ಚಿತ್ರದುರ್ಗ: ಹಳೇ ವೈಷಮ್ಯ ಹಿನ್ನೆಲೆ ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದಲ್ಲಿ ಸಂಭವಿಸಿದೆ. ಯವಕರ ಗುಂಪೊಂದು ಬೈಕ್ನಲ್ಲಿ ಹಿಂಬಾಲಿಸಿ ಹಲ್ಲೆಗೈದಿದ್ದಾರೆ. ಈ ಘಟನೆ ಅ.15ರಂದು ನಡೆದಿದೆ. ಆಟೋ ಚಾಲಕ ಭೀಮಣ್ಣ ಮೇಲೆ ಅಜಯ್ ಮತ್ತು ತಂಡದ ವಿರುದ್ಧ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಸಿನಿಮೀಯ ರೀತಿಯಲ್ಲಿ ಯುವಕರು ಹಿಂಬಾಲಿಸಿ ಹಲ್ಲೆ ಮಾಡಿದ್ದಾರೆ. ಹಲ್ಲೆ ನಡೆದಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಗಾಯಗೊಂಡ ಭೀಮಣ್ಣ ಸದ್ಯ ಬಳ್ಳಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ನೀರಲ್ಲಿ ಮುಳುಗಿ ವ್ಯಕ್ತಿ ಸಾವು
ಹುಬ್ಬಳ್ಳಿ: ಮೀನು ಹಿಡಿಯಲು ಹೋಗಿದ್ದ ವ್ಯಕ್ತಿಯೊಬ್ಬರು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಹುಬ್ಬಳ್ಳಿ ತಾಲೂಕಿನ ಬೊಮ್ಮಸಮುದ್ರ ಕೆರೆಯಲ್ಲಿ ಈ ಘಟನೆ ನಡೆದಿದೆ. ನಿನ್ನೆ (ಅ.18) ಸಂಜೆ ಕೆರೆಯಲ್ಲಿ ಬಿದ್ದು ವ್ಯಕ್ತಿ ಮೃತಪಟ್ಟಿದ್ದಾರೆ. ವ್ಯಕ್ತಿಯ ಶವ ಕೆರೆಯಲ್ಲಿ ತೇಲುತ್ತಿತ್ತು. ಈ ಬಗ್ಗೆ ಗ್ರಾಮಸ್ಥರು ಹುಬ್ಬಳ್ಳಿಯ ಗ್ರಾಮೀಣ ಪೊಲೀಸರಿಗೆ ಮಾಹಿತಿ ನೀಡಿದರು. ಮೃತನ ವ್ಯಕ್ತಿಯ ಕುರಿತಂತೆ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ.
6 ವರ್ಷದ ಮಗು ಸಾವು
ದಾವಣಗೆರೆಯ ಸರಸ್ವತಿಪುರದಲ್ಲಿ ನೀರಿನ ತೊಟ್ಟಿಯಲ್ಲಿ ಮುಳುಗಿ 6 ವರ್ಷದ ಮಗು ಸಾವನ್ನಪ್ಪಿದೆ. ಮೃತ ಮಗು ಮೋಹಿತ್ ಎಂದು ತಿಳಿದುಬಂದಿದೆ. ಆಟವಾಡಲು ಹೋಗಿ ಮಗು ನೀರಿನ ತೊಟ್ಟಿಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಎಲ್ಐಸಿ ಅಧಿಕಾರಿ ಪ್ರಕಾಶ ಎಂಬುವರ ಪುತ್ರ ಮೋಹಿತ್ ಮೃತಪಟ್ಟಿದ್ದಾನೆ. ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ತೊಟ್ಟಿ ಮುಚ್ಚದೇ ಹಾಗೆ ಬಿಟ್ಟ ಹಿನ್ನೆಲೆ ದುರಂತ ಸಂಭವಿಸಿದೆ ಅಂತ ಆರೋಪಿದ ಸಂಬಂಧಿಕರು, ಕಟ್ಟಡ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಕೆಟಿಜೆ ನಗರ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ
ಪಾಕಿಸ್ತಾನದಿಂದ ನಮ್ಮ ಸೈನಿಕರು ಸತ್ತಿದ್ದಾರೆ, ನೀವು ಟಿ20 ಆಡುತ್ತೀರಾ?; ಪ್ರಧಾನಿ ಮೋದಿ ವಿರುದ್ಧ ಓವೈಸಿ ವಾಗ್ದಾಳಿ
ಶಿವಮೊಗ್ಗ ಕೃಷಿ ಕಾಲೇಜು ಉಪನ್ಯಾಸಕ ಶವ ಹೊನ್ನಾಳಿ ತಾಂಡಾ ಕೆರೆಯಲ್ಲಿ ಪತ್ತೆ; ಚಿಂತಾಮಣಿಯಲ್ಲಿ ಮೂವರು ಬಾಲಕರು ಕೆರೆಪಾಲು
Published On - 4:22 pm, Tue, 19 October 21