CM BS Yediyurappa Speech LIVE: ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ವರೆಗೆ ಕೊರೊನಾ​ ಕರ್ಫ್ಯೂ

|

Updated on: Apr 08, 2021 | 9:39 PM

ಮುಖ್ಯಮಂತ್ರಿಗಳ ಜೊತೆಗೆ ಮೋದಿ ಮಾತನಾಡಿದ್ದನ್ನು ಇಡೀ ದೇಶ ಕೇಳಿಸಿಕೊಂಡಿತು. ಸಭೆ ಮುಕ್ತಾಯವಾದ ನಂತರ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

CM BS Yediyurappa Speech LIVE: ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ವರೆಗೆ ಕೊರೊನಾ​ ಕರ್ಫ್ಯೂ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಕೊರೊನಾ ಸೋಂಕು ಸ್ಥಿತಿಗತಿ ಅರಿಯಲು ಸಭೆ ನಡೆಸಿದರು. ಮುಖ್ಯಮಂತ್ರಿಗಳ ಜೊತೆಗೆ ಮೋದಿ ಮಾತನಾಡಿದ್ದನ್ನು ಇಡೀ ದೇಶ ಕೇಳಿಸಿಕೊಂಡಿತು. ಸಭೆ ಮುಕ್ತಾಯವಾದ ನಂತರ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ರಾಜ್ಯದಲ್ಲಿ ಸೋಂಕು ನಿಯಂತ್ರಣಕ್ಕೆ ತೆಗೆದುಕೊಂಡಿರುವ ಕ್ರಮಗಳನ್ನು ವಿವರಿಸುವ ಜೊತೆಗೆ ಮುಂದಿನ ಹೆಜ್ಜೆಯನ್ನೂ ಪ್ರಕಟಿಸುವ ಸಾಧ್ಯತೆಯಿದೆ.

 

LIVE NEWS & UPDATES

The liveblog has ended.
  • 08 Apr 2021 09:31 PM (IST)

    ಯಾವ ಜಿಲ್ಲೆಗಳಲ್ಲಿ ಕರ್ಫ್ಯೂ?

    ಬೆಂಗಳೂರು ನಗರ, ಮೈಸೂರು, ಉಡುಪಿ, ಮಣಿಪಾಲ, ತುಮಕೂರು, ಉತ್ತರ ಕನ್ನಡ, ಮಂಗಳೂರು, ಬೀದರ್, ಬಳ್ಳಾರಿ, ಕಲಬುರಗಿ ಜಿಲ್ಲೆಗಳಲ್ಲಿ ಕೊರೊನಾ ಕರ್ಫ್ಯೂ ಜಾರಿಗೆ ಬರಲಿದೆ.

  • 08 Apr 2021 09:13 PM (IST)

    ಬಸ್​ಗಳು ಓಡಾಡುತ್ವೆ, ಜನರು ಓಡಾಡಬಾರದು-ಬಿಎಸ್​​ವೈ

    ಬಸ್​ಗಳು ಓಡಾಡುತ್ವೆ. ಜನರು ಓಡಾಡಬಾರದು. ಇದು ಪ್ರಾಯೋಗಿಕವಾಗಿ ಜಾರಿ ಮಾಡ್ತಿರುವುದು. ಜನರು ಸಹಕರಿಸಬೇಕು. ಇಲ್ಲದಿದ್ದರೆ ಪರಿಸ್ಥಿತಿ ಗಂಭೀರವಾಗುತ್ತೆ. ನಾವು ಕಠಿಣವಾಗಬೇಕಾಗುತ್ತೆ. ಮಾಸ್ಕ್ ಧರಿಸಬೇಕು, ಅಂತರ ಕಾಪಾಡಬೇಕು, ದೊಡ್ಡ ಪ್ರಮಾನದಲ್ಲಿ ಸಭೆ ಸಮಾರಂಭ ಮಾಡಬಾರದು. ನಾನು ಮೋದಿ ಅವರ ಜೊತೆಗೆ ಮಾತನಾಡುವಾಗ ಕರ್ನಾಟಕದ ಪರಿಸ್ಥಿತಿಯನ್ನು ಸವಿಸ್ತಾರವಾಗಿ ತಿಳಿಸಿ, ಮನವರಿಕೆ ಮಾಡಿಕೊಟ್ಟೆ. ಇತರ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ಪರಿಸ್ಥಿತಿ ಉತ್ತಮ ಸ್ಥಿತಿಯಲ್ಲಿದೆ ಅಂತ ಹೇಳಿದ್ದೇನೆ

  • 08 Apr 2021 09:12 PM (IST)

    ನಾವು ಲಾಕ್​ಡೌನ್ ಮಾಡ್ತಿಲ್ಲ- ಯಡಿಯೂರಪ್ಪ

    ಈ ಜಿಲ್ಲೆಗಳಿಗೆ ನನ್ನ ಮನವಿ. ನಾವು ಲಾಕ್​ಡೌನ್ ಮಾಡ್ತಿಲ್ಲ. ಅಂಥದ್ದು ಆಗಬಾರದು ಅಂದ್ರೆ ಜನರು ಸಹಕರಿಸಬೇಕು. ಪ್ರಧಾನಿ ಕೊಟ್ಟ ಸಲಹೆಯನ್ನು ನಾವು ಅನುಷ್ಠಾನಕ್ಕೆ ತರ್ತಿದ್ದೀವಿ. ಮಾಸ್ಕ್ ಹಾಕದವರಿಗೆ 250 ದಂಡವನ್ನು ಬಿಗಿಮಾಡ್ತೀವಿ. ರಾಜ್ಯದ ಜನರು ಸಹಕಾರ ಕೊಟ್ರೆ ಇದು ಹರಡುವುದನ್ನು ತಪ್ಪಿಸಬಹುದು. ಇದು ಕಂಟ್ರೋಲ್​ಗೆ ಬರದಿದ್ರೆ ಇಡೀ ರಾಜ್ಯಕ್ಕೆ ವಿಸ್ತರಿಸಬೇಕಾಗುತ್ತೆ. ಕೊರೊನಾ ಕರ್ಫ್ಯೂ ಸಂದರ್ಭದಲ್ಲಿ ಎಲ್ಲ ಅಗತ್ಯ ಸೇವೆಗಳು ಇರುತ್ತವೆ.

  • 08 Apr 2021 09:10 PM (IST)

    ಲಸಿಕೆ ಉತ್ಸವ ಮಾಡಲು ವಿಶೇಷ ಗಮನ- ಬಿಎಸ್​ವೈ

    ಏಪ್ರಿಲ್ 11ರಂದು ಜ್ಯೋತಿ ಬಾ ಫುಲೆ ಜನ್ಮದಿನ. 14ಕ್ಕೆ ಅಂಬೇಡ್ಕರ್ ಜನ್ಮದಿನ. ಈ ದಿನಗಳಲ್ಲಿ ಲಸಿಕೆ ಉತ್ಸವ ಮಾಡಲು ವಿಶೇಷ ಗಮನ ಕೊಡ್ಥೀವಿ. ಬೀದರ್, ತುಮಕೂರು ನಗರದಲ್ಲೂ ಕೊರೊನಾ ಕರ್ಫ್ಯೂ ಎಂದ ಯಡಿಯೂರಪ್ಪ.

  • 08 Apr 2021 09:09 PM (IST)

    ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ವರೆಗೆ ಕೊರೊನಾ​ ಕರ್ಫ್ಯೂ- ಯಡಿಯೂರಪ್ಪ

    ಕೆಲವು ಜಿಲ್ಲೆಗಳಲ್ಲಿ ಶನಿವಾರ ರಾತ್ರಿ 10ರಿಂದ ಬೆಳಿಗ್ಗೆ 5ರವರೆಗೆ ಕೊರೊನಾ ಕರ್ಫ್ಯೂ ಮಾಡ್ತೀವಿ. ಬೆಂಗಳೂರು ನಗರ, ಮೈಸೂರು ನಗರ, ಮಂಗಳೂರು ನಗರ, ಕಲಬುರ್ಗಿ ನಗರ, ಉಡುಪಿ ಮತ್ತು ಮಣಿಪಾಲದಲ್ಲಿ ಕರ್ಫ್ಯೂ ಎಂದು ಯಡಿಯೂರಪ್ಪ ಘೋಷಣೆ.

Published On - 9:31 pm, Thu, 8 April 21

Follow us on