PSI ನೇಮಕಾತಿ ಅಕ್ರಮ: ಉತ್ತರ ಭಾರತಕ್ಕೆ ಪರಾರಿಯಾಗಿದ್ದ ಪಿಎಸ್​ಐನನ್ನು ಹಿಡಿದು ತಂದ ಸಿಐಡಿ

| Updated By: ರಮೇಶ್ ಬಿ. ಜವಳಗೇರಾ

Updated on: Oct 06, 2022 | 10:16 PM

ಇಬ್ಬರನ್ನು ಅಕ್ರಮವಾಗಿ ಪಿಎಸ್​ಐ ಆಗಲು ಸಹಾಯ ಮಾಡಿ ಉತ್ತರ ಭಾರತಕ್ಕೆ ಪರಾರಿಯಾಗಿದ್ದ ಹಾಲಿ ಪಿಎಸ್​ಐನನ್ನು ಸಿಐಡಿ ಬಂಧಿಸಿದೆ.

PSI ನೇಮಕಾತಿ ಅಕ್ರಮ: ಉತ್ತರ ಭಾರತಕ್ಕೆ ಪರಾರಿಯಾಗಿದ್ದ ಪಿಎಸ್​ಐನನ್ನು ಹಿಡಿದು ತಂದ ಸಿಐಡಿ
ಸಾಂಧರ್ಬಿಕ ಚಿತ್ರ
Follow us on

ಬೆಂಗಳೂರು: ಕರ್ನಾಟಕ ನಡೆದ 545 ಪಿಎಸ್​ಐ ನೇಮಕಾತಿ ಅಕ್ರಮ ತನಿಖೆಯನ್ನು (PSI Recruitment Scam )ಸಿಐಡಿ ಅಧಿಕಾರಿಗಳು ಚುರುಕುಗೊಳಡಿಸಿದ್ದು, ಅಕ್ರಮದ ಬ್ರಹ್ಮಾಂಡ ಬಗೆದಷ್ಟು ಬಯಲಿಗೆ ಬರ್ತಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮತ್ತೊಬ್ಬ ಆರೋಪಿಯನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಬೆಂಗಳೂರಿನ ಕೆ.ಆರ್.ಪುರಂ ಸಂಚಾರಿ ಠಾಣೆ ಪಿಎಸ್‌ಐ ಸುಬ್ರಮಣಿ ಎನ್ನುವರನ್ನು ಇಂದು(ಅ.06) ಅರೆಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ: PSI ಹಗರಣದ ನಿಜವಾದ ಕಿಂಗ್‍ಪಿನ್ ಮಾಜಿ ಸಿಎಂ ಮಗ: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಈ ಆರೋಪ

PSI ನೇಮಕಾತಿ ಅಕ್ರಮದಲ್ಲಿ ಮಧ್ಯವರ್ತಿಯಾಗಿದ್ದ ಸುಬ್ರಮಣಿ, ಅಕ್ರಮವಾಗಿ ಇಬ್ಬರು ಆಯ್ಕೆಯಾಗಲು ಸಹಾಯ ಮಾಡಿದ್ದರು. ಅಕ್ರಮ ಬಯಲಿಗೆ ಬಂದ ಬಳಿಕ ಉತ್ತರ ಭಾರತಕ್ಕೆ ಪರಾರಿಯಾಗಿದ್ದ ಎಂದು ತಿಳಿದುಬಂದಿದೆ.

ಬಂಧಿತ ಹಾಲಿ ಪಿಎಸ್​ಐ ಸುಬ್ರಮಣಿನನ್ನು ಸಿಐಡಿ ಅಧಿಕಾರಿಗಳು 2ನೇ ಎಸಿಎಂಎಂ ಕೋರ್ಟ್‌ಗೆ ಹಾಜರುಪಡಿಸಿದ್ದು, ಕೋರ್ಟ್ ಆರೋಪಿಗೆ 10 ದಿನ ಸಿಐಡಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.

ಈಗಾಗಲೇ ಈ ಪ್ರಕರಣದಲ್ಲಿ ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪೌಲ್ ಅವರನ್ನು ಸಹ ಸಿಐಡಿ ಅಧಿಕಾರಿಗಳು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಅಮೃತ್ ಪೌಲ್ ಮಾತ್ರವಲ್ಲದೇ ಹಲವು ಪೊಲೀಸ್ ಅಧಿಕಾರಿಗಳು ಸೇರಿದಂತೆ ಪಿಎಸ್​ಐ ಆಗಿದ್ದ ಆಯ್ಕೆಯಾಗಿದ್ದ ಅಭ್ಯರ್ಥಿಗಳನ್ನು ಸಿಐಡಿ ಅಧಿಕಾರಿಗಳು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.