಂದರ್ಭದಲ್ಲಿ ಹೊರ ಹಾಕಿದ್ದಾರೆ.

ವರದಿ: ಅಶೋಕ ಯಡಳ್ಳಿ

Tomato Price: ಟೊಮೆಟೊ ಬೆಲೆ ಕುಸಿತ; ಬೆಳೆಗಾರರಿಗೆ ಸಿಗದಂತಾಯ್ತು ಕೆಜಿಗೆ 6 ರೂಪಾಯಿ, ರೈತರಲ್ಲಿ ಹೆಚ್ಚಿದ ಆತಂಕ

1000 ಕೋಟಿ ಬೆಳೆ ನಷ್ಟಕ್ಕೆ ಸರ್ಕಾರದಿಂದ ಬಂದಿದ್ದು ಬರೀ 36 ಕೋಟಿ ಪರಿಹಾರ; ಕಂಗಾಲಾದ ಮೆಣಸಿನಕಾಯಿ ಬೆಳೆಗಾರರು

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ