ಹಾಸನಾಂಬೆಗೆ ಪ್ರಾರ್ಥನೆ ಸಲ್ಲಿಸುವ ಮೊದಲು ದೇವಸ್ಥಾನದ ಇತಿಹಾಸವನ್ನು ಅರ್ಚಕರಿಂದ ಕೇಳಿ ತಿಳಿದುಕೊಂಡ ಸಿದ್ದರಾಮಯ್ಯ

|

Updated on: Nov 07, 2023 | 4:41 PM

ಹಾಸನಾಂಬೆಯಿಂದಾಗೇ ಊರಿಗೆ ಹಾಸನ ಅಂತ ಹೆಸರು ಬಂದಿದೆಯಾ ಎಂದು ಕೇಳಿದ ಸಿದ್ದರಾಮಯ್ಯ ಇದಕ್ಕೂ ಮೊದಲೊಮ್ಮೆ ದೇವಸ್ಥಾನಕ್ಕೆ ಭೇಟಿ ನೀಡಿದ ಸಂಗತಿಯನ್ನು ಹೇಳಿದಾಗ ಅರ್ಚಕರು, ಹೌದು ನೀವು ಬಂದು ಹೋಗಿದ್ದು ನೆನಪಿದೆ ಅನ್ನುತ್ತಾರೆ. ಅಂತಿಮವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಡಿನ ಎಲ್ಲ ಜನತೆಗೆ ಒಳ್ಳೆಯದಾಗಲಿ ಅಂತ ಹಾಸನಾಂಬೆಗೆ ಪ್ರಾರ್ಥನೆ ಸಲ್ಲಿಸುತ್ತಾರೆ.

ಹಾಸನ: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah); ಅರಸೀಕೆರೆ ಶಾಸಕ ಕೆಎಂ ಶಿವಲಿಂಗೇಗೌಡ ಹಾಗೂ (KM Shivalinge Gowda) ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆಎನ್ ರಾಜಣ್ಣ (KN Rajanna) ಅವರೊಂದಿಗೆ ಹಾಸನಾಂಬೆಯ ದರ್ಶನ ಪಡೆದರು ಮತ್ತು ಪ್ರತಿವರ್ಷ ನಡೆಯುವ ಉತ್ಸವಕ್ಕೆ ಸಂಬಂಧಿಸಿದ ಇತಿಹಾಸವನ್ನು ದೇವಸ್ಥಾನದ ಅರ್ಚಕರಿಂದ ಕೇಳಿ ತಿಳಿದುಕೊಂಡರು. ಹಾಸನಾಂಬೆಯ ಇತಿಹಾಸವನ್ನು ಬಹಳ ವೇಗವಾಗಿ ವಿವರಿಸುವ ಅರ್ಚಕರು ಕೃಷ್ಣಪ್ಪ ನಾಯಕನ ಕಾಲದಲ್ಲಿ ಅಸ್ತಿತ್ವಕ್ಕೆ ಬಂದ ದೇವಸ್ಥಾನಕ್ಕೆ 1,300 ವರ್ಷಗಳ ಇತಿಹಾಸವಿದೆ ಎಂದು ಹೇಳಿದರು. ದೇವಸ್ಥಾನವು 16 ಸ್ತಂಭಗಳ ಗರ್ಭಗುಡಿ ಹೊಂದಿದೆ ಮತ್ತು ವರ್ಷಕ್ಕೊಮ್ಮೆ ದೇವಸ್ಥಾನದ ದ್ವಾರ ತೆರೆದಾಗ ಪಕ್ಕದ ಸಿದ್ದೇಶ್ವರದಲ್ಲಿ ಜಾತ್ರೆ ನಡೆಯುತ್ತದೆ ಎಂದು ಹೇಳಿದ ಅರ್ಚಕರು, ಆರಂಭದಲ್ಲಿ ದೇವತೆಯನ್ನು ಸಿಂಹಾಸನೇಶ್ವರಿ ಅಂತ ಕರೆಯಲಾಗುತಿತ್ತು ನಂತರದ ದಿನಗಳಲ್ಲಿ ಸಿಂಹಾಸನಪುರಿಯಾಗಿ ಈಗ ಹಾಸನಾಂಬೆ ಅಗಿದೆ ಅಂದರು. ಹಾಸನಾಂಬೆಯಿಂದಾಗೇ ಊರಿಗೆ ಹಾಸನ ಅಂತ ಹೆಸರು ಬಂದಿದೆಯಾ ಎಂದು ಕೇಳಿದ ಸಿದ್ದರಾಮಯ್ಯ ಇದಕ್ಕೂ ಮೊದಲೊಮ್ಮೆ ದೇವಸ್ಥಾನಕ್ಕೆ ಭೇಟಿ ನೀಡಿದ ಸಂಗತಿಯನ್ನು ಹೇಳಿದಾಗ ಅರ್ಚಕರು, ಹೌದು ನೀವು ಬಂದು ಹೋಗಿದ್ದು ನೆನಪಿದೆ ಅನ್ನುತ್ತಾರೆ. ಅಂತಿಮವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಡಿನ ಎಲ್ಲ ಜನತೆಗೆ ಒಳ್ಳೆಯದಾಗಲಿ ಅಂತ ಹಾಸನಾಂಬೆಗೆ ಪ್ರಾರ್ಥನೆ ಸಲ್ಲಿಸುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ